ಹೆಗ್ಗಡದೇವನಕೋಟೆ ತಾಲ್ಲೂಕಿನ ಪುರ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಬಸವೇಶ್ವರ ಪಟ್ಟದ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕಪ್ರಚಲಿತದಲ್ಲಿದೆ. 1986ರ ಮಾರ್ಚ್ 27ರಲ್ಲಿ ಈಗ ಮಠ ಇರುವ ಸ್ಥಳದಲ್ಲಿ ಊರಿನಗ್ರಾಮಸ್ಥರು “ಶ್ರೀ ಬಸವೇಶ್ವರ ಭಜನ ಮಂದಿರ” ಎಂದು ನಾಮಕರಣ ಮಾಡಿಕೊಂಡಭಜನಾ ಮಂದಿರವನ್ನು ಸ್ಥಾಪಿಸಿ ಇಲ್ಲಿ ಭಜನೆಗಳನ್ನು ಮಾಡಿಕೊಂಡು ಬರುತ್ತಿದ್ದರು.ಶ್ರೀ ಬಸವೇಶ್ವರ ಭಜನಾ ಮಂದಿರವು ಕ್ರಮೇಣ ಶ್ರೀ ದಾಸೋಹ ಮಠವಾಗಿಮಾರ್ಪಾಡುಗೊಂಡಿದ್ದು ಶ್ರೀ ಚಂದ್ರಶೇಖರ ಸ್ವಾಮಿಗಳು ಇಲ್ಲಿ ನೆˉÉನಿಂತು ಕಂತೆ ಭಿಕ್ಷೆಮಾಡಿಕೊಂಡು ಆಚರಣೆಗಳನ್ನು, ಭಜನೆಗಳನ್ನು ಮುಂದುವರೆಸಿಕೊಂಡು ಬಂದರು.ತದನಂತರ ಊರಿನ ಗ್ರಾಮಸ್ಥರೇ ಶ್ರೀ ಚಂದ್ರಶೇಖರ ಸ್ವಾಮಿಗಳಿಗೆ ಇಲ್ಲಿ ಪಟ್ಟಾಧಿಕಾರಮಾಡಿದರು. 2010ರಲ್ಲಿ ಊರಿನ ಸಮಸ್ತ ಗ್ರಾಮಸ್ಥರ ನೆರವಿನಿಂದ ಈಗಿರುವ ಮಠವನ್ನುಜೀರ್ಣೋದ್ಧಾರ ಮಾಡಿದ ಶ್ರೀ ಚಂದ್ರಶೇಖರ ಸ್ವಾಮಿಗಳು ನಂತರದಲ್ಲಿ 2011ರ ಮಾರ್ಚ್25ರಂದು ಶ್ರೀ ಬಸವೇಶ್ವರ ಪಟ್ಟದ ಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀ ಷ.ಬ್ರ. ಚಂದ್ರಶೇಖರ ಸ್ವಾಮಿಗಳು ಕ್ರಿಯಾಶೀಲರಾಗಿದ್ದು ಶ್ರೀಮಠದಲ್ಲಿನಿರಂತರವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಮಾರ್ಚ್ 23, 24ರಲ್ಲಿ ಶ್ರೀಮಠದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡುಬರುತ್ತಿದ್ದಾರೆ ಹಾಗೂ ಪ್ರತಿ ವರ್ಷ ಬಸವ ಜಯಂತಿ ಮತ್ತು ಗಣೇಶನ ಹಬ್ಬಗಳನ್ನು ಸಮಸ್ತಗ್ರಾಮಸ್ಥರ ನೆರವಿನೊಂದಿಗೆ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಸ್ವಾಮಿಗಳು
Date of Birth :
25-10-1975
Place :
ಪುರ, ಹೆಚ್.ಡಿ.ಕೋಟೆ ತಾ||
Pattadikara :
25-03-2011
Photo :
Programs
ಪ್ರತಿ ತಿಂಗಳು ಹುಣ್ಣಿಮೆಗೆ “ಶಿವಾನುಭವ ಸಮ್ಮೇಳನ” ಕಾರ್ಯಕ್ರಮ ನಡೆಯುತ್ತದೆ
ಕಾರ್ತೀಕ ಮಾಸದ ಸೋಮವಾರದಂದು ವಿಶೇಷ ಪೂಜೆ & ದೀಪೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪ್ರವಚನ
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆಗಳು
Photos
Full Address Kannada
ಶ್ರೀ ಬಸವೇಶ್ವರ ಪಟ್ಟದ ಮಠ
ಪುರ, ಅಂಬಾಪುರ ಪೋಸ್ಟ್
ಹೆಚ್.ಡಿ.ಕೋಟೆ ತಾ||, ಮೈಸೂರು ಜಿಲ್ಲೆ