ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಕ್ಕುಂಡಿ ಗ್ರಾಮದಲ್ಲಿಸ್ಥಾಪಿತಗೊಂಡಿರುವ ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಭಕ್ತರಿಗೆ ಸನ್ಮಾರ್ಗ ತೋರುತ್ತಿದೆ. ಶ್ರೀಮಠವು ಸುಮಾರು 12ನೇ ಶತಮಾನದಲ್ಲೇ ಕಲ್ಯಾಣದಶರಣರು ಉಳವಿಗೆ ಹೋಗುವಾಗ ಇಲ್ಲಿ ನೆಲೆನಿಂತು ಧರ್ಮೋಪದೇಶ ಕಾರ್ಯ ಕೈಗೊಂಡುಸ್ಥಾಪಿಸಿದರು ಎನ್ನಲಾಗಿದೆ.ಶ್ರೀಮಠದ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದರೂ ಈಗ್ಗೆಮೂರು ತಲೆಮಾರುಗಳ ಗುರುಗಳ ಬಗ್ಗೆ ತಿಳಿದುಬರುತ್ತದೆ ಹಾಗೂ ಶ್ರೀಮಠದಲ್ಲಿ ಈವರೆಗೂ14 ಜನ ಪೀಠಾಧಿಪತಿಗಳಾಗಿ ಅಧಿಕಾರ ನಡೆದಿದ್ದು ಶ್ರೀಮಠದ ಸರ್ವಾಂಗೀಣ ಅಭ್ಯುದಯಕ್ಕೆಶ್ರಮವಹಿಸಿದ್ದಾರೆ. ಪರಂಪರೆಯ ಗುರುಗಳಲ್ಲಿ ಒಬ್ಬರಾದ ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರಮಹಾಸ್ವಾಮಿಗಳು ತಮ್ಮ ಅನುಷ್ಠಾನಬಲದಿಂದ ಶ್ರೀಮಠವನ್ನು ಬೆಳೆಸಿದ್ದು ನಂತರದಲ್ಲಿಬಂದಿರುವ ಶ್ರೀ ಮ.ನಿ.ಪ್ರ. ಮುರುಘೇಂದ್ರ ಶಿವಯೋಗಿಗಳು ಪ್ರಸಿದ್ದರಾಗಿದ್ದಾರೆ. ಶ್ರೀಗಳಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರ ಧರ್ಮೋಪದೇಶಗಳಿಗೆಮನಸೋತ ಜನರು ಶ್ರೀಮಠದ ಭಕ್ತರಾಗಿ ಮಠವನ್ನು ಅಭಿವೃದ್ದಿಗೊಳಿಸಲುಕಾರಣರಾಗಿದ್ದಾರೆ.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮಿಗಳು ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಪಂಚಾಕ್ಷರ ಮಹಾಸ್ವಾಮಿಗಳನ್ನು 1993ರಲ್ಲಿ ತಮ್ಮಉತ್ತರಾಧಿಕಾರಿಗಳನ್ನಾಗಿ ಪೀಠಕ್ಕೆ ತಂದಿದ್ದು ಪ್ರಸ್ತುತ ಶ್ರೀಗಳು ಹಿರಿಯ ಗುರುಗಳು ಹಾಕಿಕೊಟ್ಟದಿವ್ಯ ಮಾರ್ಗದಲ್ಲಿ ಮುನ್ನಡೆದು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನಲ್ಲದೇಶೈಕ್ಷಣಿಕವಾಗಿ ಪ್ರಾಥಮಿಕ ಶಾಲೆ, ಅಂಧ ಮಕ್ಕಳ ಶಾಲೆ, ಅನಾಥ ಮಕ್ಕಳ ನಿಲಯ, ಉಚಿತಪ್ರಸಾದ ನಿಲಯಗಳಂತಹ ಇನ್ನೂ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದು ಈ ಭಾಗದ ಮಕ್ಕಳಿಗೆನೆರವಾಗಿದ್ದಾರೆ ಹಾಗೂ ವೃದ್ಧಾಶ್ರಮ ಹಿರಿಯ ನಾಗರೀಕರ ಹಗಲು ಯೋಗಕ್ಷೇಮಕೇಂದ್ರಗಳನ್ನು ತೆರೆಯುವ ಮೂಲಕ ವೃದ್ದರಿಗೆ ನೆರವು ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪಂಚಾಕ್ಷರ ಮಹಾಸ್ವಾಮಿಗಳು
Date of Birth :
21-02-1963
Place :
ಉರುಬಿನಹಟ್ಟಿ, ಗೋಕಾಕ್ ತಾ||
Pattadikara :
1993
Photo :
Programs
ಪ್ರತಿ ಅಮವಾಸೆಗೆ ಶಿವಾನುಭವ ಗೋಷ್ಠಿ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ರುದ್ರಾಭಿಷೇಕ
ಯುಗಾದಿಯಂದು ಲಿಂ|| ಶ್ರೀ ಮ.ನಿ.ಪ್ರ. ಮುರುಘೇಂದ್ರ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ಶ್ರೀಮಠದ ಜಾತ್ರೆ
Photos
Full Address Kannada
ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತ ಮಠ
ಯಕ್ಕುಂಡಿ - 591 111
ಸವದತ್ತಿ ತಾ||, ಬೆಳಗಾವಿ ಜಿಲ್ಲೆ