ಬೆಳಗಾವಿ ಜಿಲ್ಲೆಯ ಸವದತ್ತಿಯು ಸಮೀಪದ ಯಲ್ಲಮ್ಮನ ಗುಡ್ಡದಮಹಿಮೆಯಿಂದಾಗಿ ದೇಶದಾದ್ಯಂತ ಪ್ರಸಿದ್ದವಾದ ಧಾರ್ಮಿಕ ಕೇಂದ್ರವಾಗಿದ್ದು ಅಸಂಖ್ಯಾತಭಕ್ತರು ಪ್ರತಿದಿನ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಪುಣ್ಯಕ್ಷೇತ್ರವಾದಸವದತ್ತಿಯಲ್ಲಿ ಸುಮಾರು 170 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಬೆಟಸೂರಹಿರೇಮಠವು ತನ್ನ ಕರ್ತೃತ್ವ ಶಕ್ತಿಯಿಂದಾಗಿ ಪ್ರಚಲಿತದಲ್ಲಿದೆ.ಈ ಮೊದಲು ಶ್ರೀಮಠವು ಬೆಟಸೂರಿನಲ್ಲಿತ್ತೆಂದು ಆ ನಂತರ ಸವದತ್ತಿಗೆಸ್ಥಳಾಂತರಗೊಂಡಿದೆಯೆಂದು ಹೇಳಲಾಗುತ್ತಿದೆ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳುಕಾರಣಾಂತರಗಳಿಂದ ಶ್ರೀಮಠವನ್ನು ಸವದತ್ತಿಗೆ ಸ್ಥಳಾಂತರಿಸಿ ಶ್ರೀಮಠದ ಸ್ಥಾಪನೆಗೆಕಾರಣರಾದರು. ಶ್ರೀಗಳು ತಪೋನಿಷ್ಠರಾಗಿದ್ದು ಆಯುರ್ವೇದ ಪದ್ದತಿಯಲ್ಲಿ ಪಾಂಡಿತ್ಯಹೊಂದಿದ್ದವರು ಹಾಗೂ ತಮ್ಮ ಧರ್ಮೋಪದೇಶಗಳು ಹಾಗೂ ಅನ್ನದಾಸೋಹಗಳಿಂದಾಗಿಶ್ರೀಮಠವನ್ನು ಬಹುಬೇಗನೇ ಪ್ರಸಿದ್ದಿಗೆ ತಂದರು.ಕರ್ತೃಗುರುಗಳ ನಂತರದಲ್ಲಿ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಅಧಿಕಾರವಹಿಸಿಕೊಂಡಿದ್ದು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಮೂಲಕ ಅಜರಾಮರರಾಗಿದ್ದಾರೆ. ತಮ್ಮ ಧಾರ್ಮಿಕ ಆಚರಣೆಗಳ ಮೂಲಕ, ಧರ್ಮದಮೇಲಿನ ಕಾಳಜಿಯಿಂದಾಗಿ ಪಂಚಪೀಠಗಳ ಜಗದ್ಗುರುಗಳಿಗೆ ಪ್ರೀತಿಪಾತ್ರರಾಗಿದ್ದರು. ಇವರುಕನ್ನಡಕ್ಕೆ ಸ್ಕಂದಪುರಾಣವನ್ನು ಭಾಷಾಂತರಿಸಿದ್ದಲ್ಲದೇ ಇನ್ನು ಅನೇಕ ಕೃತಿಗಳನ್ನುಹೊರತಂದಿದ್ದಾರೆ.ಈಗ್ಗೆ ಬಹುಕಾಲದಿಂದ ಶ್ರೀಮಠವು ಖಾಲಿ ಉಳಿದಿದ್ದು ಪ್ರಸ್ತುತ ಪೂಜ್ಯ ಶ್ರೀರುದ್ರಯ್ಯ ಗುರುಸಿದ್ದಯ್ಯ ಹಿರೇಮಠರವರು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿರುವಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಕಾರ್ತೀಕ ಮಾಸದಲ್ಲಿ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ, ನಿತ್ಯಪುರಾಣ ಪ್ರವಚನಗಳು ಮುಂತಾದ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಪೂಜ್ಯ ಶ್ರೀ ರುದ್ರಯ್ಯ ಗುರುಸಿದ್ಧಯ್ಯ ಹಿರೇಮಠ
Date of Birth :
12-11-1948
Place :
ಸವದತ್ತಿ, ಬೆಳಗಾವಿ ಜಿ||
Photo :
Programs
ಕಾರ್ತೀಕ ಶುದ್ಧ ಪಂಚಮಿಯಿಂದ ನವಮಿಯವರೆಗೆ ಲಿಂ|| ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ನಿತ್ಯ ಪುರಾಣ ಪ್ರವಚನ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
Photos
Full Address Kannada
ಹಿರೇಮಠ ಶ್ರೀ ಬೆಟಸೂರ
ಹಿರೇಮಠ ಸವದತ್ತಿ - 591 126
ಸವದತ್ತಿ ತಾ||, ಬೆಳಗಾವಿ ಜಿಲ್ಲೆ