ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಸೌಳುಭಾವಿ ಓಣಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀಸ್ವಾಧಿ ಮಠವು ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳ ಕಾಲದಲ್ಲಿ ಸೋದೆಯ ಅರಸರುಸ್ಥಾಪನೆ ಮಾಡಿರುವುದಾಗಿದ್ದು ನಿತ್ಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದಲ್ಲಿ ಪ್ರಸಿದ್ದಿ ಪಡೆದಿದೆ.ಶ್ರೀ ಮಹಾಂತ ಮಹಾಸ್ವಾಮಿಗಳು ಸೋದೆ ಅರಸರ ನೆರವಿನಿಂದ ಶ್ರೀಮಠವನ್ನುಸ್ಥಾಪಿಸಿ ತಮ್ಮ ಧರ್ಮೋಪದೇಶಗಳಿಂದ, ಅನ್ನದಾಸೋಹದ ಮೂಲಕ ಭಕ್ತರನ್ನುಸಂಪಾದಿಸಿಕೊಂಡು ಅವರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮಠವನ್ನುಮುನ್ನಡೆಸಿದ್ದಾರೆ. ಆದರೆ ಕರ್ತೃಗುರುಗಳ ನಂತರದ ಗುರು ಪರಂಪರೆಯ ಬಗ್ಗೆ ನಿಖರವಾದಮಾಹಿತಿ ಸಿಗುವುದಿಲ್ಲ. ಸುಮಾರು 200 ವರ್ಷಗಳ ಹಿಂದೆ ಸಿರಸಂಗಿಯ ಲಿಂಗರಾಜರಕಾಲದಲ್ಲಿ ಶ್ರೀಮಠವು ಈಗಿರುವ ಸ್ಥಳಕ್ಕೆ ಸ್ಥಳಾಂತರಗೊಂಡಿರಬಹುದೆಂದು ಹೇಳಲಾಗಿದೆ.ಹೀಗೆ ರಾಜಾಶ್ರಯದಲ್ಲಿ ಬೆಳೆದ ಶ್ರೀಮಠವು ಕಾಲಾನಂತರ ಕೆಲ ಕಾಲ ಖಾಲಿಉಳಿದಿರುವುದರಿಂದ ಮಠದ ಇತಿಹಾಸದ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ.ಶ್ರೀಮಠವು ಹೀಗೆ ಬಹುಕಾಲ ಖಾಲಿ ಉಳಿದಿರುವುದನ್ನು ಮನಗಂಡ ಹಾನಗಲ್ಲುವಿರಕ್ತಮಠದ ಲಿಂ. ಶ್ರೀ ಸದಾಶಿವ ಮಹಾಸ್ವಾಮಿಗಳು ಶ್ರೀ ಶಿವಬಸವ ಮಹಾಸ್ವಾಮಿಗಳನ್ನುಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿ ಅಧಿಕಾರ ನೀಡಿದರು. ಶ್ರೀಗಳು ಅಧಿಕಾರವಹಿಸಿಕೊಂಡ ನಂತರ ಶ್ರೀಮಠದ ಕಟ್ಟಡವನ್ನು ಜೀರ್ಣಾಭಿವೃದ್ದಿಗೊಳಿಸಿ ನಿತ್ಯ ಧಾರ್ಮಿಕಆಚರಣೆಗಳು ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಿದರು ಎಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು 1984ರ ಜೂನ್15ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಶ್ರೀಗಳುಸಾಹಿತ್ಯಾಭಿಮಾನಿಗಳಾಗಿದ್ದು ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ ಹಾಗೂ ಶ್ರೀಮಠದಗೋಡೆಗಳ ಮೇಲೆ ಚಿತ್ರಿಸಿರುವ ಶರಣರ ವಚನಗಳು, ಸಿರಸಿಂಗಿ ಲಿಂಗರಾಜರ ಜೀವನದಕೆಲವು ಸನ್ನಿವೇಶಗಳು ಮನಸೂರೆಗೊಳ್ಳುತ್ತವೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಶ್ರೀ ಹಿರಿಯಗುರುಗಳಪುಣ್ಯಾರಾಧನೆಗಳನ್ನು ನಡೆಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು
Date of Birth :
01-06-1956
Place :
ಕುದುರಿ ಸಲವಾಡಿಗಿ, ಬಸವನ ಬಾಗೇವಾಡಿ ತಾ||
Pattadikara :
15-06-1984
Photo :
Programs
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ, ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಸ್ವಾದಿ ಮಠ ಸೌಳುಭಾವಿ ಓಣಿ,
ಸವದತ್ತಿ - 591 126
ಸವದತ್ತಿ ತಾ||, ಬೆಳಗಾವಿ ಜಿಲ್ಲೆ