ಬೆಳಗಾವಿ ಜಿಲ್ಲೆಯ ಮುರುಗೋಡು ಪಟ್ಟಣವು ಅನಾದಿ ಕಾಲದಿಂದಲೂವೀರಶೈವ ಧರ್ಮದ ಪ್ರಬಲ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದ್ದು ಈ ಪಟ್ಟಣದಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಮಹಾಂತ ದುರುದುಂಡೇಶ್ವರಮಠವು ಮೊದಲು ಅರಭಾವಿ ಶ್ರೀ ದುರುದುಂಡೇಶ್ವರ ಮಠದ ಅಧೀನ ಮಠವಾಗಿ ಬೆಳೆದುಕಳೆದ ಶತಮಾನದಿಂದೀಚೆಗೆ ಸ್ವತಂತ್ರ್ಯ ಮಠವಾಗಿ ರೂಪುಗೊಂಡಿತು.ಪೂಜ್ಯ ಶ್ರೀ ದುರುದುಂಡೇಶ್ವರ ಮಹಾಸ್ವಾಮಿಗಳು ಕರ್ನಾಟಕದ ಧಾರ್ಮಿಕಇತಿಹಾಸದಲ್ಲಿನ ಪ್ರಮುಖರು. ಶ್ರೀಗಳು ಸದಾ ಸಂಚಾರಿಗಳಾಗಿಲೋಕೋದ್ದಾರಕರಾಗಿದ ್ದವರು. ಇಂತಹ ತಪೋನಿಷ ್ಠರೂ, ಶಿವಶರಣರುಲೋಕಸಂಚಾರದಲ್ಲಿದ್ದ ಸಮಯದಲ್ಲಿ ಮುರುಗೋಡಕ್ಕೆ ಆಗಮಿಸಿ ಕೆಲಕಾಲ ನೆಲೆನಿಂತುಅನುಷ್ಠಾನ ಕೈಗೊಂಡರು. ತಮ್ಮ ಧರ್ಮೋಪದೇಶಗಳ ಮೂಲಕ ಇಲ್ಲಿನ ಜನರಲ್ಲಿ ಧಾರ್ಮಿಕಅರಿವನ್ನು ಮೂಡಿಸಿ ಮತ್ತೆ ಸಂಚಾರ ಹೊರಟು ಕೊನೆಯಲ್ಲಿ ಅರಭಾವಿಯಲ್ಲಿ ನೆಲೆನಿಂತರು.ಹೀಗೆ ಪೂಜ್ಯ ಶ್ರೀ ದುರುದುಂಡೇಶ್ವರ ಮಹಾಸ್ವಾಮಿಗಳಿಂದ ಜಾಗೃತಗೊಂಡ ಸ್ಥಳದಲ್ಲಿ ಮಠಸ್ಥಾಪನೆಗೊಂಡು ಅರಭಾವಿ ಮಠದ ಅಧೀನ ಮಠವಾಗಿ ಬೆಳೆದುಬಂದಿತು.ಗೋಕಾಕ್ ತಾಲ್ಲೂಕಿನಲ್ಲಿರುವ ಅರಭಾವಿಯಲ್ಲಿ ಶ್ರೀ ದುರುದುಂಡೇಶ್ವರರುಸ್ಥಾಪಿಸಿರುವ ಶ್ರೀ ದುರುದುಂಡೇಶ್ವರ ಮಠವು ಈ ಭಾಗದಲ್ಲಿ ಬರುವ ಪ್ರಮುಖಮಠಗಳಲ್ಲೊಂದು. ಅಲ್ಲಿ ಕರ್ತೃಗುರುಗಳ ನಂತರ ಅನೇಕ ಮಹಾಮಹಿಮ ಶಿವಶರಣರುಅಧಿಕಾರ ನಡೆಸಿದ್ದು ಭಕ್ತರನ್ನುದ್ದರಿಸಿದರು. ಹೀಗೆ 8 ಪೀಠಾಧಿಪತಿಗಳ ನಂತರ ಶ್ರೀಮಠದಅಧಿಕಾರ ವಹಿಸಿಕೊಂಡವರೇ ಶ್ರೀ. ಮ.ನಿ.ಪ್ರ.ಸ್ವ ಮಹಾಂತ ಶಿವಯೋಗಿಗಳು.ಶ್ರೀ ಮಹಾಂತ ಶಿವಯೋಗಿಗಳು ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ1869ರಲ್ಲಿ ಜನಿಸಿದ್ದು ಬಾಲ್ಯದಿಂದಲೂ ಆಧ್ಯಾತ್ಮಿಕತೆಯ ಒಲವು ಹೊಂದಿದ್ದವರು. ಅರಭಾವಿಮಠದ ಎಂಟನೇ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಕೃಪಾಕಟಾಕ್ಷಕ್ಕೆಒಳಗಾದ ಶ್ರೀಗಳು ಅವರ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಅರಭಾವಿ ಮಠದಒಂಬತ್ತನೇ ಪೀಠಾಧಿಪತಿಗಳಾಗಿ 1911ರಲ್ಲಿ ಅಧಿಕಾರ ವಹಿಸಿಕೊಂಡರು.ಶ್ರೀ ಮ.ನಿ.ಪ್ರ.ಸ್ವ. ಮಹಾಂತ ಶಿವಯೋಗಿಗಳು ಅರಭಾವಿ ಮಠದಪೀಠಾಧಿಪತಿಗಳಾಗಿ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದರೂ ಅವರ ನೆಚ್ಚಿನಮಠವಾಗಿ ಅರಭಾವಿಯ ಅಧೀನ ಮಠವಾಗಿದ್ದ ಮುರುಗೋಡಿನ ಶ್ರೀಮಠವು ಉಳಿದಿತ್ತು.ಆದ್ದರಿಂದ ಶ್ರೀಗಳು ಅರಭಾವಿ ಮಠಕ್ಕೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಶಿವಾನಂದಮಹಾಸ್ವಾಮಿಗಳನ್ನು ನೇಮಿಸಿ 1927ರಿಂದ ಮುರುಗೋಡಿನಲ್ಲೇ ನೆಲೆನಿಂತು ಶ್ರೀಮಠವನ್ನುಸ್ವತಂತ್ರ್ಯ ಮಠವಾಗಿ ಘೋಷಿಸಿದರು.ಶ್ರೀ ಮ.ನಿ.ಪ್ರ.ಸ್ವ. ಮಹಾಂತ ಶಿವಯೋಗಿಗಳು ಇಲ್ಲಿ ಬಂದು ನೆಲೆನಿಂತುಶಿವಪೂಜಾ ನಿಷ್ಠೆಯಿಂದ, ತಮ್ಮ ಧಾರ್ಮಿಕ ಆಚರಣೆಗಳ ಮೂಲಕ, ಸಾಮಾಜಿಕ197198ಕಾರ್ಯಕ್ರಮಗಳಿಂದ ಇಲ್ಲಿನ ಜನರಲ್ಲಿ ಆತ್ಮವಿಶ್ವಾಸ ತುಂಬಿ ಸೂಕ್ತ ಮಾರ್ಗದರ್ಶನನೀಡಿದರು. ತಮ್ಮ ಪ್ರಗತಿಪರ ಧೋರಣೆಗಳಿಂದ ಶ್ರೀಮಠವನ್ನು ಮುನ್ನಡೆಸಿದ ಶ್ರೀಗಳುಭಕ್ತರಲ್ಲಿನ ಮೌಢ್ಯವನ್ನು ಹೊಡೆದೋಡಿಸುವ ಕಾರ್ಯ ಮಾಡಿದರು. ಗುರುಗಳು ಬಂದುಇಲ್ಲಿ ನೆಲೆಗೊಂಡಾಗ ಮೊದಲು ಕರಿಹೆಂಚಿನ ಚಿಕ್ಕದಾದ ಮಠವಿತ್ತು. ನಂತರದಲ್ಲಿ ಭಕ್ತರುಗುರುಗಳ ಆಶೀರ್ವಾದದೊಂದಿಗೆ ಎರಡಂತಸ್ತಿನ ಬೃಹತ್ ಕಟ್ಟಡವನ್ನು ನಿರ್ಮಿಸಿದರುಹಾಗೂ 1969ರಲ್ಲಿ ಗುರುಗಳ ಶತಮಾನೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದಭಕ್ತರು ಅದರ ಸ್ಮರಣಾರ್ಥ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಬಸವಪೀಠವನ್ನು ಸ್ಥಾಪಿಸಿಬಸವತತ್ವದ ಬಗ್ಗೆ ಅಧ್ಯಯನ ನಡೆಸಲು ದತ್ತಿನಿಧಿಯನ್ನು ಸ್ಥಾಪಿಸಲಾಯಿತು.ಹೀಗೆ ¨s Àಕ ್ತರನ್ನುದ್ದರಿಸಿದ ಶ್ರೀಗಳು ಶ್ರೀ ಮ.ನಿ.ಪ್ರ.ಸ ್ವ. ನೀಲಕಂಠಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ 1972ರ ಫೆಬ್ರವರಿ 22ರಲ್ಲಿಲಿಂಗೈಕ್ಯರಾದರು. ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ಶ್ರೀ ನೀಲಕಂಠ ಮಹಾಸ್ವಾಮಿಗಳುಶಿವಯೋಗ ಮಂದಿರದ ಸಾಧಕರು. ತದನಂತರ ಕಾಶಿಯ ಬನಾರಸ್ ಹಿಂದೂವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತ ಎಂ.ಎ. ಪದವಿ ಪಡೆದವರು. ಅಲ್ಲಿಂದ ಹಿಂದಿರುಗಿದ ತಕ್ಷಣಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶ್ರೀಗಳು ಗುರುಗಳ ತರುವಾಯ 1972ರಆಗಸ್ಟ್ 24ರಂದು ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಗುರುಗಳ ಹಾದಿಯಲ್ಲಿ ಭಕ್ತರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಅವರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಾ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ಧಾರ್ಮಿಕವಾಗಿ ಅಲ್ಲದೇಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿಯೂ ಕಾರ್ಯತತ್ಪರರು. ಶ್ರೀಮಠದಲ್ಲಿ ಹಲವಾರು ಶಾಲಾಕಾಲೇಜುಗಳನ್ನು ಸ್ಥಾಪಿಸಿರುವ ಶ್ರೀಗಳು ಬಡ ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ತಾವೇಬರಿಸುತ್ತಾರೆ ಹಾಗೂ ಶ್ರೀ ಮಹಾಂತ ಶಿವಯೋಗಿಗಳ 25ನೇ ಪುಣ್ಯ ಸ್ಮರಣಾರ್ಥ 1999ರಲ್ಲಿಇಪ್ಪತ್ತೈದು ಧಾರ್ಮಿಕ ಪುಸ್ತಕಗಳನ್ನು ಪ್ರಕಟಿಸಿ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.ಶ್ರೀಮಠದಲ್ಲಿ ನಿತ್ಯದಾಸೋಹದ ವ್ಯವಸ್ಥೆ ಮಾಡಿ ಭಕ್ತರ ಜ್ಞಾನ ಮತ್ತು ಅನ್ನದಹಸಿವನ್ನು ನೀಗಿಸುತ್ತಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠದ ಅಭಿವೃದ್ಧಿಕಾರ್ಯಗಳು ಚುರುಕುಗೊಂಡಿದ್ದು ಕಲ್ಯಾಣ ಮಂಟಪ, ಪ್ರಸಾದ ನಿಲಯ, ಕೃಷಿಭವನ,ಸಂಸ್ಕøತ ಪಾಠಶಾಲೆ ಹಾಗೂ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ನೀಲಕಂಠ ಮಹಾಸ್ವಾಮಿಗಳು
Date of Birth :
03-05-1947
Place :
ಬೈಲವಾಡ, ಬೈಲಹೊಂಗಲ ತಾ||
Pattadikara :
28-08-1972
Photo :
Programs
ಜೇಷ್ಠ ಬಹುಳ ಸಪ್ತಮಿಗೆ ಶ್ರೀ ಹಿರಿಯ
ಗುರುಗಳ ಜಯಂತೋತ್ಸವ
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ
ಫಾಲ್ಗುಣ ಶುದ್ಧ ಏಕಾದಶಿಯಂದು ಶ್ರೀ ಮಠದ ಜಾತ್ರೆ
ಪ್ರತಿ ತಿಂಗಳ ಶುದ್ಧ ಏಕಾದಶಿಗೆ ಶ್ರೀ ಕರ್ತೃಗಳ ಸ್ಮರಣೋತ್ಸವ
ಹಾಗೂ ಮಾಸಿಕ ಶಿವಾನುಭವ ಗೋಷ್ಠಿ
ಬಸವಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಆಚರu
Institutions
ಕಿರಿಯ / ಹಿರಿಯ ಪ್ರಾಥಮಿಕ / ಪೌಢ ಶಾಲೆ ಪದವಿ ಪೂರ್ವ / ಡಿ.ಎಡ್. ಕಾಲೇಜ್ಸ
ಸಂಸ್ಕøತ ವೇದ ಪಾಠಶಾಲೆ
Photos
Full Address Kannada
ಶ್ರೀ ಮಹಾಂತ ದುರುದುಂಡೇಶ್ವರ ಮಠ
ಮುರುಗೋಡ - 591 119
ಸವದತ್ತಿ ತಾ||, ಬೆಳಗಾವಿ ಜಿಲ್ಲೆ