Shree Somashekhara Matha / Annadaneshwara Matha

Shree Somashekhara Matha / Annadaneshwara Matha Claimed

ಶ್ರೀ ಸೋಮಶೇಖರ ಮಠ / ಅನ್ನದಾನೀಶ್ವರ ಮಠ

Average Reviews

Description

ಶ್ರೀ ಸೋಮಶೇಖರ ಮಠ / ಶ್ರೀ ಅನ್ನದಾನೀಶ್ವರ ಮಠ – ಮುನವಳ್ಳಿ

ಕರ್ತೃ – ಶ್ರೀ ಮ.ನಿ.ಪ್ರ. ಅನ್ನದಾನೇಶ್ವರ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿ ಪಟ್ಟಣದ ಸೂಲಕಟ್ಟಿಓಣಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸೋಮಶೇಖರ ಮಠವು ತನ್ನ ಪುರಾತನ ಪರಂಪರೆಯಿಂದಹಾಗೂ ತನ್ನ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಬೆಳೆದುಬಂದಿದೆ. ಸುಮಾರು 800 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವಶ್ರೀಮಠದ ಸ್ಥಾಪಕ ಗುರುಗಳು ಶ್ರೀ ಮ.ನಿ.ಪ್ರ. ಅನ್ನದಾನೀಶ್ವರ ಶಿವಯೋಗಿಗಳು. ಈಕಾರಣದಿಂದಾಗಿ ಶ್ರೀಮಠವು ಶ್ರೀ ಅನ್ನದಾನೀಶ್ವರ ಮಠವೆಂತಲೂ ಕರೆಯಲಾಗುತ್ತದೆ.ಕರ್ತೃಗುರುಗಳಾದ ಶ್ರೀ ಅನ್ನದಾನೀಶ್ವರ ಶಿವಯೋಗಿಗಳು ಸಂಚಾರದಲ್ಲಿಮುನವಳ್ಳಿಗೆ ಬಂದು ಶ್ರೀಮಠವನ್ನು ಸ್ಥಾಪಿಸಿದ್ದು ತಮ್ಮ ಪವಾಡಗಳಿಂದ ಮನೆಮಾತಾಗಿದ್ದರು.ತಮ್ಮ ಪವಾಡಗಳಿಂದ ಹೆಸರಾಗಿದ್ದ ಶ್ರೀಗಳು ಇಲ್ಲಿಯೇ ನಿರ್ವಿಕಲ್ಪ ಸಮಾಧಿಯಾದರೆಂದುತಿಳಿದುಬರುತ್ತದೆ. ಇವರ ನಂತರ ಬಂದ ಶ್ರೀ ಸೋಮಶೇಖರ ಮಹಾಸ್ವಾಮಿಗಳು ಶ್ರೀಮಠದಜೀರ್ಣೋದ್ದಾರ ನಡೆಸಿದ್ದು ಇವರ ನಂತರ 14 ಜನ ಶ್ರೀಗಳು ಶ್ರೀಮಠದ ಆಡಳಿತನಡೆಸಿದ್ದಾರೆ. ಶ್ರೀ ಸೋಮಶೇಖರ ಮಹಾಸ್ವಾಮಿಗಳ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀಸೋಮಶೇಖರ ಮಠವೆಂಬ ಹೆಸರು ಬಂದಿದೆ.ಹಿಂದಿನ ಶ್ರೀಗಳಾದ (15ನೇ ಶ್ರೀಗಳು) ಶ್ರೀ ಮ.ನಿ.ಪ್ರ. ಚನ್ನಬಸವಮಹಾಸ್ವಾಮಿಗಳು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಇವರು ದೇಶದಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಬಿಡಿಸಿಕೊಳ್ಳಲು ಚಳುವಳಿಯಲ್ಲಿಧುಮುಕಿ ಅನೇಕಾನೇಕ ಜನರನ್ನು ಹುರಿದುಂಬಿಸಿದರು. ಇವರು ದೇಶಭಕ್ತಿ, ಸ್ವಾವಲಂಬನೆ,ಪರೋಪಕಾರ, ಜಂಗಮ ದಾಸೋಹ ಪರಿಕಲ್ಪನೆ ಮೈಗೂಡಿಸಿಕೊಂಡಿದ್ದರು. ತಮ್ಮಪ್ರಸಾದವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಕೇಂದ್ರ ಸರ್ಕಾರವು ಶ್ರೀಗಳಿಗೆಸ್ವಾತಂತ್ರ್ಯಯೋಧರೆಂದು ಗುರುತಿಸಿ ತಾಮ್ರಪತ್ರ ನೀಡಿ ಗೌರವಿಸಿದೆ.ಈ ಚನ್ನಬಸವ ಮಹಾಸ್ವಾಮಿಗಳು ಕೃಷಿಯೋಗಿಗಳೂ, ಸಾಂಸ್ಕøತಿಕ, ಕಲೆಪ್ರೋತ್ಸಾಹಕರೂ ಕೂಡ ಆಗಿದ್ದರು. ಸುದೀರ್ಘ ಕಾಲ ಶ್ರೀಮಠದ ಆಡಳಿತ ನಡೆಸಿದ್ದ ಶ್ರೀಗಳುಶ್ರೀಮಠವನ್ನು ಹಂತಹಂತವಾಗಿ ಜೀರ್ಣಾಭಿವೃದ್ಧಿಗೊಳಿಸಿದ್ದುದು ಕಂಡುಬರುತ್ತದೆ.ಶ್ರೀಮಠವನ್ನು ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಪರಿಕಲ್ಪನೆ ಮೇಲೆ ಮುನ್ನಡೆಸಿದ ಶ್ರೀಗಳು1999ರಲ್ಲಿ ಈಗಿನ ಶ್ರೀಗಳನ್ನು ಅಧಿಕಾರಕ್ಕೆ ತಂದು 2002ರ ಜೂನ್ 26ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡಿದವರು. ತದನಂತರ ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಅಲ್ಲಿನ ಜೆ.ಎಸ್.ಎಸ್. ಗುರುಕುಲವಿದ್ಯಾಪೀಠದಲ್ಲಿದ್ದುಕೊಂಡು ಮಹಾರಾಜ ಸಂಸ್ಕøತ ಮಹಾವಿದ್ಯಾಲಯದಲ್ಲಿ ಶಕ್ತಿವಿಶಿಷ್ಟಾದ್ವೈತವನ್ನು ಪೂರೈಸಿದರು.ಮೈಸೂರಿನಿಂದ ಮರಳಿದ ಶ್ರೀಗಳು ಮುನವಳ್ಳಿಗೆ ಆಗಮಿಸಿ ಶ್ರೀಮಠದ ಹಿಂದಿನಗುರುಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳ ಸದಿಚ್ಚೆಯ ಮೇರೆಗೆ ಹಾನಗಲ್ಲ191192ಪರಮಪೂಜ್ಯ ಶ್ರೀ ಕುಮಾರ ಮಹಾಸ್ವಾಮಿಗಳಿಂದ 1999ರ ಜನವರಿ 24ರಂದು ಶ್ರೀಸೋಮಶೇಖರ ಮಠದ 16ನೇ ಪೀಠಾಧಿಪತಿಗಳಾಗಿ ಶ್ರೀ.ಮ.ನಿ.ಪ್ರ. ಮುರುಘೇಂದ್ರಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಅಧಿಕಾರ ಸ್ವೀಕರಿಸಿದರು. ಶ್ರೀಗಳು ಶ್ರೀಮಠಕ್ಕೆಬಂದಂದಿನಿಂದ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾಯಶಸ್ವಿಗೊಳಿಸುತ್ತಾ ಸಾಗಿದ್ದಾರೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಶ್ರೀಗಳು ಧಾರ್ಮಿಕ ಪಥಸಂಚಲನ ನಡೆಸುತ್ತಾ ಬಂದಿದ್ದು ಇದರಲ್ಲಿ ಊರಿನ ಅನೇಕ ಭಕ್ತರು, ಶರಣರ ಬಳಗದವರು,ಅಕ್ಕನಬಳಗದವರು ಹೀಗೆ ನೂರಾರು ಜನ ಪ್ರತಿದಿನ ಪಥಸಂಚಲನದಲ್ಲಿ ತೊಡಗುತ್ತಾರೆ.ಶ್ರೀಗಳು ಅನೇಕ ಕಲಾವಿದರನ್ನು, ಸಂಗೀತಗಾರರನ್ನು, ಉಪನ್ಯಾಸಕರನ್ನು,ಪ್ರವಚನಕಾರರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ನೆರೆ ಸಂತ್ರಸ್ತರ ನಿಧಿಗಾಗಿ ಪಾದಯಾತ್ರೆಕೈಗೊಂಡು ಧನ ಸಂಗ್ರಹಿಸಿ ನೆರವಾಗಿದ್ದಾರೆ. ಸಂಗೀತ ಹಾಗೂ ಯೋಗದಂತಹ ಸನಾತನಕಲೆಗಳ ಪ್ರೋತ್ಸಾಹಕರಾಗಿದ್ದಾರೆ. ಸಾಮಾಜಿಕವಾಗಿ ತನ್ನದೇ ಆದ ಹೆಜ್ಜೆಗುರುತುಗಳನ್ನುಮೂಡಿಸುತ್ತಿದ್ದಾರೆ. ಲಿಂ|| ಶ್ರೀ.ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆಸಮಯದಲ್ಲಿ “ಮುರುಘಶ್ರೀ ಪ್ರಶಸ್ತಿ” ಪ್ರಧಾನ ಮಾಡಲಾಗುತ್ತಿದ್ದು ಆ ಸಮಯದಲ್ಲಿ ದೀನದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಕರೆಸಿಸನ್ಮಾನಿಸಲಾಗುತ್ತದೆ.ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಕಾರ್ಯಯೋಜನೆರೂಪಿಸಿಕೊಂಡು ಕಾರ್ಯ ತತ್ಪರರಾಗಿದ್ದು ಇದರ ಜೊತೆಗೆ ಪಂಚಲಿಂಗೇಶ್ವರದೇವಸ್ಥಾನದಲ್ಲಿ ನಡೆಯುವ ಜಾತ್ರೆ, ಉತ್ಸವ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕ್ರೀಡಾಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಆ ದೇವಸ್ಥಾನದ ಅಭ್ಯುದಯ ಕುರಿತು ಸದಾಚಿಂತನೆ ನಡೆಸುತ್ತಿರುತ್ತಾರೆ ಹೀಗೆ ಶ್ರೀಗಳು ಶ್ರೀಮಠ ಹಾಗೂ ಸಮಾಜ ಎರಡರಅಭಿವೃದ್ದಿಯಲ್ಲೂ ಶ್ರಮವಹಿಸುತ್ತಿದ್ದು ತಮ್ಮ ಸರಳತೆಯಿಂದ ನೇರ ನಡೆ-ನುಡಿಗಳಿಂದಹೆಸರಾಗಿದ್ದಾರೆ. ಶ್ರೀಮಠದ ವತಿಯಿಂದ “ಶ್ರೀ ಅನ್ನದಾನೀಶ್ವರ ಗ್ರಾಮೀಣಾಭಿವೃದ್ಧಿ ಸಂಘ”,“ಅಕ್ಕನ ಬಳಗ” ಹಾಗೂ “ಶರಣರ ಬಳಗ”ಗಳು ಕಾರ್ಯನಿರ್ವಹಿಸುತ್ತಿದ್ದು ಸಮಾಜದಲ್ಲಿಜಾಗೃತಿಮೂಡಿಸುವಲ್ಲಿ ನಿರತವಾಗಿವೆ.

ವಿಶೇಷತೆ

“ಮುರುಘ ಶ್ರೀ ಪ್ರಶಸ್ತಿ” ಪ್ರಧಾನ

(ಲಿಂ|| ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ

ಪುಣ್ಯಾರಾಧನೆ ಸಮಯದಲ್ಲಿ)

Swamiji

Swamiji Name :
ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು
Date of Birth :
10-06-1974
Place :
ಹಿಟ್ಟಣಗಿ, ಸವದತ್ತಿ ತಾ||
Pattadikara :
24-1-1999
Photo :

Programs

ಪುಷ್ಯ ಬಹುಳ ಏಕಾದಶಿಗೆ ಲಿಂ|| ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ, ಸಾಮೂಹಿಕ ವಿವಾಹಗಳು, ಪುರಾಣ ಪ್ರವಚನ, ಉಚಿತ ನೇತ್ರ ಪರೀಕ್ಷೆ ಹಾಗೂ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ (ಕೆ.ಎಲ್.ಇ. ಸಂಸ್ಥೆಯಿಂದ) ಪ್ರಸ್ತುತ ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ (ಜೂನ್ 10) ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳ ವಿತರಣೆ ಹಾಗೂ ಶಾಲಾ ಶುಲ್ಕ ಭರಿಸುವುದು. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ "ಧಾರ್ಮಿಕ ಪಥ ಸಂಚಲನ"

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ ಕಾಲೇಜು
ಯೋಗ ವಿದ್ಯಾಕೇಂದ್ರ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸೋಮಶೇಖರ ಮಠ / ಅನ್ನದಾನೀಶ್ವರ ಮಠ
ಸೂಲಕಟ್ಟಿ ಓಣಿ, ಮುನವಳ್ಳಿ - 591 117
ಸವದತ್ತಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಯರಗಟ್ಟಿ - 15 ಕಿ.ಮೀ.
ಸವದತ್ತಿ - 16 ಕಿ.ಮೀ.
ಧಾರವಾಡ - 50 ಕಿ.ಮೀ.
ಬೆಳಗಾವಿ - 75 ಕಿ.ಮೀ.

Statistic

99 Views
0 Rating
0 Favorite
0 Share
error: Content is protected !!