ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹೊಸೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 42 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 140ವರ್ಷಗಳ ಹಿಂದೆ ಸ್ಥಾಪಿತಗೊಂಡಿರಬಹುದಾದ ಶ್ರೀ ಗುರು ಮಡಿವಾಳೇಶ್ವರ ಮಠವುಅಸ್ತಿತ್ವದಲ್ಲಿದ್ದು ಮಹಾ ಶಿವಶರಣ ಶ್ರೀ ಗುರು ಮಡಿವಾಳೇಶ್ವರ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿದೆ. ಅಂದಿನಿಂದ ಇಂದಿನವರೆಗೂ ಶ್ರೀಮಠವು ಭಕ್ತರಿಗೆ ಸನ್ಮಾರ್ಗ ತೋರುತ್ತಾಮುನ್ನಡೆದಿದೆ.ಪರಮಪೂಜ್ಯ ಶ್ರೀ ಗುರು ಮಡಿವಾಳೇಶ್ವರರ ಹೆಸರು ಕರ್ನಾಟಕದ ಧಾರ್ಮಿಕಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದುಬಂದಿದೆ. ಇಂತಹ ಮಹಾಮಹಿಮ ಶಿವಶರಣರುಕಿತ್ತೂರು ಸಂಸ್ಥಾನದಲ್ಲಿ ಜೀವಿಸಿ, ಅಲ್ಲಿನ ರಾಜಗುರು ಕಲ್ಮಠದಲ್ಲಿದ್ದು ಪವಾಡಗಳನ್ನುನಡೆಸಿದವರು. ಕಾರಣಾಂತರಗಳಿಂದ ಅಲ್ಲಿಂದ ಸಂಚಾರ ಹೊರಟ ಗುರುಗಳು ಹೊಸೂರಿಗೆಆಗಮಿಸಿ ಇಲ್ಲಿಯೇ ಅಧಿಕ ಕಾಲ ನೆಲೆಗೊಂಡು ಕೊನೆಯಲ್ಲಿ ಗರಗಕ್ಕೆ ಹೊರಟು ಅಲ್ಲಿಸ್ಥಿರಗೊಂಡರು ಎನ್ನಲಾಗಿದೆ.ಹೀಗೆ ಶ್ರೀ ಗುರು ಮಡಿವಾಳೇಶ್ವರರ ವಾಸ್ತವ್ಯದಿಂದ ಹಾಗೂ ಪವಾಡಗಳಿಂದಜಾಗೃತಗೊಂಡಿದ್ದ ಮಠಕ್ಕೆ ಭಕ್ತರೇ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದುನಂತರದಲ್ಲಿ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು ಅಧಿಕಾರವಹಿಸಿಕೊಂಡಿದ್ದಾರೆ. ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳು 1992ರ ಏಪ್ರಿಲ್10ರಲ್ಲಿ ಶ್ರೀಮಠಕ್ಕೆ ಅಧಿಕಾರ ವಹಿಸಿಕೊಂಡಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದ ಜಮೀನಲ್ಲಿ ಹಸಿರು ಕ್ರಾಂತಿಯನ್ನುಮಾಡುತ್ತಿದ್ದು ಸುತ್ತಮುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ ಹಾಗೂ ತಮ್ಮಕಾಯಕಯೋಗದಿಂದ ಶ್ರೀಮಠವನ್ನು ಮತ್ತು ಸಮಾಜವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ.ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಗದ್ದುಗೆಗಳನ್ನು ನವೀಕರಿಸಿದ್ದುನಿತ್ಯಪೂಜೆಗೆ ಒಳಪಡುತ್ತಿದೆ. ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳುನಡೆಯುತ್ತಿದ್ದು ದವನದ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಹತ್ತುದಿನಗಳ ಕಾಲ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳು
Date of Birth :
15-03-1959
Place :
ಗುಳಗುಳಿ, ರೋಣ ತಾ||
Pattadikara :
10-04-1992
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ
ದವನದ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಹತ್ತು ದಿನಗಳ ಕಾಲ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಗುರು ಮಡಿವಾಳೇಶ್ವರ ಮಠ
ಹೊಸೂರು - 591 111
ಸವದತ್ತಿ ತಾ||, ಬೆಳಗಾವಿ ಜಿಲ್ಲೆ