ಕರ್ತೃ – ಲಿಂ|| ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಾಗೂಗ್ರಾಮಗಳಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬೃಹನ್ಮಠ / ಗುರುಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಪುರಾತನ ಕಾಲದ ಶ್ರೀಮಠದಇತಿಹಾಸದ ಬಗ್ಗೆ ನಿಖರತೆಯಿಲ್ಲ. ಶ್ರೀಮಠದಲ್ಲಿ ಉಪಲಬ್ದವಿರುವ ತಾಮ್ರಪಟದ ಪ್ರಕಾರಶ್ರೀಮದ್ ಉಜ್ಜಯಿನಿ ಶಾಖಾಮಠವಾಗಿರುವ ಶ್ರೀಮಠದಲ್ಲಿ ಹತ್ತನೆಯ ಶತಮಾನದಲ್ಲಿ ಶ್ರೀಮರುಳಸಿದ್ದ ಶಿವಾಚಾರ್ಯರು ಇದ್ದರೆಂಬುದು ತಿಳಿದುಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ ಸುಮಾರು 25 ಶಿವಾಚಾರ್ಯರುಪಟ್ಟಾಧಿಕಾರವನ್ನು ಸ್ವೀಕರಿಸಿ ಶ್ರೀಮಠದ ಅಭಿವೃದ್ದಿಗೆ ಮತ್ತು ಪಾವಿತ್ರ್ಯಕ್ಕೆ ಕೊಡುಗೆಯನ್ನುನೀಡಿದ್ದಾರೆ ಎಂದು ಹೇಳಲಾಗಿದ್ದು ಈ ಗುರುಗಳೆಲ್ಲರ ಗದ್ದುಗೆಗಳು ಚಿಪ್ಪಲಕಟ್ಟಿಯಲ್ಲಿಮಾತ್ರವಲ್ಲ. ಮಮದಾಪುರ ಮತ್ತು ಕುಷ್ಟಗಿ ತಾಲ್ಲೂಕಿನ ಬಳವಟಿಗೆಯಲ್ಲಿಯೂ ಇರುವುದುಶ್ರೀಮಠದ ಐತಿಹಾಸಿಕತೆಗೆ ಒಂದು ನಿದರ್ಶನವಾಗಿದೆ.ಕಾರಣಾಂತರಗಳಿಂದ ಈ ಗುರುಪರಂಪರೆ ನಿಂತುಹೋಗುವ ದುರವಸ್ಥೆಉಂಟಾದಾಗ ದಾಸೋಹಮೂರ್ತಿಗಳಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಅದರ ಸರ್ವತೋಮುಖ ಏಳಿಗೆಗೆ, ಉಜ್ವಲ ಭವಿಷ್ಯಕ್ಕೆಭದ್ರಬುನಾದಿ ಹಾಕಿದರು. ಇವರ ಸುಪುತ್ರರಲ್ಲಿ ಜೇಷ್ಠರಾದ ಶ್ರೀ ವೇ. ಗುರುಲಿಂಗಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ.ಶ್ರೀಗಳು ಶ್ರೀಮಠದ ಪಟ್ಟಕ್ಕೆ ಬಂದಾಗ ಶ್ರಿಮಠದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ.ಅವರ ಸದಾಚಾರ, ಸದ್ವಿವೇಕ, ವಿನಯ ಹಾಗೂ ಉದಾರ ವಿಚಾರಗಳಿಂದಾಗಿ ಶ್ರೀಮಠಉಚ್ಚ್ರಾಯ ಸ್ಥಿತಿಗೆ ಬಂದಿದ್ದು ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠಕ್ಕೆ ಭವ್ಯಕಟ್ಟಡವನ್ನುನಿರ್ಮಿಸಿದ್ದಾರೆ. ಶ್ರೀಗಳು ಜ್ಯೋತಿಷ್ಯಶಾಸ್ತ್ರ, ಆಯುರ್ವೇದ ಮುಂತಾದ ಸನಾತನವಿದ್ಯೆಗಳಿಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ಪಟ್ಟಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳು 2003ರ ಮೇ 21ರಂದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡುಮುನ್ನಡೆಸುತ್ತಿದ್ದಾರೆ. ಚಿಪ್ಪಲಕಟ್ಟಿ ಮೂಲಮಠದ ಜೊತೆಯಲ್ಲಿ ಸಾಲಹಳ್ಳಿಯ ನೂತನಮಠವನ್ನು ಕೂಡ ಅಭಿವೃದ್ದಿಗೊಳಿಸುವತ್ತ ಚಿತ್ತಹರಿಸಿರುವ ಶ್ರೀಗಳು ಆ ನಿಟ್ಟಿನಲ್ಲಿಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಪಟ್ಟಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-07-1971
Place :
ಚಿಪ್ಪಲಕಟ್ಟಿ, ರಾಮದುರ್ಗ ತಾ||
Pattadikara :
21-05-2003
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ
ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ಮೇ 19-20 ರಂದು ಪ್ರ
ಸ್ತುತ ಶ್ರೀಗಳ ವಾರ್ಷಿಕೋತ್ಸವ ಕಾರ್ಯಕ್ರಮ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಬೃಹನ್ಮಠ / ಗುರುಮಠ
ಸಾಲಹಳ್ಳಿ - 571 130
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ