Shree Gurugadadeshwara Samsthana Hirematha – M. Chandaragi
Claimed
ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠ - ಎಂ ಚಂದರಗಿ
Average Reviews
Description
ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠ – ಎಂ ಚಂದರಗಿ
ಕರ್ತೃ – ಶ್ರೀ ಷ.ಬ್ರ. ಗುರುಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಎಂ. ಚಂದರಗಿ ಗ್ರಾಮದಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠವು ಅತಿ ಪುರಾತನ ಕಾಲದ್ದಾಗಿದ್ದು ಸಾವಿರಾರು ವರ್ಷಗಳ ಇತಿಹಾಸವಿರಬಹುದುಎಂದು ಹೇಳಲಾಗಿದ್ದು ಶ್ರೀಮಠದ ಕರ್ತೃಗುರುಗಳು ಶ್ರೀ ಷ.ಬ್ರ. ಗುರುಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ಗುರುಸಿದ್ದಲಿಂಗ ಶಿವಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಈ ಪುಣ್ಯಭೂಮಿಯಲ್ಲಿ ದಿವ್ಯ ತಪವನ್ನಾಚರಿಸಿದಾಗ ಅವರ ಮೈ ಮೇಲೆ ಹುತ್ತವು ಬೆಳೆದು ಹುತ್ತದಿಂದಓಂಕಾರ ಧ್ವನಿ ಬರುವುದನ್ನು ಗಮನಿಸಿದ ವನಚರರು ತಮ್ಮ ನಾಡಿನ ದೊರೆಯಾದ ಪಶುಪತಿರುದ್ರ ಮಹಾರಾಜನ ಗಮನಕ್ಕೆ ತರಲಾಗಿ, ಮಹಾರಾಜರು ಯತಿಗಳನ್ನು ಕಂಡು ನಮಸ್ಕರಿಸಿತಪೋನಿರತರಾದ ಅವರನ್ನು ತನ್ನ ಪಟ್ಟಣಕ್ಕೆ ಕರೆತಂದು ಗಡ್ಡಜಠಾಧಾರಿಯಾದ ಶ್ರೀಗಳಿಗೆದಿವ್ಯಾಂಬರವನ್ನಿತ್ತನು. ಸುದೀರ್ಘವಾಗಿ ಗಡ್ಡಬೆಳೆದ ಸ್ವಾಮಿಗಳಿಗೆ ಗಡ್ಡದಪ್ಪ ಎಂಬಹೆಸರಿನಿಂದ ಭಕ್ತಿಯಿಂದ ಕರೆಯುತ್ತಾ ಶ್ರೀಗಳು ಶ್ರೀ ಗಡದೇಶ್ವರ ಶಿವಾಚಾರ್ಯರೆಂದೇಪ್ರಖ್ಯಾತಗೊಂಡರು.ಪಶುಪತಿ ರುದ್ರ ಭೂಪಾಲನು ಶ್ರೀಗಳಿಗೆ ಕಟಕೋಳ, ಮುರಕಟ್ನಾಳ, ತೋಟಗಟ್ಟಿ,ಕೇಸರಗೊಪ್ಪ, ಇಟ್ನಾಳ, ಎಂ. ಚಂದರಗಿ ಗ್ರಾಮಗಳನ್ನು ಉಂಬಳಿಯಾಗಿ ಇತ್ತು ಗುರುವಿನವಾಸ್ತವ್ಯಕ್ಕಾಗಿ ಭವ್ಯವಾದ ಮಠವನ್ನು ನಿರ್ಮಾಣ ಮಾಡಿಸಿಕೊಡುವನು. ಪೂಜ್ಯರು ಸಪ್ತಊರುಗಳಲ್ಲಿ ಮಠಗಳ ಸ್ಥಾಪನೆ ಮಾಡಿ ದೇಶಸುತ್ತಿ ಜನರಿಗೆ ಶಿವಾಚಾರ್ಯರಶಿವತತ್ತ್ವಗಳನ್ನು ಬೋಧಿಸುತ್ತಾ ಹಲವು ಪವಾಡಗಳನ್ನು ಮಾಡಿದರು.ಮೂಲ ಗಡದೇಶ್ವರರಿಂದ ಸ್ಥಾಪಿತಗೊಂಡ ಶ್ರೀಮಠಕ್ಕೆ ಇವರ ನಂತರ ಕಾಲದಲ್ಲಿನಲ್ವತ್ತಮೂರು ಜನ ಶಿವಾಚಾರ್ಯರು ದಿವ್ಯಪೀಠವನ್ನೇರಿದ ನಂತರ ಇನ್ನೂರು ವರ್ಷಗಳಹಿಂದೆ ಶ್ರೀ ಗಡದೇಶ್ವರ ಮಹಾಸ್ವಾಮಿಗಳು ಶ್ರೀಮಠದ 45ನೇ ಪೀಠಾಧಿಪತಿಗಳಾಗಿ ಪಟ್ಟಕ್ಕೆಬಂದರು. ಶ್ರೀಗಳು ಮಹಾತಪಸ್ವಿಗಳಾಗಿದ್ದು ತಪೋನಿಷ್ಠರಾಗಿ ಭಕ್ತರನ್ನುದ್ದರಿಸಿದರು. ಭಕ್ತರಉನ್ನತಿಗಾಗಿ ನಾಡಿನಾದ್ಯಂತ ಸಂಚರಿಸಿದರು. ಕಲ್ಬುರ್ಗಿಯ ಶರಣ ಬಸವೇಶ್ವರರಿಗೆಪಾದೋದಕವನ್ನಿತ್ತು ಆಶೀರ್ವದಿಸಿದರು. ಇವರು ಕೊಟ್ಟರೆ ವರ ಇತ್ತರೆ ಶಾಪ ಎನ್ನುವಂತೆಅನಂತ ಪವಾಡಗಳನ್ನು ನಡೆಸಿ ಮನೆಮಾತಾದರು. ಇಂತಹ ಮಹಿಮರ ಕುರಿತಾಗಿಪುರಾಣಗಳು ರಚನೆಗೊಂಡಿವೆ.ಶ್ರೀ ಗಡದೇಶ್ವರ ಶಿವಾಚಾರ್ಯರ ನಂತರ ಶ್ರೀಮಠವು ಒಂದು ಶತಮಾನಕ್ಕೂಹೆಚ್ಚಿನ ಕಾಲ ಖಾಲಿ ಉಳಿದಂತೆ ತೋರುತ್ತಿದ್ದು ಆನಂತರ ಶ್ರೀಮಠದ ಅಧಿಕಾರವನ್ನುಸ್ವೀಕರಿಸಿ ಬಂದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯಮಹಾಸ್ವಾಮಿಗಳು. 1960 ರ ಡಿಸೆಂಬರ್ 12 ರಂದು ಇದೇ ಗ್ರಾಮದಲ್ಲಿ ಜನಿಸಿದ ಶ್ರೀಗಳು167168ಎಂ. ಚಂದರಗಿ, ಕಟಕೋಳ ಹಾಗೂ ಬೈಲಹೊಂಗಲಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾಶಿಕ್ಷಣವನ್ನು ಪಡೆದರು. ಆನಂತರ ಬೈಲಹೊಂಗಲ ತಾಲ್ಲೂಕು ಸುತ್ತಕಟ್ಟಿ ಹಿರೇಮಠದಪಟ್ಟಾಧ್ಯಕ್ಷರು ಹಾಗೂ ಕುಂದಗೋಳ ಪಂಚಗ್ರಹ ಹಿರೇಮಠದ ಶ್ರೀ ಷ.ಬ್ರ. ಸಿದ್ದಲಿಂಗಶಿವಾಚಾರ್ಯರ ಬಳಿ ವೈದಿಕ ಅಭ್ಯಾಸವನ್ನು ಪೂರ್ಣಗೊಳಿಸಿದರು.ಶ್ರೀಗಳು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಗಂಗಾಧರಶಿವಾಚಾರ್ಯ ಭಗವತ್ಪಾದರ ಬಳಿ ಜಂಗಮ ದೀಕ್ಷೆ ಪಡೆದಿದ್ದು ಕೇವಲ ತಮ್ಮ 19ನೇವಯಸ್ಸಿನಲ್ಲಿಯೇ 1979ರ ಮೇ 19ರಂದು ಶ್ರೀಗುರು ಗಡದೇಶ್ವರ ಸಂಸ್ಥಾನ ಹಿರೇಮಠದಪಟ್ಟಾಧಿಕಾರದ ಅನುಗ್ರಹವನ್ನು ರಾಮದುರ್ಗ ತಾಲ್ಲೂಕು ಬನ್ನೂರು ಶ್ರೀ ಚಿಕ್ಕಮಠದ ಶ್ರೀಷ.ಬ್ರ. ಚನ್ನಮಲ್ಲ ಶಿವಾಚಾರ್ಯರ ಬಳಿ ಪಡೆದು ಶ್ರೀ ಷ.ಬ್ರ. ವೀರಭದ್ರ ಶಿವಯೋಗಿಶಿವಾಚಾರ್ಯ ಮಹಾಸ್ವಾಮಿಗಳೆಂಬ ಅಭಿಧಾನದೊಂದಿಗೆ ಅಧಿಕಾರ ಸ್ವೀಕರಿಸಿದರು.ಶ್ರೀಗಳು ತುಂಬಾ ಕ್ರಿಯಾಶೀಲರಾಗಿದ್ದು ಶ್ರೀಮಠದ ಅಧಿಕಾರ ಸ್ವೀಕರಿಸಿದದಿನದಿಂದ ಶ್ರೀಮಠವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಅನುಷ್ಠಾನ ಪ್ರಿಯರಾಗಿರುವಶ್ರೀಗಳು ಇಲ್ಲಿಯವರೆಗೆ ದೇಶದ ನಾನಾಭಾಗಗಳಲ್ಲಿ 21 ಅನುಷ್ಠಾನಗಳನ್ನು ಮಾಡಿದ್ದಾರೆಹಾಗೂ ಇಲ್ಲಿಯವರೆಗೆ ದೇಶದ ನಾನಾ ರಾಜ್ಯಗಳಲ್ಲಿ 72000 ಜನರಿಗೆ ಲಿಂಗ ದೀಕ್ಷೆನೀಡಿದ್ದಾರೆ ಮತ್ತು ಪ್ರತಿ ವರ್ಷ ವ್ಯಸನ ಮುಕ್ತ ಪಾದಯಾತ್ರೆಯನ್ನು ಹಮ್ಮಿಕೊಂಡು ಜನರಲ್ಲಿಜಾಗೃತಿ ಮೂಡಿಸುತ್ತಿದ್ದಾರೆ ಶ್ರೀಮಠದ ಸರ್ವತೋಮುಖ ಅಭಿವೃದ್ದಿಗೆ ಯೋಜನೆರೂಪಿಸಿಕೊಂಡಿರುವ ಶ್ರೀಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಶ್ರೀಗಳು ಶ್ರೀಮಠದ ಹಳೆಯ ಕಟ್ಟಡವನ್ನು ತೆಗೆಸಿ ಭಕ್ತರ ಸಹಕಾರದೊಂದಿಗೆನೂತನ ಕಟ್ಟಡವನ್ನು ನಿರ್ಮಿಸಿದ್ದು ಇತ್ತೀಚೆಗೆ ಶ್ರೀಮಠದಲ್ಲಿ 108 ಶಿವಲಿಂಗಗಳ ಸ್ಥಾಪನೆಮಾಡಿದ್ದಾರೆ ಹಾಗೂ ಶ್ರೀಮಠದ ವತಿಯಿಂದ “ಶ್ರೀ ರೇಣುಕ ಜ್ಯೋತಿ” ಎಂಬ ಮಾಸಪತ್ರಿಕೆಯನ್ನು ಹೊರತರುತ್ತಿರುವುದು ಗಮನಾರ್ಹ ಸಂಗತಿ. ಶ್ರೀಮಠದ ಪರಂಪರೆಯ 45ಗದ್ದುಗೆಗಳಲ್ಲಿ ಶಾಖಾಮಠಗಳಲ್ಲೂ ಸೇರಿಸಿ 20 ಗದ್ದುಗೆಗಳನ್ನು ಗುರುತಿಸಲಾಗಿದೆ.
Swamiji
Swamiji Name :
ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
12-12-1960
Place :
ಎಂ. ಚಂದರಗಿ, ರಾಮದುರ್ಗ ತಾ||
Pattadikara :
19-05-1979
Photo :
Programs
ಗುರು ಪೂರ್ಣಿಮೆಗೆ ಧಾರ್ಮಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ,
ಮಂಗಳಕ್ಕೆ ಪಲ್ಲಕ್ಕಿ ಮಹೋತ್ಸವ ದಸರದಲ್ಲಿ ನಿತ್ಯ ಶ್ರೀ ದೇವಿ ಪುರಾಣ ಪಾರಾಯಣ
ಡಿಸೆಂಬರ್ನಲ್ಲಿ ಶ್ರೀ ಮಠದಲ್ಲಿ 108 ಶಿವಲಿಂಗಗಳ ಸ್ಥಾಪನೆಯ ವಾರ್ಷಿಕೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಸಂಸ್ಕøತ ವೇದ ಪಾಠಶಾಲೆ
ಸಂಗೀತ ಪಾಠಶಾಲೆ
Photos
Full Address Kannada
ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠ
ಎಂ. ಚಂದರಗಿ - 591 114
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ