ಕರ್ತೃ – ಶ್ರೀ ಮ.ಘ.ಚ. ರಾಚೋಚೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ರಾಮದುರ್ಗ ತಾಲ್ಲೂಕಿನ ಕೆ. ತೋರಗಲ್ ಗ್ರಾಮವು ತಾಲ್ಲೂಕು ಕೇಂದ್ರದಿಂದ10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಸುಮಾರು 14ನೇ ಶತಮಾನದಅಂತ್ಯಭಾಗದಲ್ಲಿ ಶ್ರೀ ಮ.ಘ.ಚ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪನೆಯಾಗಿದೆಯೆಂದು ಹೇಳಲಾಗುವ ಶ್ರೀ ಗಚ್ಚಿನ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ದಿ ಪಡೆದಿದೆ. ಶ್ರೀಮಠವು ಶ್ರೀ ರಂಭಾಪುರಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಮಠವನ್ನು ಸ್ಥಾಪಿಸಿದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ತಮ್ಮಅನುಷ್ಠಾನ ಬಲದಿಂದ, ಧಾರ್ಮಿಕ ಉಪದೇಶಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿಮುನ್ನಡೆಸಿದ್ದು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಆದರೆ ಆನಂತರದ ಗುರುಗಳ ಬಗ್ಗೆ ಮಾಹಿತಿಗಳು ನಿಖರವಾಗಿ ತಿಳಿದುಬರುವುದಿಲ್ಲವಾದರೂ ಈಗಿನಶ್ರೀಗಳು 7ನೇಯವರು ಎಂದು ಹೇಳಬಹುದು.ಶ್ರೀಮಠದ ಪರಂಪರೆಯಲ್ಲಿ ಶ್ರೀ ಕರಿಬಸವೇಶ ್ವರ ಶಿವಾಚಾರ್ಯಮಹಾಸ್ವಾಮಿಗಳೆಂಬುವರು ಪಟ್ಟಕ್ಕೆ ಬಂದಿರುವ ಮಾಹಿತಿಯಿದ್ದು ಆ ಸಮಯದಲ್ಲಿ ಇಲ್ಲಿನಶ್ರೀ ಮಲ್ಲಹರಿ ಮಹಾಜನ ಎಂಬ ದೊರೆಯು ಮಠದ ಅಭಿವೃದ್ಧಿಗಾಗಿ ಒಂದು ನೂರು ಎಕರೆಜಮೀನನ್ನು ಉಂಬಳಿಯಾಗಿ ನೀಡಿರುವುದು ಕಂಡುಬರುತ್ತದೆ. ಇದನ್ನು ಬಿಟ್ಟರೆಪರಂಪರೆಯ ಬಗ್ಗೆ ಬೇರಾವ ಮಾಹಿತಿಯೂ ದೊರೆಯುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ಮ.ಘ.ಚ. ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು 1983ರಏಪ್ರಿಲ್ 17ರಂದು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದ್ದಾರೆ. ಶ್ರೀಗಳು ತಮ್ಮ ಜ್ಯಾತಾತೀತಮನೋಭಾವನೆಯಿಂದ ಸರ್ವರನ್ನೂ ಸಮಾನವಾಗಿ ಗುರುತಿಸಿ ಶ್ರೀಮಠಕ್ಕೆ ಭಕ್ತರನ್ನಾಗಿಸಂಪಾದಿಸಿಕೊಂಡಿದ್ದಾರೆ ಹಾಗೂ ಶ್ರೀಮಠವನ್ನು ಸರ್ವಧರ್ಮ ಸಮನ್ವಯ ಕೇಂದ್ರವಾಗಿಅಭಿವೃದ್ದಿ ಪಡಿಸಿದ್ದಾರೆ. ಶ್ರೀಮಠದಲ್ಲಿ ಮಣ್ಣೆತ್ತಿನ ಅಮವಾಸ್ಯೆ ದಿನ ಕರ್ತೃಗುರುಗಳಪುಣ್ಯಾರಾಧನೆ ಮಹೋತ್ಸವ ಜರುಗುತ್ತಿದ್ದು ವಿವಿಧ ಧಾರ್ಮಿಕ, ಸಾಂಸ್ಕøತಿಕಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಮ.ಘ.ಚ. ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು
Date of Birth :
17-12-1952
Place :
ವಟ್ನಾಳ, ಸವದತ್ತಿ ತಾ||
Pattadikara :
17-04-1983
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಮಣ್ಣೆತ್ತಿನ ಅಮವಾಸ್ಯೆ ದಿನ ಕರ್ತೃ ಲಿಂ|| ಶ್ರೀ ಮ.ಘ.ಚ. ರಾಚೋಚೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಗಚ್ಚಿನ ಹಿರೇಮಠ
ಕೆ. ತೋರಗಲ್ - 591 114
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ