Shree Kumareshwara Viraktamatha

Shree Kumareshwara Viraktamatha Claimed

ಶ್ರೀ ಕುಮಾರೇಶ್ವರ ವಿರಕ್ತಮಠ

Average Reviews

Description

ಶ್ರೀ ಕುಮಾರೇಶ್ವರ ವಿರಕ್ತಮಠ – ಕಟಕೋಳ

ಕರ್ತೃ – ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು

ಸುಮಾರು 12ನೇ ಶತಮಾನದಲ್ಲೇ ಶರಣರು ನೆಲೆಗೊಂಡು ಪಾವನಗೊಳಿಸಿದ್ದಈ ಪುಣ್ಯಕ್ಷೇತ್ರದಲ್ಲಿ ತದನಂತರ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಕುಮಾರೇಶ್ವರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ, ತನ್ನ ಧರ್ಮೋಪದೇಶಗಳ ಮೂಲಕ ಈ ಭಾಗದ ಪ್ರಮುಖಮಠವಾಗಿ ಗುರುತಿಸಿಕೊಂಡಿದೆ.ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಲೋಕಸಂಚಾರಕೈಗೊಂಡು ಅಲ್ಲಲ್ಲಿ ನೆಲೆನಿಂತು ಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಕಟಕೋಳ,ಮುದಕವಿ ಗ್ರಾಮಗಳ ನಡುವಿನಲ್ಲಿ ಶರಣರ ಅನುಷ್ಠಾನದಿಂದ ಪಾವನಗೊಂಡಿದ್ದ ಸ್ಥಳದಮಹಿಮೆಯನ್ನರಿತು ಇಲ್ಲಿಗೆ ಆಗಮಿಸಿ ಅನುಷ್ಠಾನಗೊಂಡು ಮಠವನ್ನು ಸ್ಥಾಪಿಸಿದ್ದಾರೆ. ತಮ್ಮಧಾರ್ಮಿಕ ಆಚರಣೆಗಳಿಂದ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀಮಠವನ್ನು ಮುನ್ನಡೆಸಿದ್ದಾರೆ. ಆದರೆ ಕರ್ತೃಗುರುಗಳ ನಂತರದಲ್ಲಿ ಯಾವ ಶ್ರೀಗಳುಪೀಠಾಧಿಕಾರಿಗಳಾಗಿ ಶ್ರೀಮಠದ ಆಡಳಿತವನ್ನು ವಹಿಸಿಕೊಂಡಿದ್ದಾರೆ ಎಂಬುದರ ನಿಖರಮಾಹಿತಿಯಿಲ್ಲ. ಶ್ರೀಮಠದಲ್ಲಿ ಸಿಗುವ ಮಾಹಿತಿಯ ಆಧಾರದ ಮೇಲೆ ಶ್ರೀಮಠದಲ್ಲಿ ಪ್ರಸ್ತುತಆಡಳಿತ ನಡೆಸುತ್ತಿರುವ ಶ್ರೀ ಮ.ನಿ.ಪ್ರ. ಸಚ್ಚಿದಾನಂದ ಮಹಾಸ್ವಾಮಿಗಳು 7ನೇ ಶ್ರೀಗಳೆಂದುತಿಳಿದುಬರುತ್ತದೆ.ಹಿಂದಿನ ಗುರುಗಳಾದ ಶ್ರೀ.ಮ.ನಿ.ಪ್ರ. ಗಂಗಾಧರ ಕುಮಾರ ಮಹಾಸ್ವಾಮಿಗಳುಮಹಾಮಹಿಮರಾಗಿದ್ದು ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಶಿಷ್ಯರಾಗಿಶಿವಯೋಗ ಸಿದ್ದಿಯನ್ನು ಪಡೆದು ಶ್ರೀಮಠಕ್ಕೆ ಆಗಮಿಸಿ 1925ರ ಡಿಸೆಂಬರ್ 10ರಂದುಅಧಿಕಾರವನ್ನು ವಹಿಸಿಕೊಂಡು ಮಠವನ್ನು ಅಭಿವೃದ್ದಿಗೊಳಿಸಿದ್ದು ಜನಮನದಲ್ಲಿಬೇರೂರಿದ್ದಾರೆ. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಕುಮಾರೇಶ್ವರ ವಿರಕ್ತಮಠವೆಂಬಹೆಸರು ಬಂದಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಚ್ಚಿದಾನಂದ ಮಹಾಸ್ವಾಮಿಗಳು 1979ರ ಮೇ03ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆಕಾರಣರಾಗಿದ್ದು ಪ್ರಗತಿಪರ ಚಿಂತಕರಾಗಿ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಿದ್ದು, ಚೈತ್ರ ಬಹುಳ ಸಪ್ತಮಿಗೆ ಲಿಂ|| ಶ್ರೀಗಂಗಾಧರ ಕುಮಾರ ಮಹಾಸ್ವಾಮಿಗಳ ಪುಣ್ಯಾರಾಧನೆಯನ್ನು ನಡೆಸಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಚ್ಚಿದಾನಂದ ಮಹಾಸ್ವಾಮಿಗಳು
Date of Birth :
18-03-1953
Place :
ಹಿರೇಸಿಂದೋಗಿ, ಕೊಪ್ಪಳ ತಾ||
Pattadikara :
03-05-1979
Photo :

Programs

ಮಹಾಸ್ವಾಮಿಗಳ ಪುಣ್ಯಾರಾಧನೆ
ಬಸವ ಜಯಂತಿ ಆಚರಣೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಪುರಾಣ ಪ್ರವಚನ

Institutions

ಪ್ರೌಢಶಾಲೆ ಪದವಿ ಪೂರ್ವ / ಪದವಿ ಕಾಲೇಜ್
ವಚನ ಅಧ್ಯಯನ ಶಾಲೆ

Photos

Full Address Kannada

ಶ್ರೀ ಕುಮಾರೇಶ್ವರ ವಿರಕ್ತಮಠ
ಕಟಕೋಳ - 591 114
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ

Map

Near by Places

ಕೆ.ಚಂದರಗಿ - 1 ಕಿ.ಮೀ.
ರಾಮದುರ್ಗ - 22 ಕಿ.ಮೀ.
ಸವದತ್ತಿ - 30 ಕಿ.ಮೀ.
ಬೆಳಗಾವಿ - 80 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!