ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಭಾಗೋಜಿಕೊಪ್ಪ ಗ್ರಾಮವುತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿರುವ ಶ್ರೀಶಿವಯೋಗೀಶ್ವರ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಈಭಾಗದ ಜನರನ್ನು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಸನ್ಮಾರ್ಗದಲ್ಲಿ ನಡೆಸುವಲ್ಲಿಯಶಸ್ವಿಯಾಗಿದೆ.ಶ್ರೀಮಠದ ಸ್ಥಾಪನೆಯ ಬಗ್ಗೆಯಾಗಲೀ, ಕರ್ತೃಗುರುಗಳ ಬಗ್ಗೆಯಾಗಲೀಯಾವುದೇ ಮಾಹಿತಿಗಳು ದೊರಕುವುದಿಲ್ಲವಾದರೂ ಮಠದಲ್ಲಿರುವ ತಾಮ್ರಪಟ್ಟಿಯ ಪ್ರಕಾರಶ್ರೀಮಠವು 1147ರಲ್ಲೇ ಅಸ್ತಿತ್ವದಲ್ಲಿದ್ದಿರಬಹುದು. ಆದರೆ ಆನಂತರದ ಇತಿಹಾಸದ ಬಗ್ಗೆಎಲ್ಲಿಯೂ ಸ್ಪಷ್ಟವಾದ ಉಲ್ಲೇಖವಿಲ್ಲ. ಬಹುಶಃ ಶ್ರೀಮಠವು ನೂರಾರು ವರ್ಷಗಳ ಕಾಲಖಾಲಿ ಉಳಿದಿರುವುದು ಇದಕ್ಕೆ ಕಾರಣ ಇರಬಹುದು.ಹೀಗೆ ಸ್ಥಗಿತಗೊಂಡಿದ್ದ ಶ್ರೀಮಠವನ್ನು ತಮ್ಮ ಸ ್ವಪ್ರಯತ್ನದಿಂದಪುನರಾರಂಭಗೊಳಿಸಿದವರು ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಶಿವಲಿಂಗ ಮುರುಘರಾಜೇಂದ್ರಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀಗಳು 1965ರ ಏಪ್ರಿಲ್ 04ರಲ್ಲಿ ಇದೇ ಗ್ರಾಮದಲ್ಲಿಜನಿಸಿದವರಾಗಿದ್ದು 2005ರ ಏಪ್ರಿಲ್ 29ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡುಪುನರಾರಂಭಿಸಿದ್ದಾರೆ.ಶ್ರೀಗಳು ಸಂಸ್ಕøತ, ವೈದಿಕ ಹಾಗೂ ಜ್ಯೋತಿಷ್ಯ ವಿಷಯಗಳಲ್ಲಿ ಅಧ್ಯಯನ ಮಾಡಿವಿದ್ವತ್ ಪಡೆದುಕೊಂಡಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರನ್ನು ಸಂಪಾದಿಸಿಕೊಂಡು ಅವರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ ಹಾಗೂ ಶ್ರೀಗಳುಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು “ವಚನನೇತ್ರ”, “ಜಾತಕಸೋತ್ತಗಳು”,“ಶಿವನೇತ್ರ” ಎಂಬಿತ್ಯಾದಿ ಪುಸ್ತಕಗಳನ್ನು ರಚಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ನವರಾತ್ರಿಯಲ್ಲಿ ಶ್ರೀದೇವಿಪುರಾಣ ಪಾರಾಯಣ, ಫಾಲ್ಗುಣ ಶುದ್ದ ತೃತೀಯದಂದು ಶ್ರೀ ರೇಣುಕಾ ಜಯಂತಿ ಹಾಗೂದವನದ ಹುಣ್ಣಿಮೆಗೆ ಶ್ರೀಮಠದ ಜಾತ್ರೆಗಳನ್ನು ನಡೆಸಲಾಗುತ್ತಿದ್ದು ಅಪಾರ ಸಂಖ್ಯೆಯ ಭಕ್ತರುಪಾಲ್ಗೊಂಡು ಶ್ರೀಗಳ ದರ್ಶನ ಪಡೆಯುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಯೋಗಿ ಸ್ವಾಮಿಗಳು
Date of Birth :
15-07-1967
Place :
ಬಿಜಗುಪ್ಪಿ, ರಾಮದುರ್ಗ ತಾ||
Pattadikara :
28-05-2009
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಭಜನೆ
ಮೇ ತಿಂಗಳಲ್ಲಿ ಶ್ರೀ ಮಠದ ಜಾತ್ರೆ, ಸಾವಯವ ಕೃಷಿ ವಿಚಾರ ಗೋಷ್ಠಿ,
ಸಾಮೂಹಿಕ ವಿವಾಹ ಹಾಗೂ ವಿವಿಧ ಕಾರ್ಯಕ್ರಮಗಳು
Institutions
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಡವಳೇಶ್ವರ ವಿರಕ್ತ ಮಠ
ಹರ್ಲಪುರ, ಕೆ. ತೊರಗಲ್ ಪೋ. - 591 114
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ