ಕರ್ತೃ – ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಬನ್ನೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 14 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 500 ವರ್ಷಗಳಇತಿಹಾಸವಿರುವ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀಮದ್ ರಂಭಾಪುರಿ ಪೀರದ ಶಾಖಾಮಠವಾದ ಶ್ರೀ ಚಿಕ್ಕಮಠವುಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಳಕ ಈ ಭಾಗದ ಜನರಲ್ಲಿ ಧಾರ್ಮಿಕಅರಿವನ್ನು ಮೂಡಿಸುವ ಕೆಲಸ ನಿರ್ವಹಿಸುತ್ತಿದೆ.ಶ್ರೀಮಠವು ಮೊದಲು ರಾಮದುರ್ಗದ ಹಿರೇಮಠದ ಶಾಖಾಮಠವಾಗಿಕಾರ್ಯನಿರ್ವಹಿಸುತ್ತಿದ್ದು ಕಾಲಾನಂತರ ಸ್ವತಂತ್ರ ಮಠವಾಗಿ ರೂಪುಗೊಂಡಿದೆ ಎಂದುಹೇಳಲಾಗುತ್ತಿದ್ದು ಇಲ್ಲಿಯವರೆಗೂ 17 ಜನ ಶ್ರೀಗಳು ಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಚನ್ನಮಲ್ಲಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಕಾರ್ಯಕ್ಷೇತ್ರವನ್ನು ಬನ್ನೂರಿಗೆ ವರ್ಗಾಯಿಸಿಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ.ಶ್ರೀ ಷ.ಬ್ರ. ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಿದ್ವಾಂಸರಾಗಿದ್ದುಸಂಸ್ಕøತ ಹಾಗೂ ವೇದಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದರು ಹಾಗೂ ಗುರುಗಳುಸ್ವತಃ ಆಯುರ್ವೇದ ಪಂಡಿತರಾಗಿ ಶ್ರೀಮಠದ ಭಕ್ತರಿಗೆ, ಗ್ರಾಮೀಣ ಪ್ರದೇಶದ ಜನರಿಗೆಆಯುರ್ವೇದ ಔಷದೋಪಚಾರ ಮಾಡಿ ಪ್ರಸಿದ್ದರಾಗಿದ್ದರು. ಶ್ರೀಗಳ ಕಾಲದಲ್ಲಿ ಶ್ರೀಮಠವುಪ್ರಗತಿದಾಯಕವಾಗಿ ಅಭಿವೃದ್ದಿ ಕಂಡಿದ್ದು ಶ್ರೀಗಳು 1982ರಲ್ಲಿ ಸಿದ್ದಲಿಂಗಶಿವಾಚಾರ್ಯರನ್ನು ಪಟ್ಟಕ್ಕೆ ತಂದು 1991ರ ಸೆಪ್ಟೆಂಬರ್ನಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹಿರಿಯಗುರುಗಳಿರುವಾಗಲೇ ಶ್ರೀಮಠಕ್ಕೆ ಪಟ್ಟಾಧಿಕಾರ ವಹಿಸಿಕೊಂಡಿದ್ದು ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿವಯೋಗಮಂದಿರದಲ್ಲಿ ಯೋಗ ಶಿಕ್ಷಣದ ಬಗ್ಗೆ ಪ್ರಾವಿಣ್ಯತೆ ಪಡೆದುಕೊಂಡಿದ್ದಾರೆ. ಶ್ರೀಗಳು ತಾವೇಸ್ವತಃ ಕಾಯಕಯೋಗಿಗಳಾಗಿ ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ಶ್ರೀಮಠದಆದಾಯವನ್ನು ಹೆಚ್ಚಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
01-12-1947
Place :
ದಂಡೋತಿ, ಚಿತ್ತಾಪುರ ತಾ||
Pattadikara :
1982
Photo :
Programs
ಭಾದ್ರಪದ ಮಾಸ ಆದ ನಂತರ ಚತುರ್ದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಚಿಕ್ಕಮಠ
ಬನ್ನೂರು - 591 130
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ