Shree Virakta Matha – Hukkeri

Shree Virakta Matha – Hukkeri Claimed

ಶ್ರೀ ವಿರಕ್ತ ಮಠ - ಹುಕ್ಕೇರಿ

Average Reviews

Description

ಶ್ರೀ ವಿರಕ್ತ ಮಠ – ಹುಕ್ಕೇರಿ

ಕರ್ತೃ – ಪೂಜ್ಯ ಶ್ರೀ ರಾಚೋಟೇಶ್ವರ ಶಿವಯೋಗಿಗಳು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಬಜಾರ್ ರೋಡ್ನಲ್ಲಿ 12ನೇಶತಮಾನದಲ್ಲೇ ಸ್ಥಾಪಿತಗೊಂಡಿತೆಂದು ಹೇಳಲಾದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನಕಾರ್ಯ ಚಟುವಟಿಕೆಗಳ ಮೂಲಕ ಪ್ರಚಲಿತದಲ್ಲಿದೆ. ಹನ್ನೆರಡನೇ ಶತಮಾನದಲ್ಲಿ ಶರಣರುಉಳವಿಗೆ ತೆರಳುವ ಮೊದಲು ಇಲ್ಲಿ ಅನೇಕ ಕಾಲ ನೆಲೆಗೊಂಡು ಅನುಷ್ಠಾನ ಕೈಗೊಂಡಿದ್ದುಆನಂತರ ಇಲ್ಲಿ ವಿರಕ್ತಮಠವು ಸ್ಥಾಪಿತಗೊಂಡಿತೆಂದು ಹೇಳಲಾಗಿದೆ.ಪೂಜ್ಯ ಶ್ರೀ ರಾಚೋಚೇಶ ್ವರ ಮಹಾಸ್ವಾಮಿಗಳನ್ನು ಶ್ರೀಮಠದಕರ್ತೃಗುರುಗಳೆಂದು ಹೆಸರಿಸಲಾಗಿದ್ದು ಶ್ರೀಗಳು ಸಂಚಾರ ಮೂರ್ತಿಗಳಾಗಿ ಲಿಂಗಾಯತಧರ್ಮದ ತತ್ವಗಳನ್ನು ಪ್ರಚುರಪಡಿಸುತ್ತಾ ಶ್ರೀಮಠವನ್ನು ಮುನ್ನಡೆಸಿದ್ದರು ಎಂದುತಿಳಿದುಬರುತ್ತದೆ. ಕರ್ತೃಗುರುಗಳ ನಂತರ ಶ್ರೀ ವೀರಭದ್ರ ಮಹಾಸ್ವಾಮಿಗಳು, ಶ್ರೀಮುದಿಬಸವ ಮಹಾಸ್ವಾಮಿಗಳು ಹಾಗೂ ಶ್ರೀ ಪ್ರಭು ಮಹಾಸ್ವಾಮಿಗಳು ಶ್ರೀಮಠವನ್ನುಮುನ್ನಡೆಸಿದ್ದಾರೆ.ಶ್ರೀಮಠದ ಐದನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿಯೆಡೆಗೆ ಸಾಗಿದ್ದು ಶ್ರೀಗಳು ಸಂಸ್ಕøತ ಪಾಠಶಾಲೆಯನ್ನು ಪ್ರಾರಂಭಿಸಿದ್ದರೆಂದು ತಿಳಿದುಬರುತ್ತದೆ. ಆನಂತರ ಬಂದ ಹಿಂದಿನ ಶ್ರೀಗಳಾದಶ್ರೀ ಮ.ನಿ.ಪ್ರ. ಕುಮಾರ ಮಹಾಸ್ವಾಮಿಗಳು ಧಾರ್ಮಿಕ ಆಚರಣೆಗಳ ಜೊತೆಗೆಸಾಮಾಜಿಕವಾಗಿಯೂ ಚಟುವಟಿಕೆಗಳನ್ನು ವಿಸ್ತರಿಸಿದ್ದು ಭಕ್ತರನ್ನು ಸಂಪಾದಿಸಿದ್ದರು. ತಮ್ಮಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುತ್ತಿದ್ದ ಶ್ರೀಗಳು2007ರ ಅಕ್ಟೋಬರ್ 10ರಂದು ಲಿಂಗೈಕ್ಯರಾದರು.ಹಿಂದಿನ ಶ್ರೀಗಳು ಲಿಂಗೈಕ್ಯರಾದ ನಂತರ 1 ವರ್ಷ ಖಾಲಿ ಉಳಿದಿದ್ದ ಶ್ರೀಮಠಕ್ಕೆ2008ರ ಆಗಸ್ಟ್ 22ರಂದು ಬೆಳಗಾಂ ರುದ್ರಾಕ್ಷಿ ಮಠದ ಶ್ರೀ ಮ.ನಿ.ಪ್ರ. ಡಾ. ಸಿದ್ದರಾಮಮಹಾಸ್ವಾಮಿಗಳು ಈಗಿನ ಶ್ರೀಗಳಾದ ಪೂಜ್ಯ ಶ್ರೀ ಆನಂದ ಸ್ವಾಮಿಗಳನ್ನುನೇಮಕಗೊಳಿಸಿದರು. ಶ್ರೀ ಆನಂದ ಸ್ವಾಮಿಗಳು ಶಿವಯೋಗ ಮಂದಿರದಲ್ಲಿ ಐದು ವರ್ಷಗಳಕಾಲ ವಚನ ಸಾಹಿತ್ಯ, ಆಧ್ಯಾತ್ಮ, ಸಂಸ್ಕøತ ವಿಷಯಗಳಲ್ಲಿ ವ್ಯಾಸಂಗ ಮಾಡಿದ್ದು ನಂತರಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ 8 ವರ್ಷಗಳ ಕಾಲ ವಿದ್ಯಾಭ್ಯಾಸ ಪೂರ್ಣಗೊಳಿಸಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕ (ಎಂ.ಎ) ಪದವಿ ಪಡೆದಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಆನಂದ ಸ್ವಾಮಿಗಳು
Date of Birth :
10-08-1985
Place :
ಬೆಳವಲುಕೊಪ್ಪ, ಬಾದಾಮಿ ತಾ||
Pattadikara :
22-08-2008
Photo :

Programs

ಪ್ರತಿ ಅಮವಾಸೆಗೆ ಮಾಸಿಕ "ಶಿವಾನುಭವ ಗೋಷ್ಠಿ"
ಪ್ರತಿ ಹುಣ್ಣಿಮೆಗೆ "ಭಾವೈಕ್ಯ ಬೆಳದಿಂಗಳು" ಕಾರ್ಯಕ್ರಮ
ಬಸವ ಜಯಂತಿಯಂದು ವಿಶೇಷ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ
ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಶ್ರೀ ಮ.ನಿ.ಪ್ರ. ಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ

Institutions

ಕಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ವಿರಕ್ತ ಮಠ
ಹುಕ್ಕೇರಿ - 591 309
ಬೆಳಗಾವಿ ಜಿಲ್ಲೆ

Map

Near by Places

ಸಂಕೇಶ್ವರ - 13 ಕಿ.ಮೀ
ಗೋಕಾಕ್ - 30 ಕಿ.ಮೀ
ಚಿಕ್ಕೋಡಿ - 24 ಕಿ.ಮೀ
ಬೆಳಗಾವಿ - 50 ಕಿ.ಮೀ

Statistic

6 Views
0 Rating
0 Favorite
0 Share
error: Content is protected !!