Shree Gurushanteshwara Samsthana Hirematha – Hukkeri

Shree Gurushanteshwara Samsthana Hirematha – Hukkeri Claimed

ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ - ಹುಕ್ಕೇರಿ

Average Reviews

Description

ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ – ಹುಕ್ಕೇರಿ

ಕರ್ತೃ – ಶ್ರೀ ಷ.ಬ್ರ. ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರಸಂಸ್ಥಾನ ಹಿರೇಮಠದ ಹೆಸರು ಶಾಶ್ವತವಾಗಿದೆ. ಈ ಭಾಗದ ವೀರಶೈವ ಮಠಗಳಲ್ಲಿ ಪ್ರಾಚೀನಮಠವಾದ ಶ್ರೀ ಗುರುಶಾಂತೇಶ್ವರ ಹಿರೇಮಠವು 9ನೇ ಶತಮಾನಕ್ಕೂ ಪೂರ್ವದ್ದು ಎಂದುಅಭಿಪ್ರಾಯಿಸಲಾಗಿದೆ. ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯರು ಈಭಾಗದಲ್ಲಿ ಸಂಚರಿಸುವಾಗ ಅವರ ಅನುಯಾಯಿಗಳಲ್ಲಿ ಒಬ್ಬರಾದ ಶ್ರೀ ಗುರುಶಾಂತೇಶ್ವರರಿಗೆಈ ಭಾಗದಲ್ಲಿ ಧರ್ಮಜಾಗೃತಿ ಮೂಡಿಸಲು ಸೂಚಿಸಿದರೆಂದು, ಅದರಂತೆ ಶ್ರೀಗುರುಶಾಂತೇಶ್ವರರು ವೀರಶೈವದ ಮಹತಿ, ತ್ರಿವಿಧ ದಾಸೋಹ, ಮಾನವೀಯ ಅಂತಃಕರಣ,ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ತಾತ್ವಿಕ ವಿವೇಚನೆ ಮುಂತಾದವುಗಳನ್ನುಬಿಂಬಿಸುತ್ತ ನೈತಿಕ ಜಾಗೃತಿಗೈಯುತ್ತ ಸಂಚರಿಸಿ ಕೊನೆಗೆ ಹುಕ್ಕೇರಿಯಲ್ಲಿ ನೆಲೆನಿಂತರೆಂಬುದುಪ್ರತೀತಿ. ಹೀಗೆ ಜನಮನ ಸೂರೆಗೊಂಡ ಶ್ರೀಗಳು ಲಿಂಗದಲ್ಲಿ ಬಯಲಾದ ಈ ಕ್ಷೇತ್ರವೇನಂತರ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠವೆಂದು ಹೆಸರಾಯಿತು.135ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ನಿರಂತರವಾಗಿ ಸಾಗಿ ಬಂದಿದ್ದು 58ಜನ ಶ್ರೀಗಳು ಶ್ರೀಮಠದ ಅಧಿಕಾರ ನಡೆಸಿ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ್ದರೆಂದುತಿಳಿದು ಬರುತ್ತಿದ್ದು ಇದೀಗ 59ನೇ ಪೀಠಾಧಿಪತಿಗಳು ಆಡಳಿತ ನಡೆಸುತ್ತಿದ್ದಾರೆ.ಪರಂಪರೆಯ ಮೊದಲ 54 ಜನ ಶ್ರೀಗಳ ಹೆಸರುಗಳಷ್ಟೇ ದೊರೆಯುತ್ತಿದ್ದು ಅವರ ಇತಿಹಾಸಕಾಲಚಕ್ರದಲ್ಲಿ ಕರಗಿ ಕಣ್ಮರೆಯಾಗಿದೆ. ಶ್ರೀಮಠದ 55ನೇ ಪೀಠಾಧಿಪತಿಗಳಾಗಿ ಬೆಳಗಿದ ಲಿಂ.ಶ್ರೀ. ಷ.ಬ್ರ. ಬಸವಲಿಂಗ ಶಿವಾಚಾರ್ಯರು ಮಹಾತಪಸ್ವಿಗಳು. ವೇದಾಗಮ, ಉಪನಿಷತ್ತು,ಪಂಚಪೀಠಗಳು, ಬಸವಾದಿ ಶರಣರು ಹಾಗೂ ವಚನಸಾಹಿತ್ಯಗಳನ್ನು ಆಳವಾಗಿಅಭ್ಯಸಿಸಿದ್ದರು. ಯೋಗದ ಬಗೆಗೆ ವಿಶೇಷ ಆಸ್ಥೆ ವಹಿಸಿದ್ದು ಶ್ರೀಗಳು ಯೋಗದ ಅಭ್ಯಾಸಕ್ಕೆ,ಯೋಗ ಸಾಧನೆಗೆ ಬಹುಸಮಯವನ್ನು ವಿನಿಯೋಗಿಸುತ್ತಿದ್ದರು. ಇಂತು ಯೋಗದಕುರಿತಾಗಿ ಭಕ್ತರಿಗೆ ಸೂಕ್ತ ಯೋಗ ತರಬೇತಿಗಳನ್ನು ಗ್ರಹಿಸುತ್ತಿದ್ದರು. ಪುರಾಣ ಪ್ರವಚನಗಳಮುಖಾಂತರ ಸಮಾಜವನ್ನು ಸದಾ ಜಾಗೃತವಾಗಿರಿಸುತ್ತಿದ್ದರು.ತದ ನಂತರ 56ನೇ ಪೀಠಾಧಿಪತಿಗಳಾಗಿ ಪೀಠ ಬೆಳಗಿದ ಶ್ರೀ.ಷ.ಬ್ರ. ಚನ್ನಬಸವಶಿವಾಚಾರ್ಯರು ತಪಸ್ವಿಗಳು ಹಾಗೂ ಲಿಂಗಲೀಲಾ ವಿನೋದಿಗಳು. ವೀರಶೈವ ಸಿದ್ದಾಂತತತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ್ದರು. ತಮ್ಮ ಗುರುಗಳಾದ ಶ್ರೀ ಬಸವಲಿಂಗಶಿವಾಚಾರ್ಯರಂತೆ ಯೋಗಶಾಸ್ತ್ರದಲ್ಲಿ ವಿಶೇಷ ಆಸಕ್ತಿಯುಳ್ಳವರಾಗಿದ್ದರು. ಪ್ರವಚನಪ್ರವೀಣರಾಗಿದ್ದ ಶ್ರೀಗಳು ವೇದ, ಆಗಮ, ಉಪನಿಷತ್ತು, ಬಸವಾದಿ ಶಿವಶರಣರವಚನಗಳನ್ನು ಉದಾಹರಣೆ ಸಹಿತ ವಿವೇಚಿಸುತ್ತಿದ್ದರು ಎಂದು ತಿಳಿದುಬರುತ್ತದೆ.ತದನಂತರ 57ನೇ ಪೀಠಾಧಿಪತಿಗಳಾಗಿ ಪೀಠದ ಪರಂಪರೆಯನ್ನುಮುಂದುವರೆಸಿದ ಶ್ರೀ.ಷ.ಬ್ರ. ಶಂಕರಲಿಂಗ ಶಿವಾಚಾರ್ಯರು ಶಾಸ್ತ್ರಿಯ ಸಂಗೀತವನ್ನುಅಭ್ಯಸಿಸಿದ್ದರು. ತಮ್ಮ ವಿಶಿಷ್ಯ ಕಂಠಸಿರಿಯಿಂದ ವೀರಶೈವ ಪುರಾಣಗಳನ್ನು ಶಾಸ್ತ್ರೀಯವಾಗಿಭಕ್ತರ ಮನಸ್ಸಿಗೆ ನಾಟುವಂತೆ ಪ್ರಸ್ತುತಪಡಿಸುತ್ತಿದ್ದರು. ಬಸವಾದಿ ಶರಣರ, ದಾಸರ, ನಿಜಗುಣಶಿವಯೋಗಿಗಳ ರಚನೆಗಳನ್ನು ರಾಗಬದ್ದವಾಗಿ ಹಾಡುತ್ತ ಅವುಗಳ ತಾತ್ಪರ್ಯವನ್ನು ಜನರಿಗೆವಿವರಿಸುತ್ತ ಸಮಾಜೋದ್ಧಾರಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ತದನಂತರ 58ನೇ ಪೀಠಾಧಿಪತಿಗಳಾಗಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ. ಷ.ಬ್ರ.ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಖಾಂಡ ಪಂಡಿತರು. ವೇದಾಗಮ,ಉಪನಿಷತ್ತುಗಳನ್ನು ಆಳವಾಗಿ ಅರಿತಿದ್ದವರು. ಪಂಚಪೀಠಗಳ, ಬಸವಾದಿ ಶಿವಶರಣರಕುರಿತಂತೆ ಜನರಲ್ಲಿ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಮನೆ-ಮನಗಳಲ್ಲಿವೀರಶೈವ ವಿಧಿವಿಧಾನಗಳ ಆಚರಣೆಗೆ ಸ್ಪಂದಿಸುವಂತೆ ವಿಶೇಷ ಕಾಳಜಿವಹಿಸಿಅನುಷ್ಠಾನಗೊಳಿಸುತ್ತಲಿದ್ದರು. ಇವರ ಭಕ್ತ ಬಳಗ ಹಾಗೂ ಶಿಷ್ಯಬಳಗಗಳೆರಡೂವಿಸ್ತಾರವಾಗಿ ಹರಡಿಕೊಂಡಿದ್ದವು. ಹುಕ್ಕೇರಿಯ ಪಂಡಿತ ಸದಾಶಿವ ಶಾಸ್ತ್ರಿಗಳು ಈ ಭಾಗಕ್ಕೆಶ್ರೀ ವಿರೂಪಾಕ್ಷ ಶಿವಾಚಾರ್ಯರು ಅನುಗ್ರಹಿಸಿದ ಅನನ್ಯ ಕೊಡುಗೆ.ಆನಂತರ 1992ರ ಮೇ 05ರಂದು ಶ್ರೀಮಠದ 59ನೇ ಪೀಠಾಧಿಪತಿಗಳಾಗಿಪೀಠವನ್ನು ಅಲಂಕರಿಸಿದವರೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ 136ಮಹಾಸ್ವಾಮಿಗಳು. ಶಿವಯೋಗ ಮಂದಿರದಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದ ಶ್ರೀಗಳುಮೈಸೂರಿನ ಜಪದಕಟ್ಟೆ ಮಠದಲ್ಲಿ ವಾಸ್ತವ್ಯ ಹೂಡಿ ಸಂಸ್ಕøತ ಅಧ್ಯಯನ, ಪದವಿ ಶಿಕ್ಷಣಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪೂರೈಸಿದರು.ಶಿಕ್ಷಣ ಪೂರೈಸಿದ ಶ್ರೀಗಳು 1992ರಲ್ಲಿ ಹುಕ್ಕೇರಿಗೆ ಆಗಮಿಸಿ ಶ್ರೀಮಠಕ್ಕೆಪಟ್ಟಾಧಿಕಾರದ ಅನುಗ್ರಹ ಪಡೆದರು. ಪಟ್ಟಕ್ಕೆ ಬಂದ ಕೆಲದಿನಗಳಲ್ಲಿಯೇ “ಸಾಧನ ಕಿರಣ”ಎಂಬ ಬಳಗ ಸ್ಥಾಪಿಸಿ 1993 ರಿಂದ 1996ರ ವರೆಗೆ ಯುವ ಜಾಗೃತಿಗಾಗಿ ಉತ್ತರಕರ್ನಾಟಕದಾದ್ಯಂತ ಸಂಚರಿಸಿದರು. ಜನರಲ್ಲಿನ ಮೂಡನಂಬಿಕೆ, ಕಂದಾಚಾರ,ವ್ಯಸನಗಳನ್ನು ದೂರಮಾಡಲು ಶ್ರಮಿಸಿದರು. ದೇವದಾಸಿ ಪದ್ಧತಿಯ ವಿರುದ್ಧಹೋರಾಡಿದರು. ಹೀಗೆ ಶ್ರೀಗಳು ಸಮಾಜದಲ್ಲಿನ ದುಷ್ಟ ಸಂಪ್ರದಾಯಗಳನ್ನು ಬೇರುಸಮೇತ ಕಿತ್ತೊಗೆಯುವ ಸಂಕಲ್ಪ ಮಾಡಿದ್ದು ಇಂದಿಗೂ ಮುಂದುವರೆಸಿಕೊಂಡುಬರುತ್ತಿದ್ದಾರೆ.ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾಧಿಸಿದ ಕಾರ್ಯ ಅಪಾರವಾದದ್ದು23/2/2003ರಲ್ಲಿ ಶ್ರೀ ಗುರು ಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ (ರಿ.) ಸ್ಥಾಪಿಸಿ ಅದರಆಶ್ರಯದಲ್ಲಿ ಹತ್ತು ಹಲವಾರು ಅಂಗ ಸಂಸ್ಥೆಗಳನ್ನು ಹುಟ್ಟು ಹಾಕಿ ಸಮಾಜದ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. 2001 ರಲ್ಲಿ ಶ್ರೀ ಶಂಕರಲಿಂಗ ಶಿವಾಚಾರ್ಯ ಸಂಗೀತ ಶಾಲೆ, 2009ರಲ್ಲಿನಟರಾಜ ನಾಟ್ಯಶಾಲೆ, ಶ್ರೀ ವಿರೂಪಾಕ್ಷ ಶಿವಾಚಾರ್ಯ ಸಂಸ್ಕøತ ವೈದಿಕ ಪಾಠಶಾಲೆ,ದೂರಶಿಕ್ಷಣ ಅಧ್ಯಯನ ಕೇಂದ್ರ ಹೀಗೆ ಕಲೆ, ಸಂಸ್ಕøತಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.ಈ ಗುರುಶಾಂತೇಶ್ವರ ಹಿರೇಮಠದಲ್ಲಿ ಪ್ರತಿವರ್ಷ ವಿಜೃಂಭಣೆಯ ದಸರಾಮಹೋತ್ಸವ ಆಯೋಜನೆಗೊಳ್ಳುತ್ತಿದ್ದು ಆ ಸಮಯದಲ್ಲಿ ಅರ್ಹ ಸಾಧಕ ಗಣ್ಯರಿಗೆ“ರೇಣುಕಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಚಂದ್ರಶೇಖರ ಶಿವಾಚಾರ್ಯರ ಸಾಧನೆ ಅನನ್ಯ.ಅವರ ಈ ಸಾಧನೆಗಳಿಗೆ ವೃತ್ತಿಶ್ಚೈತನ್ಯ ರತ್ನ ಪ್ರಶಸ್ತಿ, ಅಕ್ಷರ ದಾಸೋಹ ಶ್ರೀ ಪ್ರಶಸ್ತಿ, ಕರ್ನಾಟಕವಿಕಾಸರತ್ನ ಪ್ರಶಸ್ತಿ, ಕಾಯಕಯೋಗಿ ಪ್ರಶಸ್ತಿ, ಆರೂಡ ಸದ್ಭಾವನಾ ಪ್ರಶಸ್ತಿಗಳು ಸೇರಿದಂತೆಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

Swamiji

Swamiji Name :
ಶ್ರೀ ಷ.ಬ್ರ. ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-7-1970
Place :
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ
Pattadikara :
05-05-1992
Photo :

Programs

ದಸರದಲ್ಲಿ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಸಂಗೀತ ಪಾಠಶಾಲೆ ಸಂಸ್ಕøತ ವೇದ ಪಾಠಶಾಲೆ
ಭರತನಾಟ್ಯ ಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ದೂರ ಶಿಕ್ಷಣ ಅಧ್ಯಯನ ಕೇಂದ್ರ

Photos

Full Address Kannada

ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ
ಹುಕ್ಕೇರಿ - 591 309 ಹುಕ್ಕೇರಿ
ತಾ||, ಬೆಳಗಾವಿ ಜಿಲ್ಲೆ

Map

Near by Places

ಸಂಕೇಶ್ವರ - 13 ಕಿ.ಮೀ
ಗೋಕಾಕ್ - 30 ಕಿ.ಮೀ
ಚಿಕ್ಕೋಡಿ - 24 ಕಿ.ಮೀ
ಬೆಳಗಾವಿ - 50 ಕಿ.ಮೀ

Statistic

4 Views
0 Rating
0 Favorite
0 Share
error: Content is protected !!