Shree Guru Prabhudeva Virakta Matha -Ghodageri
Claimed
ಶ್ರೀ ಗುರು ಪ್ರಭುದೇವ ವಿರಕ್ತ ಮಠ - ಘೋಡಗೇರಿ
Average Reviews
Description
ಶ್ರೀ ಗುರು ಪ್ರಭುದೇವ ವಿರಕ್ತ ಮಠ – ಘೋಡಗೇರಿ
ಶ್ರೀ ಮ.ನಿ.ಪ್ರ. ಕಾಶಿನಾಥ ಸ್ವಾಮಿಗಳು
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮವು ತಾಲ್ಲೂಕುಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಶ್ರೀಗುರು ಪ್ರಭುದೇವ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠದ ಕರ್ತೃಗುರುಗಳು ಹಾಗೂ ಈ ಹಿಂದಿನ ಪರಂಪರೆಯ ಬಗ್ಗೆ ಹೆಚ್ಚಿನಮಾಹಿತಿಗಳ ಲಭ್ಯತೆಯಿಲ್ಲ. ಆದರೆ ಅಧಿಕಾರ ನಡೆಸಿರುವ ಎಲ್ಲಾ ಗುರುಗಳು ಶ್ರೀಮಠದಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಪ್ರಸ್ತುತ ಶ್ರೀ ಮ.ನಿ.ಪ್ರ. ಕಾಶಿನಾಥಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸುತ್ತಿದ್ದು ತಮ್ಮ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ.1940ರ ಮೇ 15 ರಂದು ಹುಕ್ಕೇರಿ ತಾಲ್ಲೂಕಿನ ನೇರ್ಲಿ ಗ್ರಾಮದಲ್ಲಿ ಜನಿಸಿದಶ್ರೀಗಳು ಬಾಲ್ಯದಿಂದಲೂ ಆಧ್ಯಾತ್ಮಿಕತೆಯತ್ತ ಒಲವು ಹೊಂದಿದವರು. ಪ್ರಾಥಮಿಕವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಶಿವಯೋಗಮಂದಿರದಲ್ಲಿ ಅಭ್ಯಸಿಸಿ ಹೆಚ್ಚಿನಅಧ್ಯಯನಕ್ಕಾಗಿ ಕಾಶಿಗೆ ತೆರಳಿ ಅಭ್ಯಸಿಸಿದರು. ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರಘೋಡಗೇರಿ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಶ್ರೀ ಗುರು ಪ್ರಭುದೇವ ವಿರಕ್ತ ಮಠದಅಧಿಕಾರವನ್ನು 1969ರ ಮೇ 22ರಂದು ಸ್ವೀಕರಿಸಿದರು.ಗುರುಗಳು ತಮ್ಮ ಕ್ರಿಯಾಶೀಲ ವ್ಯಕ್ತಿತ ್ವದಿಂದ ಕಾರ್ಯಕ್ರಮಗಳನ್ನುಆಯೋಜಿಸುತ್ತಾ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನುಅಭಿವೃದ್ದಿಗೊಳಿಸಿದ್ದಾರೆ ಹಾಗೂ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಜನಿಸಿದಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹಳ್ಳಿಯಲ್ಲಿ ಶ್ರೀ ಕುಮಾರೇಶ್ವರಸ್ಮಾರಕ ಭವನವನ್ನು ನಿರ್ಮಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.ಗುರುಗಳು ಉತ್ತಮ ವಾಗ್ಮಿಗಳಾಗಿದ್ದು ತಮ್ಮ ವಿದ್ವತ್ ಉಪನ್ಯಾಸಗಳಿಂದಹೆಸರಾಗಿದ್ದಾರೆ. ನಾಡಿನಾದ್ಯಂತ ಅಸಂಖ್ಯಾತ ಉಪನ್ಯಾಸ ಮಾಲಿಕೆಗಳನ್ನು ಪ್ರಸ್ತುತಪಡಿಸಿರುವ ಶ್ರೀಗಳು ಆ ಮುಖೇನ ಭಕ್ತರಿಗೆ ಕಂದಾಚಾರ, ಮೂಡನಂಬಿಕೆಗಳ ಬಗ್ಗೆ ಅರಿವುಮೂಡಿಸುತ್ತಾ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಕಾಶಿನಾಥ ಸ್ವಾಮಿಗಳು
Date of Birth :
15-05-1940
Place :
ನೇರ್ಲಿ, ಹುಕ್ಕೇರಿ ತಾ||
Pattadikara :
22-05-1969
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ನವರಾತ್ರಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಗುರು ಪ್ರಭುದೇವ ವಿರಕ್ತ ಮಠ
ಘೋಡಗೇರಿ - 591 107
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ