Shree Guru Nirvaneshawara Viraktamatha – Yogikolla
Claimed
ಶ್ರೀ ಗುರು ನಿರ್ವಾಣೇಶ್ವರ ವಿರಕ್ತಮಠ - ಯೋಗಿಕೊಳ್ಳ
Average Reviews
Description
ಶ್ರೀ ಗುರು ನಿರ್ವಾಣೇಶ್ವರ ವಿರಕ್ತಮಠ – ಯೋಗಿಕೊಳ್ಳ
ಕರ್ತೃ – ಪೂಜ್ಯ ಶ್ರೀ ಅಲ್ಲಮ ಪ್ರಭು ದೇವರು ಪೂಜ್ಯ ಶ್ರೀ ನಿರ್ವಾಣೇಶ್ವರರು
ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಯೋಗಿಕೊಳ್ಳ ಗ್ರಾಮದಹೊರವಲಯದ ಗುಡ್ಡದ ಪಕ್ಕದಲ್ಲಿ ಹರಿಯುವ ಶ್ರೀ ಮಾರ್ಕಂಡಯ್ಯ ನದಿಯ ದಡದಲ್ಲಿಸ್ಥಾಪಿತಗೊಂಡಿರುವ ಶ್ರೀ ಗುರು ನಿರ್ವಾಣೇಶ್ವರ ವಿರಕ್ತ ಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದಿದೆ.ಶ್ರೀ ಮಾರ್ಕಂಡಯ್ಯ ನದಿ ದಡದ ಗುಡ್ಡದ ದುರ್ಗಮ ಪ್ರದೇಶದಲ್ಲಿ ಶ್ರೀ ಅಲ್ಲಮಪ್ರಭುದೇವರು ಅನುಷ್ಠಾನದಲ್ಲಿದ್ದರೆಂದು ಪ್ರತೀತಿ. ಕಲ್ಯಾಣ ಕ್ರಾಂತಿಯ ನಂತರ ಅಲ್ಲಿಂದಹೊರಡುವ ಶ್ರೀ ಪ್ರಭುದೇವರು ಅಲ್ಲಲ್ಲಿ ನೆಲೆಗೊಳ್ಳುತ್ತಾ ಈ ಸ್ಥಳದಲ್ಲೂ ನೆಲೆಗೊಂಡಿದ್ದರೆಂದುಹೇಳಲಾಗುತ್ತದೆ ಆದರೆ ಇದಕ್ಕೆ ಸೂಕ್ತ ಪುರಾವೆಗಳು ದೊರಕುವುದಿಲ್ಲ.ನಂತರದ ಸಮಯದಲ್ಲಿ ರುದ್ರರಮಣೀಯ ದುರ್ಗಮ ಪ್ರದೇಶವಾಗಿದ್ದ ಈಸ್ಥಳದಲ್ಲಿ ಪರಮ ಪೂಜ್ಯ ಮಹಾತಪಸ್ವಿಗಳಾದ ಶ್ರೀ ಗುರು ನಿರ್ವಾಣೇಶ್ವರ ಶಿವಯೋಗಿಗಳುತಪಸ್ಸನ್ನಾಚರಿಸಿ ಈ ಸ್ಥಳವನ್ನು ಯೋಗಭೂಮಿಯನ್ನಾಗಿಸಿದರು ಹಾಗೂ ತಮ್ಮ ಧಾರ್ಮಿಕಆಚರಣೆಗಳು, ಅನುಷ್ಠಾನಾದಿಗಳಿಂದ ಮನೆಮಾತಾದ ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿಭಕ್ತರನ್ನುದ್ದರಿಸಿದ್ದಾರೆ.ಆನಂತರದಲ್ಲಿ ತೀರಾ ಇತ್ತೀಚೆಗೆ ಕಳೆದ ಶತಮಾನದಲ್ಲಿ ಪೂಜ್ಯ ಶ್ರೀ ನಿರೂಪಾದಿಸ್ವಾಮಿಗಳು ಶ್ರೀಮಠದಲ್ಲಿ ಅನುಷ್ಠಾನಗೊಂಡು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ,ಬಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು ಹಾಗೂ ತಮ್ಮ ಕಾರ್ಯಕ್ರಮಗಳಮೂಲಕ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆ ತಿಳಿಸುತ್ತಾ ಅವರಿಗೆಸನ್ಮಾರ್ಗ ನೀಡುತ್ತಿದ್ದರು. ಇವರ ನಂತರದ ಕೆಲಕಾಲ ಪೂಜ್ಯ ಶಾಂತಾ ಮಾತಾಜಿಯವರುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದು 2002ರ ಮಾರ್ಚ್ 07ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ವೀರಭದ್ರ ಸ್ವಾಮಿಗಳು ಶ್ರೀಮಠದಉತ್ತಾರಾಧಿಕಾರಿಗಳಾಗಿ ಭಕ್ತರ ಸಹಕಾರ ಪಡೆದು ಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ.ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಶ್ರಾವಣ ಮಾಸದ4ನೇ ಸೋಮವಾರ ಶ್ರೀಮಠದ ಜಾತ್ರೆಯನ್ನು ನಡೆಸುತ್ತಾರೆ ಹಾಗೂ ಡಿಸೆಂಬರ್ 24 ರಂದುಲಿಂ|| ಶ್ರೀ ನಿರುಪಾದಿ ಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವವನ್ನುಹಮ್ಮಿಕೊಳ್ಳುತ್ತಾರೆ.
Swamiji
Swamiji Name :
ಪೂಜ್ಯ ಶ್ರೀ ವೀರಭದ್ರ ಸ್ವಾಮಿಗಳು
Date of Birth :
19-03-1987
Place :
ಶಿವಪುರ-ಕೊಣ್ಣೂರು, ಗೋಕಾಕ್ ತಾ||
Photo :
Programs
ಮಾರ್ಚ್ 19 ರಂದು
ಲಿಂ|| ಶ್ರೀ ಶಾಂತಾ ಮಾತಾಜೀಯವರ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ
4ನೇ ಸೋಮವಾರ ಶ್ರೀಮಠದ ಜಾತ್ರೆ
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ
ಡಿಸೆಂಬರ್ 24ರಂದು
ಲಿಂ|| ಶ್ರೀ ನಿರುಪಾದಿ ಮಹಾಸ್ವಾಮಿಗಳ ಪುಣ್ಯಾರಾಧನೆ
ಪ್ರತಿ ದಿನ ಅಂಬ್ಲಿ ದಾಸೋº
Photos
Full Address Kannada
ಶ್ರೀ ಗುರು ನಿರ್ವಾಣೇಶ್ವರ ವಿರಕ್ತ ಮಠ
ಯೋಗಿಕೊಳ್ಳ, ಕಡಬುಗಟ್ಟಿ ಪೋಸ್ಟ್
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ