ಕರ್ತೃ – ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು (ಚೌಕೇಶ್ವರರು)
ಬೆಳಗಾಂ ಜಿಲ್ಲೆ ಗೋಕಾಕ್ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ.ಗದ್ದುಗೆ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರಬಹುದಾದ ಶ್ರೀ ಚೌಕಿ ಮಠವು ತದ ನಂತರಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳ ಕಾಲದಲ್ಲಿ ಪ್ರಚಲಿತಕ್ಕೆ ಬಂದಿದೆ. ಶ್ರೀ ಚೌಕಿಮಠದಕಾಲಮಾನದ ಬಗ್ಗೆ ಸ್ಪಷ್ಟವಾದ ಮಾಹಿತಿಗಳ ಅಲಭ್ಯತೆ ಇದ್ದು ಶ್ರೀಮಠವು ಮೊದಲು ಊರಹೊರಗೆ ಸ್ಥಾಪಿತಗೊಂಡಿತ್ತೆಂದು ನಂತರದಲ್ಲಿ ಊರ ಒಳಗೆ ಸ್ಥಳಾಂತರಗೊಂಡಿದೆಯೆಂದುತಿಳಿದುಬರುತ್ತದೆ.ಶ್ರೀಮಠದ ಕರ್ತೃಗುರುಗಳು ಶ್ರೀ ಗದ್ದುಗೆ ಮಹಾಸ್ವಾಮಿಗಳಾದರೂ ನಂತರದಪರಂಪರೆಯಲ್ಲಿ ಬಂದಿರುವ ಶ್ರೀ ಪ್ರಭು ಮಹಾಸ್ವಾಮಿಗಳ ನಂತರದ ಇತಿಹಾಸವುಲಭ್ಯವಾಗುತ್ತದೆ. ಶ್ರೀ ಪ್ರಭು ಮಹಾಸ್ವಾಮಿಗಳು ಸುಮಾರು 19ನೇ ಶತಮಾನದಲ್ಲಿಶ್ರೀಮಠದಲ್ಲಿ ಅಧಿಕಾರ ನಡೆಸಿದ್ದು ಅಸಂಖ್ಯಾತ ಭಕ್ತರನ್ನು ಸಂಪಾದಿಸಿಕೊಂಡು ಶ್ರೀಮಠವನ್ನುಮುನ್ನಡೆಸಿದ್ದಾರೆ ಹಾಗೂ ಶ್ರೀಗಳನ್ನು ಭಕ್ತರು ಶ್ರೀ ಚೌಕಿಯಪ್ಪ ಸ್ವಾಮಿಗಳೆಂದೆಕರೆಯುತ್ತಿದ್ದರೆಂದು ಆ ಕಾರಣಕ್ಕೆ ಶ್ರೀಮಠಕ್ಕೆ ಶ್ರೀ ಚೌಕಿಮಠ ಎಂಬ ಹೆಸರು ಬಂದಿದೆ ಎಂದುಹೇಳಲಾಗಿದೆ.ಶ್ರೀ ಪ್ರಭು ಮಹಾಸ್ವಾಮಿಗಳ ನಂತರದ ಪರಂಪರೆಯಲ್ಲಿ ಶ್ರೀ ಮಹಾದೇವಮಹಾಸ್ವಾಮಿಗಳು, ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಅಧಿಕಾರ ನಡೆಸಿದ್ದಾರೆಂದುತಿಳಿದುಬರುತ್ತದೆ. ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಶಿವಪೂಜಾನಿಷ್ಠರಾಗಿ ಸದಾಭಕ್ತರೊಂದಿಗೆ ಒಡನಾಟ ಇಟ್ಟುಕೊಂಡು ಅವರಿಗೆ ಸೂಕ್ತಮಾರ್ಗದರ್ಶನ ಮಾಡುತ್ತಾಶ್ರೀಮಠವನ್ನು ಹೆಚ್ಚು ಪ್ರಸಿದ್ದಿಗೆ ತಂದಿದ್ದಾರೆ ಹಾಗೂ ತಮ್ಮ ಇಳಿವಯಸ್ಸಿನಲ್ಲಿ ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭುಲಿಂಗ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕಮಾಡಿಕೊಂಡು 1987ರ ಜೂನ್ 08ರಲ್ಲಿ ಪಟ್ಟಾಧಿಕಾರದ ಅನುಗ್ರಹವನ್ನು ನೀಡಿದರು.ಶ್ರೀ ಮ.ನಿ.ಪ್ರ. ಪ್ರಭುಲಿಂಗ ಸ್ವಾಮಿಗಳು ಅಧಿಕಾರಕ್ಕೆ ಬಂದು ಮಠವನ್ನು ಅಭಿವೃದ್ದಿಪಥದತ್ತ ಮುನ್ನಡೆಸಿದ್ದಾರೆ ಹಾಗೂ ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರಾವಣಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನುನಡೆಸುತ್ತಾರೆ ಹಾಗೂ ದವನದ ಹುಣ್ಣಿಮೆಗೆ ಶ್ರೀ ಘಟ್ಟಗಿ ಬಸವೇಶ್ವರ ಜಾತ್ರಾಮಹೋತ್ಸವವನ್ನು ಆಯೋಜಿಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪ್ರಭುಲಿಂಗ ಸ್ವಾಮಿಗಳು
Date of Birth :
1967
Place :
ಕಲ್ಲಹಂಗರಗಿ, ಜೀವರ್ಗಿ ತಾ||
Pattadikara :
8-06-1987
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ದವನದ ಹುಣ್ಣಿಮೆಗೆ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ