Shree Charamurteshwara Mahamatha – Mamadapura

Shree Charamurteshwara Mahamatha – Mamadapura Claimed

ಶ್ರೀ ಚರಮೂರ್ತೇಶ್ವರ ಮಹಾಮಠ - ಮಮದಾಪುರ

Average Reviews

Description

ಶ್ರೀ ಚರಮೂರ್ತೇಶ್ವರ ಮಹಾಮಠ – ಮಮದಾಪುರ

ಕರ್ತೃ – ಪೂಜ್ಯ ಶ್ರೀ ಚರಮೂರ್ತೇಶ್ವರ ಶಿವಯೋಗಿಗಳು

 ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮಮದಾಪುರ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಶ್ರೀಚರಮೂರ್ತೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳಲಾಗುವಸುಮಾರು 11ನೇ ಶತಮಾನಕ್ಕಿಂತಲೂ ಪೂರ್ವದ ಇತಿಹಾಸವಿರುವ ಶ್ರೀ ಚರಮೂರ್ತೇಶ್ವರಮಹಾಮಠವು ಅಸ್ತಿತ್ವದಲ್ಲಿದೆ. ಶ್ರೀಮಠವು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದುಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಚರಮೂರ್ತೇಶ್ವರ ಶಿವಯೋಗಿಗಳು ಪವಾಡಪುರಷರಾಗಿದ್ದು ಸಣ್ಣವಯಸ್ಸಿನಲ್ಲಿಯೇ ಆಧ್ಯಾತ್ಮಿಕತೆಯ ಒಲವು ಬೆಳೆಸಿಕೊಂಡಿದ್ದವರು. ಶ್ರೀಗಳುಲೋಕಾನುಭವಕ್ಕಾಗಿ ಸಂಚಾರ ಹೊರಟು ಧರ್ಮಕ್ಷೇತ್ರಗಳನ್ನು ದರ್ಶಿಸಿ ಅಲ್ಲಲ್ಲಿಅನುಷ್ಠಾನಗೊಂಡು ಆ ಸ್ಥಳಗಳನ್ನೆಲ್ಲಾ ಜಾಗೃತಗೊಳಿಸಿ ಮಮದಾಪುರಕ್ಕೆ ಬಂದು ಅನುಷ್ಠಾನಕೈಗೊಂಡಿದ್ದರು ಎಂದು ತಿಳಿದು ಬರುತ್ತದೆ. ಶ್ರೀಗಳು ತಮ್ಮ ಧರ್ಮೋಪದೇಶಗಳಿಂದಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನುದ್ದರಿಸಿದ್ದರು.ಹೀಗೆ ಪುರಾತನ ಐತಿಹ್ಯವಿರುವ ಸ್ಥಳದಲ್ಲಿ 1914ರಲ್ಲಿ ದೇವಸ್ಥಾನವುಸ್ಥಾಪನೆಯಾಗಿ ತದನಂತರ 1971ರಲ್ಲಿ ಶ್ರೀ.ಷ.ಬ್ರ. ಚರಂತೇಶ್ವರ ಶಿವಾಚಾರ್ಯರಿಂದಶ್ರೀಮಠವು ಸ್ಥಾಪನೆಯಾಗಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿ ಈಭಾಗದ ಪ್ರಮುಖ ಮಠವಾಗಿ ಬೆಳೆದುಬಂದಿದೆ.ಪ್ರಸ್ತುತ 1982ರ ಜುಲೈ 15ರಲ್ಲಿ ಇದೇ ಮಮದಾಪುರದಲ್ಲೇ ಜನಿಸಿದ ಪೂಜ್ಯ ಶ್ರೀಸಿದ್ದಲಿಂಗ ಸ್ವಾಮಿಗಳು ಉತ್ತರಾಧಿಕಾರಿಗಳಾಗಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿಮೈಸೂರಿನ ಜಪದಕಟ್ಟೆ ಮಠದಲ್ಲಿ ಅಭ್ಯಾಸ ನಿರತರಾಗಿದ್ದಾರೆ. ಶ್ರೀಮಠದಲ್ಲಿ ಪ್ರತಿಅಮವಾಸ್ಯೆಗೆ ಅನ್ನದಾಸೋಹ ಮತ್ತು ಜ್ಞಾನದಾಸೋಹ ಇರುತ್ತದೆ. ಹಾಗೆಯೇ ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಕೊನೆಯ 7 ದಿನ ಸರ್ವಧರ್ಮದವರಿಂದಶಿವನಾಮ ಭಜನೆ ದಿನದ 24 ಗಂಟೆಯೂ ನಡೆಯಲ್ಪಡುತ್ತಿರುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು
Date of Birth :
15-07-1982
Place :
ಮಮದಾಪುರ, ಗೋಕಾಕ್ ತಾ||
Photo :

Programs

ಪ್ರತಿ ಅಮವಾಸೆಗೆ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ಇರುತ್ತದೆ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಹಾಗೂ ಕೊನೆಯ ಏಳು ದಿನ ಶಿವನಾಮ ಭಜನೆ ದಿನದ 24 ಗಂಟೆ ಜರುಗುತ್ತದೆ (ವಿವಿಧ ಧರ್ಮದವರು ಭಜನೆ ನಡೆಸುತ್ತಾರೆ)
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
ಮಹಾನವಮಿಯಲ್ಲಿ ದೀಪಾರಾಧನೆ ದಸರದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ
ಶ್ರೀಮಠದಿಂದಲೇ ಶುರುವಾಗುತ್ತದೆ.

Photos

Full Address Kannada

ಶ್ರೀ ಚರಮೂರ್ತೇಶ್ವರ ಮಹಾಮಠ
ಮಮದಾಪುರ - 591 233
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ

Map

Near by Places

ಗೋಕಾಕ್ 15 - ಕಿ.ಮೀ.
ಯರಗಟ್ಟಿ 21 - ಕಿ.ಮೀ.
ಬೆಳಗಾವಿ - 63 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!