ಮಾರ್ಕಂಡೇಯ ನದಿ ತೀರದ ಕುಂದರನಾಡಿನ ತಪೋಕ್ಷೇತ್ರ ಕುಂದರಗಿಯನ್ನುತಮ್ಮ ತಪಃಸಿದ್ದಿಯಿಂದ ಜಾಗೃತ zs Àರ್ಮಕೆ ್ಷೀತ್ರವನ್ನಾಗಿ ನೆಲೆಗೊಳಿಸಿದವರುಮಹಾಮಹಿಮರಾದ ಕರ್ತೃ ಪೂಜ್ಯ ಶ್ರೀ ಅಡವಿಸಿದ್ದೇಶ್ವರರು. ಪೂಜ್ಯರು ತಪೋಗೈದಶ್ರೀಮಠವು ಶತ-ಶತಮಾಗಳಿಂದ ಶ್ರದ್ಧಾಗೌರವದ ಸಂಕೇತವಾಗಿ “ಬೆಳಗಿನೊಳಗಣಬೆಳಕಾಗಿ” ಜನಮನದ ಭಕ್ತಿ ಕೇಂದ್ರವಾಗಿದೆ.ವಿಶ್ವಗುರು ಬಸವಣ್ಣ, ಅಲ್ಲಮಪ್ರಭುಗಳ ಸಮಕಾಲೀನರೆಂದೂ, 770 ವರ್ಷಗಳಕಾಲ ಜೀವಿಸಿದ್ದರೆಂದೂ ಎಂಬ ಜನಪದರ ಪದಗಳ ಪ್ರಕಾರ ಶ್ರೀ ಅಡವಿಸಿದ್ದೇಶ್ವರರು 12ನೇಶತಮಾನದಲ್ಲಿ ಜನಿಸಿ 19ನೇ ಶತಮಾನದವರೆಗೂ ಜೀವಿಸಿದ್ದರೆಂದು ಹೇಳಲಾಗುತ್ತದೆ.ಶ್ರೀಗಳು ಸಂಚಾರ ಮಾಡುತ್ತಾ ಅಲ್ಲಲ್ಲೇ ಅನುಷ್ಠಾನಗೊಳ್ಳುತ್ತಾ ಆ ಸ್ಥಳಗಳನ್ನೆಲ್ಲಾಜಾಗೃತಗೊಳಿಸುತ್ತಾ ಕುಂದರಗಿ ಗ್ರಾಮಕ್ಕೆ ಆಗಮಿಸುತ್ತಾರೆ.ಜನಪದರ ಪ್ರಕಾರ ಶ್ರೀಗಳು ಕುಂದರಗಿ ಗ್ರಾಮದಲ್ಲಿ ಒಂದುಹುಣಸೆಪೊಟರೆಯಲ್ಲಿ 12 ವರ್ಷಗಳ ಕಾಲ ತಪಃಗೈದು ಆನಂತರ ಶ್ರೀಮಠದಲ್ಲಿ 12ವರ್ಷಗಳ ಕಾಲ ಅನುಷ್ಠಾನಕೈಗೊಂಡಿದ್ದರೆಂದು ಹೇಳಲಾಗುತ್ತದೆ. ಆನಂತರ ಶ್ರೀಮಠವನ್ನುಸ್ಥಾಪಿಸಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುತ್ತಿದ್ದು ಮತ್ತೆ ಇಲ್ಲಿಂದ ಸಂಚಾರ ಹೊರಟ ಶ್ರೀಗಳು ಅಂಕಲಗಿಗೆ ನಡೆದರು ಎಂದುತಿಳಿದುಬರುತ್ತದೆ.ಬಸವಾದಿ ಶಿವಶರಣರ ಭವ್ಯ ಪರಂಪರೆಯ ಇತಿಹಾಸವುಳ್ಳ ಶ್ರೀಮಠದಇದುವರೆಗಿನ ಎಲ್ಲಾ ಪೂಜ್ಯರು ತಪೋನಿಷ್ಠರಾಗಿದ್ದು ಲೋಕೋದ್ದಾರದ ಸೇವಾಕಾರ್ಯಗಳನ್ನು ಕೈಗೊಂಡು ನಾಡನ್ನು ಉಜ್ವಲಗೊಳಿಸಿದ್ದಾರೆ. ಅವರೆಲ್ಲರ ಅಸಾಧಾರಣಕರ್ತೃತ್ವ ಶಕ್ತಿಯ ಫಲವಾಗಿ ಅನನ್ಯಕಾಯಕ, ತಪಸ್ಸಿನ ಪರಿಣಾಮವಾಗಿ ಪ್ರಾರಂಭವಾದಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಅನ್ನದಾಸೋಹದ ಕೇಂದ್ರವಾದ ಶ್ರೀಮಠವುಜನತೆಯ ಸರ್ವತೋಮುಖ ಏಳ್ಗೆಗಾಗಿ ಅದ್ವಿತೀಯ ಸೇವೆ ಸಲ್ಲಿಸುತ್ತಿದೆ.ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಪರಂಪರೆಯಹಾದಿಯಲ್ಲಿ ತಮ್ಮ ಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಾಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಹಾಗೂ ಸಮಾಜದ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುತ್ತಾ ತಮ್ಮ ಧರ್ಮೋಪದೇಶಗಳ ಮೂಲಕ ಸಾಮಾಜಿಕ ಸಾಮರಸ್ಯದ ಕುರಿತಾಗಿತಮ್ಮ ಕಾಳಜಿ ವ್ಯಕ್ತಪಡಿಸುತ್ತಿದ್ದರು.ಪ್ರಸ್ತುತ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾಗಿರುವವರುಶ್ರೀ.ಮ.ನಿ.ಪ್ರ. ಅಮರಸಿದ್ದೇಶ್ವರ ಮಹಾಸ್ವಾಮಿಗಳು. 1989ರ ನವೆಂಬರ್ 02 ರಂದುರಾಯಚೂರು ಜಿಲ್ಲೆ ಶಿರಿವಾರದಲ್ಲಿ ಜನಿಸಿದ ಶ್ರೀಗಳು ಬಾಲ್ಯದಲ್ಲಿಯೇ ಸಾಧಕ ಜೀವನಕ್ಕೆಕಾಲಿಟ್ಟವರು. ಮುಂದೆ ಶ್ರೀ ಶಿವಯೋಗ ಮಂದಿರದಲ್ಲಿ ಆಧ್ಯಾತ್ಮ, ಯೋಗ, ಸಂಸ್ಕøತ ಮತ್ತುವಚನಶಾಸ್ತ್ರದ ಶಿಕ್ಷಣ ಪಡೆದರು. ಕಮತಗಿಯ ಶ್ರೀ ಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಶ್ರೀಗಳಕೃಪಾಛತ್ರದಲ್ಲಿ ಉನ್ನತ ಅಧ್ಯಯನ ಪೂರೈಸಿ ಸುತ್ತೂರು ಶ್ರೀಮಠದಲ್ಲಿದ್ದುಕೊಂಡುಸ್ನಾತಕೋತ್ತರ ಪದವಿ ಪಡೆದು ಇದೀಗ ಕಾನೂನು ಪದವಿಯ ವ್ಯಾಸಂಗಗೈಯ್ಯುತ್ತಿದ್ದಾರೆ.ಪೂಜ್ಯರು ಶ್ರೀಮಠದ ಉತ ್ತರಾಧಿಕಾರತ್ವವನ್ನು ವಹಿಸಿಕೊಂಡ ಅಲ್ಪಸಮಯದಲ್ಲಿಯೇ ಕುಂದರನಾಡಿನ ಪರಿಸರದಲ್ಲಿ ಪಾದಯಾತ್ರೆ, ಶಿವಾನುಭವಗೋಷ್ಠಿಪ್ರವಚನಗಳಿಂದ “ಸದ್ಗುಣಗಳ ದೀಕ್ಷೆ, ದುರ್ಗುಣಗಳ ಭಿಕ್ಷೆ” ಎಂಬ ಅಭಿಯಾನದಡಿ ಹತ್ತುಹಲವು ಕಾರ್ಯಗಳನ್ನು ಆಯೋಜಿಸುವ ಮೂಲಕ ಭಕ್ತಬಾಂದವರ ಭಕ್ತಿಗೆ ಪಾತ್ರರಾಗಿದ್ದಾರೆಹಾಗೂ ಶ್ರೀಗಳ ಸಾಹಿತ್ಯಿಕ ಅಧ್ಯಯನ, ಸಾಮಾಜಿಕ ಕಾಳಜಿ ಅಭಿನಂದನಾರ್ಹ. ಇಂತಹಪೂಜ್ಯರನ್ನು ಶ್ರೀಮಠದ ಉತ ್ತರಾಧಿಕಾರಿಯಾಗಿಸಿದವರು ಮುರುಗೋಡದದುರುದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಹಾಗೂ ಮುನವಳ್ಳಿಯಸೋಮಶೇಖರಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು.ಶ್ರೀ ಅಡವಿಸಿದ್ದೇಶ್ವರ ಮಠದ ಉತ್ತರಾಧಿತ್ವವನ್ನು ಹೊಂದಿ ಕಾರ್ಯತತ್ಪರರಾಗಿದ್ದಶ್ರೀ ಅಮರೇಶ್ವರ ದೇವರು 2015ರ ಜನವರಿ 26ರ ಗಣರಾಜೋತ್ಸವ ದಿನದಶುಭಸಂದರ್ಭದಲ್ಲಿ ನಾಡಿನ ಗುರುಗಳ ಸಮ್ಮುಖದಲ್ಲಿ ಮುರುಗೋಡದ ಶ್ರೀದುರುದುಂಡೇಶ್ವರ ಮಠದ ಶ್ರೀ.ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳ ಅಮೃತ ಹಸ್ತದಿಂದಚಿನ್ಮಯಾನುಗ್ರಹ ದೀಕ್ಷೆ ಪಡೆದು ಪೂಜ್ಯ ಶ್ರೀ ಮ.ನಿ.ಪ್ರ. ಅಮರಸಿದ್ದೇಶ್ವರ ಮಹಾಸ್ವಾಮಿಗಳುಎಂಬ ಅಭಿದಾನದೊಂದಿಗೆ ಶ್ರೀಮಠದ ಪೀಠಾಧಿಕಾರವನ್ನು ಹೊಂದಿದರು.ಶ್ರೀಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳು ತಮ್ಮ ಕ್ರಿಯಾಶೀಲತ್ವದಿಂದ ಹಾಗೂಧರ್ಮೋಪದೇಶಗಳಿಂದ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದಾರೆ. ಶ್ರೀಮಠದಲ್ಲಿ12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇವಾಲಯ, ಶ್ರೀಅಡವಿಸಿದ್ದೇಶ್ವರ ಸ್ವಾಮಿಗಳ ಗದ್ದುಗೆ, ಶ್ರೀ ನಿರಂಜನ ಸ್ವಾಮಿಗಳ ಗದ್ದುಗೆ. ಮಠದಕುಲದೇವತೆಯಾದ ಕರೆಮ್ಮದೇವಿ ದೇವಾಲಯವು ಇದ್ದು ನಿತ್ಯ ಧಾರ್ಮಿಕ ಆಚರಣೆಗಳುನಡೆಸಲ್ಪಡುತ್ತಿವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಮರಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
02-11-1988
Place :
ಶಿರಿವಾರ, ಮಾನ್ವಿ ತಾ||
Pattadikara :
26-01-2015
Photo :
Programs
ಪ್ರತಿ ಅಮವಾಸ್ಯೆಗೆ ಪ್ರಸಾದ, “ಶಿವಾನುಭವ ಗೋಷ್ಠಿ”
ಅವರಾತ್ರಿ ಅಮವಾಸೆ ಆದ 5ನೇ ದಿನಕ್ಕೆ ಶ್ರೀಮಠದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಪೂರ್ವ ಪ್ರಾಥಮಿಕ ಶಾಲೆ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ
Photos
Full Address Kannada
ಶ್ರೀ ಅಡವಿ ಸಿದ್ದೇಶ್ವರ ಮಠ
ಕುಂದರಗಿ - 591 102
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ