Shree Shunya Sampadana Matha-Gokak

Shree Shunya Sampadana Matha-Gokak Claimed

ಶ್ರೀ ಶೂನ್ಯ ಸಂಪಾದನ ಮಠ - ಗೋಕಾಕ್

Average Reviews

Description

ಶ್ರೀ ಶೂನ್ಯ ಸಂಪಾದನ ಮಠ – ಗೋಕಾಕ್

ಕರ್ತೃ – ಶ್ರೀ ಮ.ನಿ.ಪ್ರ. ಎಡೆಯೂರು ಸಿದ್ದಲಿಂಗೇಶ್ವರರು

15ನೇ ಶತಮಾನದ ನೂರೊಂದು ವಿರಕ್ತರು ಹಾಕಿಕೊಟ್ಟ ಮಾರ್ಗದರ್ಶನದಬೆಳಕಿನಲ್ಲಿ 12ನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವ, ಟೀಕೆಟಿಪ್ಪಣಿ,ವ್ಯಾಖ್ಯಾನ, ಪುನಾರಚಿಸುವ ಕಾರ್ಯ ಕರ್ನಾಟಕದಲ್ಲಿ ನಡೆಯಿತು. ಈ ವಚನ ಸಂಗೋಪನಕಾರ್ಯ ವಿರಕ್ತರಿಂದಲೇ ನಡೆದು ಸಂಪಾದನ ಸಮಯವೆಂಬ ಪೀಠ ಪರಂಪರೆಯೇನಿರ್ಮಾಣಗೊಂಡಿತು. ಪ್ರಾಮುಖ್ಯವಾಗಿ ಶೂನ್ಯ ಸಂಪಾದನೆಯನ್ನು ನಿರ್ದಿಷ್ಟವಾಗಿರೂಪಿಸಿದ ಈ ಪೀಠಪರಂಪರೆಗೆ ಅಥವ ಮಠ ಪರಂಪರೆಗೆ “ಶೂನ್ಯಸಂಪಾದನ ಸಮಯ”ಎನ್ನಲಾಯಿತು.ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದ ಗುರುವಾರ ಪೇಟೆಯಲ್ಲಿ “ಸಂಪಾದನಸಮಯ”ದ ಮಠವೇ ಇದೆ. ಇದನ್ನು “ಶೂನ್ಯ ಸಂಪಾದನ ಮಠ”ವೆಂದೇ ಕರೆಯುತ್ತಾಬರಲಾಗಿದೆ. ಈ ಮಠವನ್ನು ಸಾಮಾನ್ಯ ಜನರು ಸಂಪತ್ತಿನ ಮಠವೆಂತಲೂ ಕರೆಯುತ್ತಾರೆ.ಹೀಗೆ ವಚನ ಸಾಹಿತ್ಯದ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದರ ಸಾರವನ್ನುಜನಸಾಮಾನ್ಯರಿಗೆ ಮುಟ್ಟಿಸುತ್ತಾ ಇಂದು ನಾಡಿನ ಪ್ರಮುಖ ಮಠವಾಗಿ ಗುರುತಿಸಿಕೊಂಡಿದೆಶ್ರೀ ಶೂನ್ಯ ಸಂಪಾದನ ಮಠ.15ನೇ ಶತಮಾನದಲ್ಲಿ ಮಹಾಶಿವಶರಣ ಶ್ರೀ ತೋಂಟದ ಸಿದ್ದಲಿಂಗೇಶ್ವರರುಸಂಚಾರದಲ್ಲಿದ್ದ ಸಮಯದಲ್ಲಿ ಅನುಷ್ಠಾನಗೊಂಡು ಕೆಲಕಾಲ ನೆಲಸಿ ಭಕ್ತರಲ್ಲಿಧರ್ಮಜಾಗೃತಿ ಮೂಡಿಸಿ ಮುಂದುವರೆದಿದ್ದು ಅಲ್ಲಿ ಸ್ಥಾಪಿತಗೊಂಡ ಶ್ರೀಮಠವುನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಒಂದುಪ್ರತೀತಿ ಪ್ರಕಾರ 12ನೇ ಶತಮಾನದಲ್ಲಿ ಶ್ರೀ ಅಲ್ಲಮಪ್ರಭುದೇವರು ಇಲ್ಲಿ ನೆಲೆಸಿ ಅನುಷ್ಠಾನಕೈಗೊಂಡಿದ್ದರು ಎಂದು ತಿಳಿದುಬರುತ್ತದೆ.ಶ್ರೀ ಶೂನ್ಯ ಸಂಪಾದನ ಮಠದ ಪರಂಪರೆಯಲ್ಲಿ ಮೊದಲಿಗೆ ಬರುವ ಶ್ರೀಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳಿಂದ ಶ್ರೀಮಠವು ಪ್ರಚಲಿತಕ್ಕೆ ಬಂದಿತು. ಇವರುಮಹಾತಪಸ್ವಿಗಳಾಗಿ ಶರಣತತ್ತ್ವವನ್ನು ಧರ್ಮೋಪದೇಶದ ಮೂಲಕ ಭಕ್ತರಿಗೆ ಮುಟ್ಟಿಸಿವೀರಶೈವ ಧರ್ಮವನ್ನು ಬೆಳೆಸಿದರು. ಇವರ ನಂತರ ಶ್ರೀ ರಾಚೋಟಿ ಮಹಾಸ್ವಾಮಿಗಳುಹಾಗೂ ಶ್ರೀ ಚನ್ನಬಸವ ಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದರು.ಶ್ರೀ ಚನ್ನಬಸವ ಮಹಾಸ್ವಾಮಿಗಳು ಷಟ್ಸ್ಥಲ, ಶಿವಯೋಗ ಪ್ರವಚನಗಳ ಮೂಲಕ ಶರಣಧರ್ಮವನ್ನು ವಿಶೇಷವಾಗಿ ಪ್ರಚುರ ಪಡಿಸಿ 1950ರಲ್ಲಿ ಲಿಂಗೈಕ್ಯರಾದರು.ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳ ತರುವಾಯ 1952 ಆಗಸ್ಟ್ 22ರಂದು ಶ್ರೀಮಠದ ಪೀಠವನ್ನು ಅಲಂಕರಿಸಿದವರು ಶ್ರೀ ಮ.ನಿ.ಪ್ರ. ಬಸವಮಹಾಸ್ವಾಮಿಗಳವರು. ಶ್ರೀಗಳು ಕಾಯಕಯೋಗಿಗಳಾಗಿದ್ದು ತಮ್ಮ ಸ ್ವಂತದುಡಿಮೆಯಿಂದಲೇ ಶ್ರೀಮಠಕ್ಕೆ ಒಂದು ಸ್ಪಷ್ಟ ರೂಪವನ್ನು ನೀಡಿದರು. ಮಠದಜೀರ್ಣೋದ್ಧಾರ ಕಾರ್ಯ ಕೈಗೊಂಡು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸಿದರು.ನಿರಂತರ ಶಿವಾನುಭವಗೋಷ್ಠಿಗಳು, ತತ್ತ್ವಚಿಂತನ ಕಾರ್ಯಕ್ರಮಗಳು, ಅನ್ನಸಂತರ್ಪಣೆಗಳಮೂಲಕ ಭಕ್ತರಿಗೆ ಜ್ಞಾನದಾಸೋಹದ ಜೊತೆಯಲ್ಲಿ ಅನ್ನದಾಸೋಹವನ್ನೂ ನೀಡಿದರು.ಶ್ರೀ ಬಸವ ಮಹಾಸ್ವಾಮಿಗಳು ವೈದ್ಯಕೀಯ, ಜ್ಯೋತಿಷ್ಯ, ಪಂಚಾಂಗಗಳನ್ನುಬಲ್ಲವರಾಗಿದ್ದರು. ವಿಶೇಷವಾಗಿ ಆಯುರ್ವೇದ ಔಷದೋಪಚಾರ, ಚಿಕಿತ್ಸೆಯ ಮೂಲಕಬಡರೋಗಿಗಳ ಶುಶ್ರೂಷೆ ಮಾಡಿದ zs Àನ ್ವಂತರಿಗಳೆಂದೇ ಹೆಸರಾಗಿದ್ದರು.ಲಿಂಗಾನುಭವಿಗಳಾದ ಶ್ರೀಗಳಿಗೆ ಬಡವರು, ದೀನದಲಿತರೆಂದರೆ ಬಲು ಇಷ್ಟ. ಎಲ್ಲಾ ಜಾತಿಧರ್ಮಗಳ ಸಂಕೋಲೆಗಳನ್ನು ಕಿತ್ತೊಸೆದು ಸಮಾನತೆ ಹೊಂದಿದಾಗಲೇ ಸಮಾಜದಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು.ಶ್ರೀಗಳು ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗಷ್ಟೇ ಒತ್ತುನೀಡದೇ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಆಗ ಸಾಹಿತಿ, ಕಲಾವಿದರನ್ನು ಕರೆದುಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದರು. ತಮ್ಮ ಗುರುಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳಚರಿತಾಮೃತವನ್ನು ಬರೆಸಿ ಪ್ರಕಟಿಸಿದರು. ಈ ರೀತಿಯಲ್ಲಿ ತಮ್ಮ ಜೀವನವನ್ನೇ ಶ್ರೀಮಠದಹಾಗೂ ಸಮಾಜದ ಏಳಿಗೆಗಾಗಿ ಮುಡುಪಿಟ್ಟ ಮಹಾಮಹಿಮರು ಶ್ರೀ ಬಸವಮಹಾಸ್ವಾಮಿಗಳು.ಪ್ರಸ್ತುತ ಶ್ರೀಗಳಾದ ಶ್ರೀ. ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು2004ರ ಸೆಪ್ಟೆಂಬರ್ 15ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಪರಂಪರೆಯ ಗುರುಗಳಹಾದಿಯಲ್ಲಿ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.ಶ್ರೀ ಶೂನ್ಯಸಂಪಾದನ ಮಠದ ವತಿಯಿಂದ “ಕಾಯಕ ಶ್ರೀ” ಪ್ರಶಸ್ತಿಯನ್ನುಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಸಹೃದಯಿಗಳನ್ನು ಗುರುತಿಸಿನೀಡಲಾಗುತ್ತಿದೆ ಹಾಗೂ ಶ್ರೀಮಠದಲ್ಲಿ ಅವರಾತ್ರಿ ಅಮವಾಸ್ಯೆ ನಂತರದ ಏಳನೇ ದಿನಕ್ಕೆಶರಣ ಸಂಸ್ಕøತಿ ಉತ್ಸವವನ್ನು ಏರ್ಪಡಿಸಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಹಾಸ್ಯಗೋಷ್ಠಿ, ಶರಣತತ್ತ್ವ ಚಿಂತನಗೋಷ್ಠಿ,ಮಹಿಳಾ ಮತ್ತು ಮಕ್ಕಳ ಗೋಷ್ಠಿಗಳು, ಯುವಗೋಷ್ಠಿಗಳು ನಿರಂತರ ಆರು ದಿನಗಳ ಕಾಲನಡೆಯುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು
Date of Birth :
24-06-1972
Place :
ಗೋಕಾಕ್, ಬೆಳಗಾವಿ ಜಿ||
Pattadikara :
15-09-2004
Photo :

Programs

ಪ್ರತಿ ಹುಣ್ಣಿಮೆಗೆ “ಶಿವಾನುಭವ ಗೋಷ್ಠಿ”
ಪ್ರತಿ ಅಮವಾಸೆಗೆ “ಮನೆಯಲ್ಲಿ ಮಹಾ ಮನೆ” ಕಾರ್ಯಕ್ರಮ
ಅವರಾತ್ರಿ ಅಮವಾಸೆ ಆದ ಏಳನೇ ದಿನಕ್ಕೆ
“ಶರಣ ಸಂಸ್ಕøತಿ ಉತ್ಸವ” ಆರು ದಿನಗಳ ಕಾಲ ನಡೆಯುತ್ತದೆ
(ಹಾಸ್ಯ ಗೋಷ್ಠಿ, ಮಹಿಳಾ ಗೋಷ್ಠಿ, ಮಕ್ಕಳಗೋಷ್ಠಿ,
ಶರಣ ತತ್ವ ಚಿಂತನ ಗೋಷ್ಠಿ, ಸಂಗೀತ ಗೋಷ್ಠಿ, ಯುವಗೋಷ್ಠಿ)

Photos

Full Address Kannada

ಶ್ರೀ ಶೂನ್ಯ ಸಂಪಾದನ ಮಠ
ಗುರುವಾರಪೇಟೆ, ಗೋಕಾಕ್ - 591 307
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ

Map

Near by Places

ನೇಸರಗಿ - 30 ಕಿ.ಮೀ.
ಸಂಕೇಶ್ವರ - 40 ಕಿ.ಮೀ.
ಬೆಳಗಾವಿ - 63 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!