Shree Muppayyanavara Matha- Gokak

Shree Muppayyanavara Matha- Gokak Claimed

ಶ್ರೀ ಮುಪ್ಪಯ್ಯನವರ ಮಠ - ಗೋಕಾಕ್

Average Reviews

Description

ಶ್ರೀ ಮುಪ್ಪಯ್ಯನವರ ಮಠ – ಗೋಕಾಕ್

ಕರ್ತೃ – ಶ್ರೀ ಷ.ಬ್ರ. ಗುರುಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು

ಗೋಕಾಕ್ ನಗರದ ಸೋಮವಾರಪೇಟೆಯಲ್ಲಿ ಸುಮಾರು 200 ವರ್ಷಗಳಇತಿಹಾಸವಿರುವ ಶ್ರೀ. ಷ.ಬ್ರ. ಗುರುಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಮುಪ್ಪಯ್ಯನವರ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಗೋಕಾಕ್ ನಗರದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠವುಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪಂಚಪೀಠಗಳ ಪರಂಪರೆಯಲ್ಲಿಬೆಳೆದುಬಂದಿದೆ.ಶ್ರೀ ಗುರುಸಿದ್ದ ಶಿವಾಚಾರ್ಯರು ಮಹಾರಾಷ್ಟ್ರದ ಜತ್ ತಾಲ್ಲೂಕಿನ ಮುಚ್ಚಂಡಿಹಿರೇಮಠದವರಾಗಿದ್ದು ಅಲ್ಲಿಂದ ಗೋಕಾಕ್ ನಗರಕ್ಕೆ ಬಂದು ಮಠವನ್ನು ಸ್ಥಾಪಿಸಿಧಾರ್ಮಿಕ ಕಾರ್ಯಗಳಿಂದ ಹೆಸರು ಪಡೆದು ಮಠವನ್ನು ಬೆಳೆಸಿದ್ದರು. ಶ್ರೀಗಳು ಮುಚ್ಚಂಡಿಹಿರೇಮಠ ಹಾಗೂ ಇಲ್ಲಿನ ಶ್ರೀ ಮುಪ್ಪಯ್ಯನವರ ಮಠಗಳೆರಡರ ಅಧಿಕಾರವನ್ನುಮುನ್ನಡೆಸಿಕೊಂಡು ಬಂದಿದ್ದರು.ತದನಂತರ ಶ್ರೀಮಠದ ಪಟ್ಟವೇರಿದ ಶ್ರೀ ಷ.ಬ್ರ, ಮುಪ್ಪಯ್ಯ ಶಿವಾಚಾರ್ಯಮಹಾಸ್ವಾಮಿಗಳಿಂದ ಶ್ರೀಮಠವು ಹೆಚ್ಚಿನ ಖ್ಯಾತಿಯನ್ನು ಪಡೆದು ಅವರ ಹೆಸರಿನಿಂದಲೇಗುರುತಿಸಲ್ಪಡುತ್ತಿದೆ. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ತಮ್ಮಧರ್ಮೋಪದೇಶಗಳಿಂದ, ಧಾರ್ಮಿಕ ಆಚರಣೆಗಳಿಂದ ಮನೆಮಾತಾದರು. ಶ್ರೀಗಳು ಸದಾಹಸನ್ಮುಖಿಗಳು. ಮುದ್ದು ಮಕ್ಕಳನ್ನು ಕಂಡರೆ ಬಲುಪ್ರೀತಿ. ಮಠದಲ್ಲಿದ್ದ ಹಸುಗಳಿಗೆ ಸ್ವತಃತಾವೇ ಪ್ರತಿದಿನ ಹೋಗಿ ಮೇವು ತರುತ್ತಿದ್ದ ಕಾಯಕಯೋಗಿಗಳಾಗಿದ್ದರು.ಶ್ರೀಗಳು ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಪುರಾಣ, ಸಂಕೀರ್ತನೆಗಳು ಇನ್ನೂಮುಂತಾದ ಸಮಾರಂಭಗಳನ್ನು ನಡೆಸಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.ಇಂತಹ ಮಹಾಮಹಿಮ 1984ರ ಮಾರ್ಚ್ 31ರಲ್ಲಿ ಲಿಂಗೈಕ್ಯರಾದಾಗ ಇಡೀ ಗೋಕಾಕ್ಪಟ್ಟಣ ಸುತ್ತಮುತ್ತಲಿನ ಕೇಂದ್ರಗಳ ಜನರು, ಮಠಾಧೀಶರು ಅವರ ಅಂತಿಮಯಾತ್ರೆಯಲ್ಲಿಪಾಲ್ಗೊಂಡಿದ್ದರು ಎಂದು ತಿಳಿದುಬರುತ್ತದೆ.ಪ್ರಸ್ತುತ ಶ್ರೀಮಠದ ಉತ್ತರಾಧಿಕಾರಿಗಳಾಗಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿರುವ ಪೂಜ್ಯ ಶ್ರೀ ರಾಚೋಟಿ ಸ್ವಾಮಿಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದು ಭಕ್ತರ ಸಹಕಾರದೊಂದಿಗೆಮುನ್ನಡೆಸಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ರಾಚೋಟಿ ಸ್ವಾಮಿಗಳು
Date of Birth :
30-11-1976
Place :
ಮುಚ್ಚಂಡಿ, ಜತ್ ತಾ||, ಮಹಾರಾಷ್ಟ್ರ
Photo :

Programs

ಪ್ರತಿ ಸೋಮವಾರ ಶಿವಾನುಭವ ಗೋಷ್ಠಿ ಹಾಗೂ ಗುರುವಾರ ಭಜನೆ ಕಾರ್ಯಕ್ರಮ
ಯುಗಾದಿ ಆದ 11ನೇ ದಿನಕ್ಕೆ ಲಿಂ|| ಶ್ರೀ ಷ.ಬ್ರ. ಮುಪ್ಪಯ್ಯ ಶಿವಾಚಾರ್ಯ
ಮಹಾಸ್ವಾಮಿಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ
ಮಹಾಸ್ವಾಮಿಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಇಷ್ಟಲಿಂಗ ಪೂಜೆ
ಫಾಲ್ಗುಣ ಶುಕ್ಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ
ಹಾಗೂ ಭಾವಚಿತ್ರದ ಮೆರವಣಿಗೆ ಮತ್ತು ಧರ್ಮ ಚಿಂತನೆ

Photos

Full Address Kannada

ಶ್ರೀ ಮುಪ್ಪಯ್ಯನವರ ಮಠ
ಸೋಮವಾರಪೇಟೆ, ಗೋಕಾಕ್ - 591 307
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ

Map

Near by Places

ಗೋಕಾಕ್ ಫಾಲ್ಸ್ - 6 ಕಿ.ಮೀ.
ಯೋಗಿಕೊಳ್ಳ - 12 ಕಿ.ಮೀ.
ನೇಸರಗಿ - 30 ಕಿ.ಮೀ.
ಸಂಕೇಶ್ವರ - 50 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!