Shree Gubalagudda Kempayya Swami Matha-Ghataprabha

Shree Gubalagudda Kempayya Swami Matha-Ghataprabha Claimed

ಶ್ರೀ ಗುಬಲಗುಡ್ಡ ಕೆಂಪಯ್ಯಸ್ವಾಮಿ ಮಠ - ಘಟಪ್ರಭಾ

Average Reviews

Description

ಶ್ರೀ ಗುಬಲಗುಡ್ಡ ಕೆಂಪಯ್ಯಸ್ವಾಮಿ ಮಠ – ಘಟಪ್ರಭಾ

ಕರ್ತೃ – ಶ್ರೀ ಮ.ನಿ.ಪ್ರ. ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಪಟ್ಟಣವು ತಾಲ್ಲೂಕುಕೇಂದ್ರದಿಂದ 16 ಕಿ.ಮೀ. ದೂರದಲ್ಲಿದ್ದು ಈ ಪಟ್ಟಣದ ಹೊರಭಾಗದಲ್ಲಿ ಪಟ್ಟಣದಿಂದಎರಡು ಕಿ.ಮೀ. ಅಂತರದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಶಾಖಾಮಠವಾದಲಿಂ|| ಶ್ರೀ. ಮ.ನಿ.ಪ್ರ.ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಶಿವಯೋಗಿಗಳು ಶ್ರೀಮಠದ ಕರ್ತೃ ಗುರುಗಳು.ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ದರಾಜಯೋಗೀಂದ್ರ ಶಿವಯೋಗಿಗಳು ಘಟಪ್ರಭಾದ ಉತ್ತಮ ಹವಾಮಾನಕ್ಕಾಗಿ ಮತ್ತು ಇಲ್ಲಿನಭಕ್ತರ ಸಂಪರ್ಕಕ್ಕಾಗಿ 1929ರಲ್ಲಿ ಚಿಕ್ಕದೊಂದು ಕುಟೀರ ಕಟ್ಟಿ ಅಲ್ಲಿ ಭಕ್ತರ ಕಷ್ಟಗಳನ್ನು ಆಲಿಸಿತೀರಿಸುವುದು ಮಾತ್ರವಲ್ಲದೇ ತಮ್ಮ ಆಯುರ್ವೇದದ ಪಾಂಡಿತ್ಯದಿಂದ ಭಕ್ತರಿಗೆಆಯುರ್ವೇದ ಔಷಧಿಗಳನ್ನು ನೀಡುತ್ತಿದ್ದರು. ಕ್ರಮೇಣ ಅದುವೇ ಹುಬ್ಬಳ್ಳಿ ಮೂರು ಸಾವಿರಮಠದ ಶಾಖಾಮಠವಾಗಿ ಪರಿವರ್ತನೆಯಾಯಿತು.ಹೀಗೆ ಶುರುವಾದ ಶ್ರೀಮಠವು ಜಗದ್ಗುರುಗಳ ಮೂಲ ಹೆಸರಾದ ಶ್ರೀ ಕೆಂಪಯ್ಯಸ್ವಾಮಿ ಎಂಬ ನಾಮದೇಯದಲ್ಲೇ ಗುರುತಿಸಲ್ಪಟ್ಟು ಶ್ರೀ ಗುಬಲಗುಡ್ಡ ಕೆಂಪಯ್ಯ ಸ್ವಾಮಿ ಮಠಎಂದೇ ಹೆಸರಾಯಿತು. ಶ್ರೀಮಠಕ್ಕೆ ಗುರುಗಳು ತಮ್ಮ ಶಿಷ್ಯರಾಗಿದ್ದ ಹಾಗೂ ಖಾಸಾಭಕ್ತರಾಗಿದ್ದ ಶ್ರೀ ಮ.ನಿ.ಪ್ರ. ಶಿವರುದ್ರ ಮಹಾಸ್ವಾಮಿಗಳನ್ನೇ ಪೀಠಾಧಿಪತಿಗಳಾಗಿನೇಮಿಸಿದರು. ಶ್ರೀ ಶಿವರುದ್ರ ಮಹಾಸ್ವಾಮಿಗಳು ಮಠಕ್ಕೆ ಬಂದಾಗಲೇ ಭಕ್ತರ ಭಾಗ್ಯ ದೇವತೆಬಂದಂತಾಯಿತು. ಶ್ರೀಗಳು ಬೆಳಿಗ್ಗೆ ಏಳು ಘಂಟೆಗೆ ಬಂದು ಪೀಠದಲ್ಲಿ ಕುಳಿತರೆಂದರೆ ರಾತ್ರಿಎರಡು ಘಂಟೆ ಆದರೂ ಕೂಡ ಹಸಿವು, ಆಯಾಸಗಳನ್ನು ಗಮನಿಸದೇ ಭಕ್ತರ ಕಷ್ಟನಿವಾರಣೆಗಾಗಿ ಕುಳಿತು ಬಿಡುತ್ತಿದ್ದರು ಹಾಗೂ ಶ್ರೀಗಳ ಧ್ಯಾನವೂ ಕೂಡ ಅಷ್ಟೇಏಕಾಗ್ರತೆಯಿಂದ, ವಿಶೇಷತೆಯಿಂದ ಕೂಡಿರುತ್ತಿತ್ತು ಎಂದು ಭಕ್ತರು ನೆನಪಿಸಿಕೊಳ್ಳುತ್ತಾರೆ.ಶ್ರೀಮಠದ ಆಶ್ಚರ್ಯದ ಸಂಗತಿಯೆಂದರೆ ಶ್ರೀ ಶಿವರುದ್ರ ಮಹಾಸ್ವಾಮಿಗಳಿಗೆ ಇಲ್ಲಿಪಟ್ಟಾಭಿಷೇಕ ಮಾಡಿರಲೇ ಇಲ್ಲ. ಆದರೂ ಭಕ್ತರ ಹೃದಯದಲ್ಲಿ ಅವರು ದೇವರಾಗಿವಿರಾಜಮಾನರಾಗಿದ್ದರು. ಇನ್ನು ಆಶ್ಚರ್ಯವೆಂದರೆ ಅವರ 74ನೇ ವಯಸ್ಸಿನಲ್ಲಿಪಟ್ಟಾಭಿಷೇಕ ಮಾಡಲಾಗಿದ್ದು ಶ್ರೀಗಳು ತಮ್ಮ ಕಾಲಾವಧಿಯಲ್ಲಿ ಶ್ರೀಮಠವನ್ನುಸರ್ವರೀತಿಯಲ್ಲೂ ಅಭಿವೃದ್ಧಿಗೊಳಿಸಿ 2000ನೇ ಇಸವಿಯಲ್ಲಿ ತಮ್ಮ 89ನೇ ವಯಸ್ಸಿನಲ್ಲಿಲಿಂಗೈಕ್ಯರಾದರು.ಪೂಜ್ಯ ಶ್ರೀಗಳು ಲಿಂಗೈಕ್ಯರಾದ ನಂತರ ಹುಬ್ಬಳ್ಳಿ ಮೂರುಸಾವಿರ ಮಠದಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಜಗದ್ಗುರು ಡಾ|| ಗಂಗಾಧರ ರಾಜಯೋಗೀಂದ್ರಮಹಾಸ್ವಾಮಿಗಳವರು ಶ್ರೀ ಮಲ್ಲಿಕಾರ್ಜುನ ದೇವರನ್ನು ಉತ್ತರಾಧಿಕಾರಿಗಳನ್ನಾಗಿಶ್ರೀ ಗುಬಲಗುಡ್ಡ ಕೆಂಪಯ್ಯ ಸ್ವಾಮಿ ಮಠವು ಅಸ್ತಿತ್ತ್ವದಲ್ಲಿದ್ದು ತನ್ನ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಕಾರ್ಯಗಳಿಂದ ಈ ಭಾಗದಲ್ಲಿ ಹೆಸರುವಾಸಿಯಾಗಿದೆ.9798ನೇಮಿಸಿದರು. ಶ್ರೀಗಳು ಅರಸೀಕೆರೆ ತಾಲ್ಲೂಕಿನ ಸಸಿವಾಳ ಗ್ರಾಮದ ಹಿರೇಮಠದಲ್ಲಿ 1935ರಆಗಸ್ಟ್ 04 ರಂದು ಜನಿಸಿದ್ದು ಇವರು ಮಹಾತಪಸ್ವಿ ಇಳಕಲ್ಲ ಲಿಂ|| ಶ್ರೀ ವಿಜಯ ಮಹಾಂತಶಿವಯೋಗಿಗಳವರ ವಂಶಸ್ಥರು.ಶ್ರೀ ಮಲ್ಲಿಕಾರ್ಜುನ ದೇವರು ಶಿವಯೋಗಮಂದಿರದಲ್ಲಿ ಪ್ರಾಥಮಿಕಶಿಕ್ಷಣದೊಂದಿಗೆ ಯೋಗ, ಶಿವಯೋಗ, ಸಂಸ್ಕøತ, ವಚನ, ವೇದ, ಜ್ಯೋತಿಷ್ಯ, ಸಂಗೀತವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದು ಕಾಲೇಜು ಶಿಕ್ಷಣವನ್ನು ಮುಂಡರಗಿಯ ಶ್ರೀ ಅನ್ನದಾನೇಶ್ವರಸಂಸ್ಥಾನ ಮಠದಲ್ಲಿದ್ದುಕೊಂಡು ಪೂರೈಸಿದರು. ನಂತರ ಹುಬ್ಬಳ್ಳಿ ಮೂರು ಸಾವಿರ ಮಠದಶ್ರೀ ಕುಮಾರೇಶ್ವರ ಶಿವಯೋಗಿ ಸಂಘದ ಸಾಧಕರಾಗಿ, ಧಾರವಾಡದ ಕರ್ನಾಟಕವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಸುವರ್ಣ ಪದಕದೊಂದಿಗೆ ಸ್ನಾತಕೋತ್ತರಪದವಿ ಪಡೆದವರು.ಇಂತಹ ವಿದ್ವತ್ ಪಾಂಡಿತ್ಯವನ್ನು ಪಡೆದ ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನಮಹಾಸ್ವಾಮಿಗಳು 2012ರ ಮಾರ್ಚ್ 05 ರಂದು ಮುಂಡರಗಿಯ ಶ್ರೀ ಅನ್ನದಾನೇಶ್ವರಮಹಾಸನ್ನಿಧಿಯವರಿಂದ ಚಿನ್ಮಯಾನುಗ್ರಹ ಪಡೆದುಕೊಂಡು ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರುಗಳಿಂದ ನಿರಂಜನ ಜಂಗಮಾಧಿಕಾರ ಪಡೆದುಕೊಂಡು ಶ್ರೀ ಗುಬಲಗುಡ್ಡಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರವನ್ನು ವಹಿಸಿಕೊಂಡು ಮುನ್ನಡೆದಿದ್ದಾರೆ. ಶ್ರೀಮಠದಆಸ್ತಿಗಳನ್ನು ಪತ್ತೆಮಾಡಿ ಮರಳಿ ಪಡೆಯಲು ಶ್ರಮವಹಿಸುತ್ತಿದ್ದು ಶ್ರೀಮಠದ ಸರ್ವಾಂಗೀಣಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದಾರೆ.ಶ್ರೀಗಳು ಇನ್ನೂ ಯುವಕರಾಗಿದ್ದು ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದಹೆಸರಾದವರು. ಜನಸಾಮಾನ್ಯರ ಬಳಿಗೆ ತೆರಳಿ ಮೂಢನಂಬಿಕೆ, ಕಂದಾಚಾರಗಳ ಬಗ್ಗೆಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಇವುಗಳ ವಿರುದ್ಧಮಾರ್ಗದರ್ಶನ ನೀಡುತ್ತಾರೆ ಹಾಗೂ ಆಗಾಗ ಶಿಬಿರಗಳನ್ನೇರ್ಪಡಿಸಿ ಅಲ್ಲಿ ತಮ್ಮಕಾರ್ಯಕ್ರಮಗಳ ಮೂಲಕ, ಪ್ರವಚನಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Date of Birth :
04-08-1985
Place :
ಸಸಿನಾಳ, ಅರಸೀಕೆರೆ ತಾ||
Pattadikara :
05-03-2012
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ
ದವನದ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ನಿತ್ಯ ಸಹಸ್ರ ಬಿಲ್ವಾರ್ಚನೆ ಮತ್ತು ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಆಂಗ್ಲ ಮಾಧ್ಯಮ ವಸತಿ ಶಾಲೆ ಗೋಶಾಲೆ

Photos

Full Address Kannada

ಶ್ರೀ ಗುಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ
ಮಲ್ಲಿಕಾರ್ಜುನ ನಗರ, ಘಟಪ್ರಭ - 591 306
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ

Map

Near by Places

ಘಟಪ್ರಭ - 2 ಕಿ.ಮೀ.
ಬೆಳಗಾಂ - 20 ಕಿ.ಮೀ.
ಗೋಕಾಕ್ - 18 ಕಿ.ಮೀ.
ಸಂಕೇಶ್ವರ - 50 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!