ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಅರಭಾಂವಿ ಗ್ರಾಮವು ತಾಲ್ಲೂಕುಕೇಂದ್ರದಿಂದ 9 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಅರಭಾಂವಿ ಮತ್ತುಸಿಂದಿಕುರಬೆಟ್ಟ ಗ್ರಾಮಗಳ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬಬಲಾದಿ ಸದಾಶಿವಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮಠವನ್ನು ಸ್ಥಾಪಿಸಿರುವ ಕಾಲಮಾನದ ಬಗ್ಗೆ ತಿಳಿದುಬರುವುದಿಲ್ಲವಾದರೂಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳನ್ನುಹೆಸರಿಸಲಾಗಿದೆ. ಶ್ರೀಗಳು ಮಹಾಮಹಿಮ ಪುರುಷರಾಗಿದ್ದು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿ ಮುನ್ನಡೆಸಿದ್ದರು. ಶ್ರೀಮಠದ ಮುಂದಿನ ಪರಂಪರೆಯ ಬಗ್ಗೆದಾಖಲೆಗಳ ಕೊರತೆಯಿಂದಾಗಿ ನಿಖರವಾಗಿ ಹೇಳಲು ಬರುವುದಿಲ್ಲ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಗುರುಚಕ್ರವರ್ತಿ ಶಿವಯ್ಯ ಮಹಾಸ್ವಾಮಿಗಳುಶ್ರೀ ಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರಿಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಶ್ರೀಗಳು1961ರಲ್ಲಿ ಬಿಜಾಪುರ ತಾಲ್ಲೂಕಿನ ಬಬಲಾದಿ ಗ್ರಾಮದಲ್ಲಿ ಜನಿಸಿದವರಾಗಿದ್ದು ಧಾರ್ಮಿಕಶಿಕ್ಷಣ ಪಡೆದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡರು.ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ ಹಾಗೂ ತಮ್ಮ ದಾರ್ಮಿಕ ಉಪದೇಶಗಳಿಂದ ಭಕ್ತರಲ್ಲಿವೀರಶೈವ ಧರ್ಮಾಚರಣೆಗಳ ಬಗ್ಗೆ ಅರಿವು ಮೂಡಿಸುತ್ತಾ ಸನ್ಮಾರ್ಗ ತೋರುತ್ತಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಹುಣ್ಣಿಮೆಗೆರುದ್ರಾಭಿಷೇಕ, ಶ್ರೀಗಳ ದರ್ಶನ, ಪ್ರವಚನ, ವಿಶೇಷಪೂಜೆ, ಶಿವಾನುಭವಗೋಷ್ಠಿಗಳನ್ನುಆಯೋಜಿಸುತ್ತಿದ್ದು ಈ ಸಮಯದಲ್ಲಿ ಮಹಾದಾಸೋಹವನ್ನು ನಡೆಸಲಾಗುತ್ತದೆ ಹಾಗೂಬನದ ಹುಣ್ಣಿಮೆಗೆ ಶ್ರೀಮಠದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದುಅಪಾರ ಭಕ್ತಜನ ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗುತ್ತಾರೆ.
Swamiji
Photo :
Programs
ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ, ಶ್ರೀಗಳ ದರ್ಶನ, ಪ್ರವಚನ, ವಿಶೇಷ ಪೂಜೆ ಮತ್ತು ಶಿವಾನುಭವ ಗೋಷ್ಠಿ, ಮಹಾದಾಸೋಹ ಬನದ ಹುಣ್ಣಿಮೆಗೆ ಶ್ರೀಮಠದ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಬಬಲಾದಿ ಸದಾಶಿವ ಮಠ
ಅರಭಾಂವಿ - 591 218
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ