ಶ್ರೀ ಜಗದ್ಗುರು ದುರುದುಂಡೇಶ್ವರ ಪುಣ್ಯಾರಣ್ಯ ಸಿದ್ದ ಸಂಸ್ಥಾನ ಮಠ - ಅರಭಾಂವಿ
Average Reviews
Description
ಶ್ರೀ ಜಗದ್ಗುರು ದುರುದುಂಡೇಶ್ವರ ಪುಣ್ಯಾರಣ್ಯ ಸಿದ್ದ ಸಂಸ್ಥಾನ ಮಠ – ಅರಭಾಂವಿ
ಕರ್ತೃ – ಪೂಜ್ಯ ಶ್ರೀ ದುರುದುಂಡೇಶ್ವರ ಶಿವಯೋಗಿಗಳು
ಗೋಕಾಕ್ ತಾಲ್ಲೂಕಿನ ಅರಭಾಂವಿ ಗ್ರಾಮದ ಹೊರಭಾಗದ ಗುಡ್ಡದ ಮೇಲೆಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ದುರುದುಂಡೇಶ್ವರ ಪುಣ್ಯಾರಣ್ಯ ಸಿದ್ದಸಂಸ್ಥಾನ ಮಠವು18ನೇ ಶತಮಾನದಲ್ಲಿ ಪೂಜ್ಯ ಶ್ರೀ ದುರುದುಂಡೇಶ್ವರ ಶಿವಯೋಗಿಗಳಿಂದಸಾ್ಥಪಿತಗೊಂಡಿದೆ. ಕರ್ತೃಗುರುಗಳಾದ ಶ್ರೀ ದುರುದುಂಡೇಶ ್ವರರು ಮತ್ತುಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರರು ತಪಸ್ಸನ್ನಾಚರಿಸಿ ಸಂಚಾರ ಕೈಗೊಂಡು ಅಲ್ಲಲ್ಲಿಅನುಷ್ಠಾನ ಕೈಗೊಳ್ಳುತ್ತಾ ಡಬಳಾಪುರದ ಶ್ರೀ ಗುರುಲಿಂಗ ಸ್ವಾಮಿಗಳು ಹಾಗೂ ತೇರದಾಳಿನಶ್ರೀ ಅಲ್ಲಮರ ದರ್ಶನ ಪಡೆದು ಮುಂದೆ ಬೇರೆ ಬೇರೆಯಾಗಿ ಹೊರಟರು.ಶ್ರೀ ದುರುದುಂಡೇಶ್ವರರು ಮುಂದೆ ದುರುದುಂಡಿಯಲ್ಲಿ ಬಂದು ನೆಲೆನಿಂತರುಎಂಬುದು ಮಠದ ಇತಿಹಾಸದ ಹೂರಣ. ಶ್ರೀಗಳು ದುರುದುಂಡಿಯಿಂದ ನಾಲ್ಕು ಕಿ.ಮೀ.ದೂರದ ಅರಣ್ಯದಲ್ಲಿ ಅನುಷ್ಠಾನಕ್ಕೆ ಕುಳಿತಾಗ ದುರುದುಂಡಿಯ ದೇಸಾಯಿಯು ಅಲ್ಲಿನಸುತ್ತಲ ಪ್ರದೇಶವನ್ನು ಉಂಬಳಿಯಾಗಿ ನೀಡಿದ್ದು ಆ ಜಾಗವೇ ಇಂದು ಮಠವಾಗಿರೂಪಾಂತರಗೊಂಡಿದೆ ಎಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರದ ಶ್ರೀ ಕೊಳ್ಳರಾಧ್ಯ ಮಹಾಸ್ವಾಮಿಗಳ ಕಾಲದಲ್ಲಿಶ್ರೀಮಠವು ಅಭಿವೃದ್ಧಿಗೊಂಡಿದ್ದು ಇವರು ಶ್ರೀಮಠಕ್ಕೆ ಭವ್ಯವಾದ ಕಲ್ಲಿನ ಕಟ್ಟಡವನ್ನುರೂಪಿಸಿದರು. ಅದು ಇಂದಿಗೂ ಉಳಿದುಕೊಂಡು ಬಂದಿರುವುದು ಆಶ್ಚರ್ಯವೇ ಸರಿ.ಆದರೆ ಇವರ ನಂತರದಲ್ಲಿ ಬಂದಿರುವ ಗುರುಗಳ ಬಗ್ಗೆ ವಿವರಣೆ ಲಭ್ಯವಿಲ್ಲ. ಪರಂಪರೆಯ9ನೇ ಗುರುಗಳಾದ ಶ್ರೀ.ಮ.ನಿ.ಪ್ರ. ಮಹಾಂತ ಶಿವಯೋಗಿಗಳಿಂದಾಗಿ ಶ್ರೀಮಠವು ಹೆಚ್ಚಿನಪ್ರಸಿದ್ದಿ ಹೊಂದಿದೆ. ಶ್ರೀಗಳು ಮಹಾತಪಸ್ವಿಗಳಾಗಿ ತಮ್ಮ ವಾಕ್ಸಿದ್ದಿಯಿಂದ ಸಮಾಜವನ್ನುಬೆಳೆಸಿ ವಿವಿಧ ಸ್ಥಳಗಳ ಜನರನ್ನು ಮಠಕ್ಕೆ ಭಕ್ತರನ್ನಾಗಿ ಸಂಪಾದಿಸಿದರು.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳುಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದು ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ಪರಂಪರೆಯನ್ನು ಮುಂದುವರೆಸಿದ್ದಾರೆ. ಶ್ರೀಮಠವುಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನುನೀಡುತ್ತಾ ಬಂದಿದ್ದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಲಿಗಳಿಗೂಆಶ್ರಯತಾಣವಾಗಿತ್ತು ಎಂಬುದು ಹೆಮ್ಮೆಯ ಸಂಗತಿ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
ಫೆಬ್ರವರಿ 1952
Place :
ಸಾಲಹಳ್ಳಿ, ರಾಮದುರ್ಗ ತಾ||
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಯುಗಾದಿ ಪಾಡ್ಯದ ಮರುದಿನ ಶ್ರೀಮಠದ ಜಾತ್ರೆ, ವಿವಿಧ
ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು, ಕ್ರೀಡೆಗಳ ಆಯೋಜನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ವಿಜಯದಶಮಿಗೆ ಬನ್ನಿ ಮುಡಿಯುವ ಕಾರ್ಯಕ್ರಮ
ಕಾರ್ತಿಕ ಮಾಸದ ಛಟ್ಟಿ ಅಮವಾಸೆಗೆ ಕಾರ್ತಿಕೋತ್ಸವ
ದೀಪಾವಳಿ ಪಾಡ್ಯಕ್ಕೆ ಧ್ವಜವಂದನೆ ಮತ್ತು ಮುತ್ತೈದೆಯರಿಗೆ
ಹುಡಿ ತುಂಬುವ ಕಾರ್ಯಕ್ರಮ
Institutions
ಪದವಿ ಪೂರ್ವ ಕಾಲೇಜು ಡಿ.ಎಡ್. ಕಾಲೇಜ್ ಪ್ರೌಢಶಾಲೆಗಳು
Photos
Full Address Kannada
ಶ್ರೀ ಜಗದ್ಗುರು ದುರುದುಂಡೇಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠ
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ