Shree Murugendraswami Viraktamatha-Nippani

Shree Murugendraswami Viraktamatha-Nippani Claimed

ಶ್ರೀ ಮುರುಘೇಂದ್ರಸ್ವಾಮಿ ವಿರಕ್ತಮಠ - ನಿಪ್ಪಾಣಿ

Average Reviews

Description

ಶ್ರೀ ಮುರುಘೇಂದ್ರಸ್ವಾಮಿ ವಿರಕ್ತಮಠ – ನಿಪ್ಪಾಣಿ

ಕರ್ತೃ – ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿಅಸ್ತಿತ್ವದಲ್ಲಿರುವ ಶ್ರೀ ಮುರುಘೇಂದ್ರಸ್ವಾಮಿ ವಿರಕ್ತಮಠವು ವಿರಕ್ತ ಸಂಪ್ರದಾಯದಲ್ಲಿಬೆಳೆದುಬಂದಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಂದಪ್ರಚಲಿತದಲ್ಲಿದೆ. ಚಿತ್ರದುರ್ಗದ ಶ್ರೀ ಮುರುಘಾ ಬೃಹನ್ಮಠದ ಶಾಖಾಮಠವಾಗಿರುವಶ್ರೀಮಠದ ಸ್ಥಾಪಕರು ಅಥಣಿಯ ಶಿವಯೋಗಿಗಳೆಂದೆ ಹೆಸರಾಗಿದ್ದ ಶ್ರೀ ಮುರುಘೇಂದ್ರಶಿವಯೋಗಿಗಳ ಶಿಷ್ಯರಾದ ಶ್ರೀ ದಮ್ಮಯ್ಯ ಮಹಾಸ್ವಾಮಿಗಳು.ಯಾವುದೇ ರೀತಿಯ ಮಠಗಳ ಅಧಿಕಾರವನ್ನು ಹೊಂದಿಲ್ಲದೇ ತಮ್ಮದೇ ಆದಧರ್ಮಮಾರ್ಗದಿಂದ ಸದಾ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ನಾಡಿನುದ್ದಗಲಕ್ಕೂಹೆಸರಾದ ಶ್ರೀ ಮುರುಘೇಂದ್ರ ಶಿವಯೋಗಿಗಳಿಗೆ ಅಪಾರ ಶಿಷ್ಯಬಳಗ ಹಿಂಬಾಲಿಸುತ್ತಿತ್ತು.ಅಂತಹ ಶಿಷ್ಯರಲ್ಲಿ ಒಬ್ಬರಾದ ಪೂಜ್ಯ ಶ್ರೀ ದಮ್ಮಯ್ಯ ಮಹಾಸ್ವಾಮಿಗಳು ಗುರುಗಳುನೆಲೆನಿಂತು ಜಾಗೃತಗೊಳಿಸಿದ ನಿಪ್ಪಾಣಿಯ ಈ ಸ್ಥಳದಲ್ಲಿ ಶ್ರೀ ಮುರುಘೇಂದ್ರ ಸ್ವಾಮಿವಿರಕ್ತಮಠವನ್ನು ಸ್ಥಾಪಿಸಿದರು.ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಕಾಲಘಟ್ಟದಲ್ಲಿಸ್ಥಾಪಿತಗೊಂಡಿತ್ತೆಂದು ಹೇಳಲಾಗುವ ಸ್ವಾಮಿ ವಿರಕ್ತಮಠದ ಮುಂದಿನ ಪರಂಪರೆಯ ಬಗ್ಗೆಮಾಹಿತಿಗಳು ದೊರೆಯುವುದಿಲ್ಲ. ಶ್ರೀ ದಮ್ಮಯ್ಯ ಮಹಾಸ್ವಾಮಿಗಳ ನಂತರಬಂದಿರಬಹುದಾದ ಶ್ರೀಗಳ ಕುರಿತು ದಾಖಲೆಗಳ ಕೊರತೆಯಿದೆ. ಇಂದಿಗೂ ಶ್ರೀಮಠಕ್ಕೆಮಠದ ಸ್ಥಾಪಕರಾದ ಶ್ರೀ ದಮ್ಮಯ್ಯ ಮಹಾಸ್ವಾಮಿಗಳ ಹೆಸರಿನಿಂದಲೂ ಗುರುತಿಸುತ್ತಿದ್ದು ಶ್ರೀದಮ್ಮಯ್ಯ ಮಠವೆಂತಲೂ ಕರೆಯಲಾಗುತ್ತದೆ.ದೀರ್ಘಕಾಲ ಖಾಲಿ ಉಳಿದಿರುವ ಶ್ರೀಮಠಕ್ಕೆ ಭಕ್ತರ ಅಪೇಕ್ಷೆ ಮೇರೆಗೆಚಿತ್ರದುರ್ಗದ ಶ್ರೀ ಮುರುಘಾ ಬೃಹನ್ಮಠದ ಶ್ರೀ ಮುರುಘಾ ಶರಣರಿಂದ ನಿಯುಕ್ತಿಗೊಂಡುಬಂದಿರುವ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. 2008 ಜುಲೈ 02ರಂದು ಶ್ರೀಮಠದ ಅಧಿಕಾರವನ್ನುಸ್ವೀಕರಿಸಿದ ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕವಾಗಿಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು
Date of Birth :
12-11-1958
Place :
ಹೊಸಕೋಟೆ, ರಾಮದುರ್ಗ ತಾ||
Pattadikara :
02-07-2008
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಛಟ್ಟಿ ಅಮವಾಸ್ಯೆಗೆ ಶ್ರೀ ದಾನಮ್ಮ ದೇವಿ ಜಾತ್ರೆ,
ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಮುರುಘೇಂದ್ರಸ್ವಾಮಿ ವಿರಕ್ತ ಮಠ
ಭಗವಾನ್ ಗಲ್ಲಿ, ನಿಪ್ಪಾಣಿ - 591 237
ಚಿಕ್ಕೋಡಿ ತಾ||, ಬೆಳಗಾವಿ ಜಿಲ್ಲೆ

Map

Near by Places

ನಿಪ್ಪಾಣಿ 2 ಕಿ.ಮೀ.
ಚಿಕ್ಕೋಡಿ 10 ಕಿ.ಮೀ.
ಬೆಳಗಾವಿ 72 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!