ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣವು ಜಿಲ್ಲಾ ಕೇಂದ್ರದಿಂದ 60 ಕಿ.ಮೀ.ದೂರದಲ್ಲಿದ್ದು ಈ ಪಟ್ಟಣದ ಗುರುವಾರಪೇಟೆ ಬಡಾವಣೆಯಲ್ಲಿ ಪರಮಪೂಜ್ಯ ಶ್ರೀಚರಮೂರ್ತಿ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀಸಂಪಾದನ ಚರಮೂರ್ತಿ ಮಠವು ತನ್ನ ಕರ್ತೃತ್ವಶಕ್ತಿಯಿಂದಾಗಿ, ಶ್ರೀಮಂತಪರಂಪರೆಯಿಂದಾಗಿ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.12ನೇ ಶತಮಾನದಲ್ಲಿ ಶ್ರೀ ಅಲ್ಲಮಪ್ರಭುಗಳು ಕಲ್ಯಾಣಕ್ಕೆ ಹೋಗುವಾಗ ಇಲ್ಲಿಕೆಲವು ದಿನ ಅನುಷ್ಠಾನಗೊಂಡು ಈ ಸ್ಥಳವನ್ನು ಜಾಗೃತ ಸ್ಥಳವನ್ನಾಗಿ ಮಾಡಿದ್ದರು ಎಂದುತಿಳಿದು ಬರುತ್ತದೆ. ಕಾಲಾನಂತರ ಸುಮಾರು 15ನೇ ಶತಮಾನದ ನಂತರ ಶ್ರೀಮಠವನ್ನುಕರ್ತೃಗುರುಗಳಾದ ಶ್ರೀ ಚರಮೂರ್ತಿ ಮಹಾಸ್ವಾಮಿಗಳು ಸ್ಥಾಪಿಸಿ ವೀರಶೈವಧರ್ಮಾಚರಣೆಗಳ ಮಹತ್ವವನ್ನು ಜನರಿಗೆ ಸಾರಿದ್ದಾರೆ.ಪುರಾತನ ಕಾಲದ ಶ್ರೀಮಠದ ಪರಂಪರೆಯು ಶ್ರೀಮಂತವಾಗಿ ಬೆಳೆದುವಿಶಾಲವಾದ ಕಟ್ಟಡವನ್ನು ರೂಪಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡುಬರುತ್ತಿದ್ದು ಪರಂಪರೆಯ ಗುರುಗಳ ಬಗ್ಗೆ ನಿಖರವಾಗಿ ಹೇಳಲು ಬರುವುದಿಲ್ಲ. ಆದರೂಬಂದಿರುವ ಗುರುಗಳೆಲ್ಲರು ವೀರಶೈವ ಧರ್ಮಾಚರಣೆಗಳನ್ನು ಅನುಷ್ಠಾನಕ್ಕೆ ತಂದುಮಠವನ್ನು ಮುನ್ನಡೆಸಿದ್ದಾರೆ. ಈ ಮಧ್ಯೆ ಕೆಲ ಅಹಿತಕರ ಕಾರಣಗಳಿಂದಾಗಿ ಶ್ರೀಮಠವುಖಾಲಿ ಉಳಿದದ್ದು ಕಂಡುಬರುತ್ತಿದ್ದು ಆನಂತರದಲ್ಲಿ ಶ್ರೀ ಮ.ನಿ.ಪ್ರ. ನೀಲಕಂಠಮಹಾಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆಎಂದು ತಿಳಿದು ಬರುತ್ತದೆ. ಶ್ರೀಗಳು ಮಠದಲ್ಲಿ ಬಡವಿದ್ಯಾರ್ಥಿಗಳಿಗೆ ನಿತ್ಯ ಪ್ರಸಾದದವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ.ಸ್ವ. ಸಂಪಾದನ ಮಹಾಸ್ವಾಮಿಗಳು 2003ರಮೇ 08ರಂದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡಿದ್ದು ಶ್ರೀಮಠವನ್ನು ಧಾರ್ಮಿಕಆಚರಣೆಗಳೊಂದಿಗೆ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ. ಶ್ರೀಮಠದಲ್ಲಿ ಪ್ರಮುಖವಾಗಿವಿಜೃಂಬಣೆಯ ಬಸವಜಯಂತಿಯನ್ನು ಆಚರಿಸಲಾಗುತ್ತಿದ್ದು ಆ ಸಮಯದಲ್ಲಿ ಲಿಂಗದೀಕ್ಷೆಕಾರ್ಯಕ್ರಮ ಹಾಗೂ ಪುರಾಣ ಪ್ರವಚನಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೇನವಂಬರ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಸಂಪಾದನ ಮಹಾಸ್ವಾಮಿಗಳು
Date of Birth :
21-07-1969
Place :
ಹುಲಿಯಾಳು, ಜಮಖಂಡಿ ತಾ||
Pattadikara :
08-05-2003
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ
ಬಸವ ಜಯಂತಿ ಆಚರಣೆ (ಪುರಾಣ ಪ್ರವಚನ, ಲಿಂಗದೀಕ್ಷೆ ಕಾರ್ಯಕ್ರಮ)
ಅಕ್ಕಮಹಾದೇವಿ ಜಯಂತಿ ಆಚರಣೆ
£ವ Àಂಬರ್‍ನಲ್ಲಿ ಕನ್ನಡ ರಾಜ್ಯೋತ್ಸವ
ಕಾರ್ತೀಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ಸಂಪಾದನ ಚರಮೂರ್ತಿ ಮಠ
ಗುರುವಾರ ಪೇಟೆ,
ಚಿಕ್ಕೋಡಿ - 591 201 ಬೆಳಗಾವಿ ಜಿಲ್ಲೆ