Shree Sidda Samsthana Matha-Adi

Shree Sidda Samsthana Matha-Adi Claimed

ಶ್ರೀ ಸಿದ್ದಸಂಸ್ಥಾನ ಮಠ - ಆಡಿ

Average Reviews

Description

ಶ್ರೀ ಸಿದ್ದಸಂಸ್ಥಾನ ಮಠ – ಆಡಿ

ಕರ್ತೃ – ಶ್ರೀ ಮ.ನಿ.ಪ್ರ. ಸಿದ್ದೇಶ್ವರ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಆಡಿ ಗ್ರಾಮದ ಹೊರಭಾಗದಲ್ಲಿ 19ನೇಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಿದ್ದಸಂಸ್ಥಾನ ಮಠವು ಈ ಭಾಗದ ಪ್ರಮುಖಮಠವಾಗಿ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ. ಶ್ರೀಮಠದ ಪ್ರಥಮಗುರುಗಳಾಗಿ ಶ್ರೀ ಮ.ನಿ.ಪ್ರ. ಸಿದ್ದೇಶ್ವರ ಮಹಾಸ್ವಾಮಿಗಳು ಅಧಿಕಾರ ನಡೆಸಿದ್ದು ಮಠವನ್ನುಪ್ರಸಿದ್ದಿಗೆ ತಂದಿದ್ದಾರೆ. ಇಲ್ಲಿ ಮಠ ಸ್ಥಾಪನೆಯಾಗುವುದಕ್ಕೂ ಮೊದಲು ಅಂಕಲಗಿಯ ಶ್ರೀಅಡವಿ ಸಿದ್ದೇಶ್ವರರು ಅನುಷ್ಠಾನಗೊಂಡಿದ್ದರು ಎಂದು ತಿಳಿದು ಬರುತ್ತದೆ. ಸುಮಾರು1818ರಲ್ಲಿ ಸಂಚಾರದಲ್ಲಿದ್ದ ಶ್ರೀ ಅಡವಿಸಿದ್ದೇಶ್ವರರು ಆಡಿಯಲ್ಲಿ ಕೆಲಕಾಲ ಅನುಷ್ಠಾನಗೊಂಡುಈ ಸ್ಥಳವನ್ನು ಜಾಗೃತಗೊಳಿಸಿದ್ದರು ಎಂದು ತಿಳಿದು ಬರುತ್ತದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳುತಮ್ಮ ಧರ್ಮೋಪದೇಶ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಠವನ್ನು ಹೆಚ್ಚುಪ್ರಸಿದ್ದಿಗೆ ತಂದರು. ಹಸಿದ ಹೊಟ್ಟೆಗಳಿಗೆ ಅನ್ನವನ್ನು ನೀಡುವುದಕ್ಕಿಂತ ಶ್ರೇಷ್ಠವಾದದ್ದುಯಾವುದೂ ಇಲ್ಲವೆಂದು ಸಾರಿದ ಶ್ರೀಗಳು ಶ್ರೀಮಠದಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಮಹತ್ವನೀಡಿದ್ದರು. ತಮ್ಮ ತತ್ವಾದರ್ಶಗಳ ಮೂಲಕ ಹೆಸರಾಗಿದ್ದ ಕರ್ತೃಗುರುಗಳು ನಿರ್ವಿಕಲ್ಪಸಮಾದಿಯಾದರೆಂದು ತಿಳಿದುಬರುತ್ತದೆ.ಇವರ ನಂತರ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಶ್ರೀ. ಮ.ನಿ.ಪ್ರ.ಬಾಳೂರು ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಕಂಡಿದ್ದು ತದನಂತರ1972ರಲ್ಲಿ ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀಮಠದಲ್ಲಿಆಡಳಿತ ನಡೆಸಿದ್ದಾರೆ. ಶ್ರೀಗಳು ಕಾಯಕಯೋಗಿಗಳಾಗಿ ಶಿವಪೂಜಾ ನಿಷ್ಠರಾಗಿಶ್ರೀಮಠವನ್ನು ವಿಸ್ತಾರಗೊಳಿಸಿ ಅಭಿವೃದ್ಧಿಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಿದ್ದೇಶ್ವರ ಮಹಾಸ್ವಾಮಿಗಳು 1997ರ ಏಪ್ರಿಲ್27ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಹೆಚ್ಚು ಕ್ರಿಯಾಶೀಲರಾಗಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತ ಹರಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿಗಳನ್ನು ಆಚರಿಸುತ್ತಿದ್ದುಕಾರ್ತೀಕ ಮಾಸದಲ್ಲಿ ಶ್ರೀಮಠದ ಜಾತ್ರೆಯನ್ನು ನಡೆಸಲಾಗುತ್ತಿದೆ ಹಾಗೂ ಯುಗಾದಿ ಪಾಡ್ಯಕ್ಕೆಮತ್ತು ಶ್ರಾವಣ ಮಾಸದ ಪ್ರತಿ ಸೋಮವಾರ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
26-01-1971
Place :
ಜೀಗಳೂರು, ರೋಣ ತಾ||
Pattadikara :
27-04-1997
Photo :

Programs

ಪ್ರತಿ ಅಮವಾಸೆಗೆ ರುದ್ರಾಭಿಷೇಕ
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಹಾಗೂ ಪ್ರತಿ ಸೋಮವಾರ ಪಲ್ಲಕ್ಕಿ ಉತ್ಸವ
ಕಾರ್ತಿಕ ಮಾಸದಲ್ಲಿ ಶ್ರೀಮಠದ ಜಾತ್ರೆ
ಬಸವ ಜಯಂತಿ ಮತ್ತು ಶ್ರೀ ಅಕ್ಕಮಹಾದೇವಿ ಜಯಂತಿ ಆಚರಣೆ
ಯುಗಾದಿ ಪಾಡ್ಯಕ್ಕೆ ಪಲ್ಲಕ್ಕಿ ಉತ್ಸವ
ಮಣ್ಣೆತ್ತಿನ ಅಮವಾಸೆಗೆ ಮಾವಿನ ಹಣ್ಣಿನ ಸಿಹಿಕರ್ಣೆ ಮತ್ತು ಗೋಧಿ ರೊಟ್ಟಿ ಪ್ರಸಾದ

Photos

Full Address Kannada

ಶ್ರೀ ಸಿದ್ದಸಂಸ್ಥಾನ ಮಠ
ಆಡಿ - 591 215
ಚಿಕ್ಕೋಡಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಮಂಗೂರು ಕ್ರಾಸ್ - 5 ಕಿ.ಮೀ.
ನಿಪ್ಪಾಣಿ - 12 ಕಿ.ಮೀ.
ಬೆಳಗಾವಿ - 84 ಕಿ.ಮೀ.
ಮಹಾರಾಷ್ಟ್ರಗಡಿ - 10 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!