Shree Kshetra Panchagraha Matha – Bhutaramanahatti

Shree Kshetra Panchagraha Matha – Bhutaramanahatti Claimed

ಶ್ರೀ ಕ್ಷೇತ್ರ ಪಂಚಗ್ರಾಮ ಮುಕ್ತಿ ಮಠ - ಭೂತರಾಮನಹಟ್ಟಿ

Average Reviews

Description

ಶ್ರೀ ಕ್ಷೇತ್ರ ಪಂಚಗ್ರಾಮ ಮುಕ್ತಿ ಮಠ – ಭೂತರಾಮನಹಟ್ಟಿ

ಶ್ರೀ ಷ.ಬ್ರ. ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ. ದೂರದಲ್ಲಿಭೂತರಾಮನಹಟ್ಟಿ ಎಂಬ ಊರು. ಆ ಊರ ಹೊರವಲಯದ ಗುಡ್ಡದಲ್ಲಿ ಈಗ್ಗೆ 20ವರ್ಷಗಳ ಹಿಂದೆ ಮಾಹಮಹಿಮ, ತಪೋರತ್ನ, ಅನುಷ್ಠಾನಪ್ರಿಯ ಶ್ರೀ. ಷ.ಬ್ರ. ಧರ್ಮಶ್ರೀತಪೋರತ್ನ ಶಿವಸಿದ ್ದ ಸೋಮೇಶ ್ವರ ಶಿವಾಚಾರ್ಯ ಮಹಾಸ್ವಾಮಿಗಳನೆಲೆಗೊಳ್ಳುವಿಕೆಯಿಂದಾಗಿ ತಪೋಕ್ಷೇತ್ರವಾಗಿ ಸ್ಥಾಪಿತಗೊಂಡಿರುವ ಶ್ರೀ ಕ್ಷೇತ್ರ ಪಂಚಗ್ರಾಮಮುಕ್ತಿ ಮಠವು ಅಸಂಖ್ಯಾತ ಭಕ್ತರ ಪಾಲಿನ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವಾಗಿಪ್ರಸಿದ್ಧಿಗೊಂಡಿದೆ.1970ರ ಆಗಸ್ಟ್ 15ರಂದು ಕಲಬುರ್ಗಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಗುರುಶ್ರೀ ಸಿದ್ದಲಿಂಗ ಶಿವಾಚಾರ್ಯರ ಆಶೀರ್ವಾದದಿಂದ ಹುಟ್ಟಿದ ಮಗುವೇ ಸೋಮೇಶ.ಚಿಕ್ಕವಯಸ್ಸಿನಿಂದಲೇ ಶಿವನಾಮ ಸ್ಮರಣೆಯಲ್ಲಿ ಬೆಳೆದ ಸೋಮೇಶ ಶಿವಪುರದಸಿದ್ದಲಿಂಗೇಶ್ವರ ಮಠಕ್ಕೆ ತನ್ನ 7ನೇ ವಯಸ್ಸಿನಲ್ಲಿಯೇ ಮರಿಸ್ವಾಮಿಗಳಾದರು. ಅಲ್ಲಿಂದಶುರುವಾದ ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯರ ಹಾಗೂ ಶಿಷ್ಯ ಸೋಮೇಶ್ವರರ ಸಂಬಂಧಸೋಮೇಶ್ವರರನ್ನು ಪರಿಪಕ್ವಗೊಳಿಸಿತು. ಸಿದ್ದಲಿಂಗೇಶ್ವರ ಮಠಕ್ಕೆ ಮರಿಗಳಾಗಿ ಕೆಲವೇದಿನಗಳಲ್ಲಿ ಸೋಮೇಶ್ವರರು ತಮ್ಮ ಪ್ರಥಮ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಾರೆ. ಆಗ ಅವರಿಗೆ8 ವರ್ಷ ನಿರಂತರ 41 ದಿನಗಳ ಕಾಲ ಅನ್ನ ಸೇವಿಸದೆ ಮೌನದಿಂದ ಅನುಷ್ಠಾನ ಕೈಗೊಂಡುಯಶಸ್ವಿಯಾದ ಸೋಮೇಶ್ವರರು ಅಂದಿನಿಂದ ಇಂದಿನವರೆಗೆ 22 ಬಾರಿ ಅನುಷ್ಠಾನಗಳನ್ನುಯಶಸ್ವಿಯಾಗಿ ಕೈಗೊಂಡಿದ್ದಾರೆ.ಸೋಮೇಶ್ವರರು ಸದಾ ಸಂಚಾರಿಗಳು. ಬಾಲ್ಯದಿಂದಲೇ ಗುರುಗಳ ಅಪ್ಪಣೆಪಡೆದು ಸಂಚಾರ ಹೊರಟು ಅಲ್ಲಲ್ಲೇ ಕಠೋರ ಅನುಷ್ಠಾನಗಳನ್ನು ಕೈಗೊಳ್ಳುತ್ತಿದ್ದರು. ನಂತರತಮ್ಮ 10ನೇ ವಯಸ್ಸಿನಲ್ಲಿ ಕಾಶಿ ಜಂಗಮವಾಡಿ ಮಠಕ್ಕೆ ತೆರಳಿ ಸಂಸ್ಕøತ ಅಭ್ಯಾಸಕೈಗೊಂಡರು. ಅಲ್ಲಿಂದ ಮುಂದೆ ಪಂಚಪೀಠಗಳನ್ನು ಸಂದರ್ಶಿಸಿ ಕೊನೆಗೆ ಶಿವಪುರಕ್ಕೆಮರಳುತ್ತಾರೆ. ಆನಂತರ ಗುರುಗಳ ಆಜ್ಞೆಯಿಂದ ಮತ್ತೆ ಸಂಚಾರ ಹೊರಟ ಶ್ರೀಗಳು ಸತತಮೂರು ವರ್ಷಗಳ ಸಂಚಾರದಲ್ಲಿ ಹಲವಾರು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾಅನುಷ್ಠಾನ ಕೈಗೊಳ್ಳುತ್ತಾ ಕೊನೆಯಲ್ಲಿ ತಮ್ಮ ಮೂರು ವರ್ಷಗಳ ಕೊನೆದಿನಭೂತರಾಮನಹಟ್ಟಿಗೆ ಬಂದು ಸಮೀಪದ ಗುಡ್ಡದ ಪತ್ರಿವನಗಳ ಮಧ್ಯದಲ್ಲಿಅನುಷ್ಠಾನಗೊಳ್ಳುತ್ತಾರೆ. ಹೀಗೆ ಇಲ್ಲಿ ನೆಲೆನಿಲ್ಲುವ ಶ್ರೀಗಳ ತೇಜಸ್ಸನ್ನು ಕಂಡ ಸುತ್ತಲಗ್ರಾಮಸ್ಥರು ಶ್ರೀಗಳಿಗೆ ಕುಟೀರ ಸ್ಥಾಪಿಸಿ ಹಂತ ಹಂತವಾಗಿ ಬೆಳೆಯಲು ಕಾರಣರಾವರು(ಕಾಲ – 1995).ಹೀಗೆ ನೆಲೆನಿಂತ ಶ್ರೀಗಳು ಪಂಚಗ್ರಾಮ ಮುಕ್ತಿ ಮಠವನ್ನು ಸ್ಥಾಪಿಸಿ ಅದರಮೂಲಕ ಭಕ್ತಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮಠದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ ದಾಸೋಹ ನಡೆಸುತ್ತಾ 41 ದಿನಗಳ ಅನುಷ್ಠಾನವನ್ನು ಪೂರ್ಣಗೊಳಿಸುತ್ತಾರೆ.ತದನಂತರ ಮತ್ತೊಮ್ಮೆ 1997ರ ಸೆಪ್ಟೆಂಬರ್ 10ರಲ್ಲಿ 4 ತಿಂಗಳ ಕಠೋರ ಮೌನಉಪವಾಸ ಅನುಷ್ಠಾನವನ್ನು ಕೈಗೊಂಡ ಶ್ರೀಗಳು ಯಶಸ್ವಿಯಾಗಿ ಪೂರ್ಣಗೊಳಿಸಿದಾಗಪಂಚಗ್ರಾಮ ಮಠ ಕಮಿಟಿಯವರು 14-1-1998 ರಿಂದ 18-1-1998ರವರೆಗೆ ಹಲವುಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಂದಿನಿಂದ ಪ್ರತಿವರ್ಷ ಜನವರಿ 14 ರಿಂದ18ರವರೆಗೆ ಜಾತ್ರಾ ಮಹೋತ್ಸವ ಜರುಗುತ್ತಿದೆ.ಕಾಲಕ್ರಮೇಣ ಶ್ರೀಮಠದ ಕಾರ್ಯಕಲಾಪಗಳು ವಿಸ ್ತರಣೆಗೊಂಡುಪ್ರಖ್ಯಾತಿಗಳಿಸುತ್ತಿರುವಾಗ ಶ್ರೀಗಳು ಮತ್ತೊಮ್ಮೆ ಕಠೋರ ಅನುಷ್ಠಾನಕ್ಕೆ ಮುಂದಾಗುತ್ತಾರೆ.ಆದರೆ ಈ ಬಾರಿಯ ಅನುಷ್ಠಾನದ ಅವಧಿ ಒಂದು ವರ್ಷ. 18-1-2002 ರಿಂದ 18-1-2003ರವರೆಗೆ ಮುಚ್ಚಿದ ಕೊಠಡಿಯಲ್ಲಿ ಅನ್ನ-ಆಹಾರವಿಲ್ಲದೇ ಕೇವಲ ಶಿವನಾಮಸ್ಮರಣೆಯೊಂದಿಗೆ ಅನುಷ್ಠಾನದಲ್ಲಿದ್ದವರು ಶ್ರೀಗಳು. 2003ರ ಜನವರಿ 18ರಂದುಪಂಚಪೀಠಾಧಿಪತಿಗಳ, ಮಾಧ್ಯಮದವರ ಹಾಗೂ ಲಕ್ಷಾಂತರ ಜನರ ಸಮ್ಮುಖದಲ್ಲಿಶ್ರೀಗಳನ್ನು ಹೊರತಂದಾಗ ಜೈಕಾರ ಮುಗಿಲು ಮುಟ್ಟಿದ್ದವು. ಹೀಗೆ ತಪೋರತ್ನ ಶ್ರೀಗಳಅನುಷ್ಠಾನಗಳು ರೋಮಾಂಚನಗೊಳಿಸುವಂತವು.ಆನಂತರದ ಈ ಒಂದು ದಶಕದಲ್ಲಿ ಮುಕ್ತಿ ಮಠದ ಕೀರ್ತಿ ನಾಡಿನುದ್ದಗಲಕ್ಕೂಹರಡಿದೆ. ಶ್ರೀಗಳು ಕೈಗೊಂಡ 1 ಲಕ್ಷ 96 ಸಾವಿರ ಶರಣರಿಗೆ ಶಿವದೀಕ್ಷೆ, 15 ಕೋಟಿಜಪಯಜ್ಞ ಕಾರ್ಯ, 66 ಸಾವಿರ ಸುಮಂಗಲಿಯರಿಂದ ಕುಂಭಮೇಳ, 5 ಸಾವಿರಮುತ್ತೈದೆಯವರಿಂದ ಆರತಿ ಕಾರ್ಯ, 2012ರ ಜನವರಿಯಲ್ಲಿ ನಡೆದ 13 ದಿನಗಳಅತಿರುದ್ರ ಮಹಾಯಾಗ ಹಾಗೂ ಶ್ರೀ ಆಯುತ ಚಂಡಿ ಮಹಾಯಜ್ಞ ಹೀಗೆ ಹತ್ತು ಹಲವುಕಾರ್ಯಕ್ರಮಗಳನ್ನು ವಿವರಿಸಲಸಾಧ್ಯ.ಶ್ರೀ ಶಿವಸಿದ್ದ ಸೋಮೇಶ್ವರ ಸ್ವಾಮಿಗಳವರು ತಮ್ಮ ಗುರುಗಳಾದ ಶ್ರೀ ಸಿದ್ದಲಿಂಗಶಿವಾಚಾರ್ಯರು ತೋರಿದ ಹಾದಿಯಲ್ಲಿ ನಡೆದು ಹಿಂದುಸ್ಥಾನವನ್ನು ಸಂಚರಿಸಿದ್ದಾರೆ.ಯೋಗ ಸಾಧನೆಯ ಮೂಲಕ ವರ್ಷಾನುಗಟ್ಟಲೇ ಸಿಮೆಂಟ್ ಕಾಂಕ್ರೀಟ್ ಗೋಡೆಯಲ್ಲಿಬೆಳಕು ಗಾಳಿ ಆಡದ ಸ್ಥಳದಲ್ಲಿದ್ದುಕೊಂಡು ಅನುಷ್ಠಾನಗಳನ್ನು ಕೈಗೊಳ್ಳುತ್ತ ಅನುಷ್ಠಾನಗಳಅಗಮ್ಯ ಗುರುಗಳಾಗಿದ್ದಾರೆ. ಇಂತಹ ಮಹಾಮಹಿಮರ ಬಗ್ಗೆ ಹಾಗೂ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಕೇವಲ ಎರಡು ಪುಟಗಳಲ್ಲಿ ಹಿಡಿದಿಡುವುದು ಅಸಾಧ್ಯವೇ ಸರಿ.

Swamiji

Swamiji Name :
ಶ್ರೀ ಷ.ಬ್ರ. ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-08-1970
Place :
ಶಿವಪುರ, ಗುಲಬರ್ಗಾ ತಾ||
Photo :

Programs

ಪ್ರತಿ ಅಮವಾಸೆಗೆ ಪಾರ್ವತಿ ಪರಮೇಶ್ವರ ಪಲ್ಲಕ್ಕಿ ಉತ್ಸವ
ಮಕರ ಸಂಕ್ರಾಂತಿಯಂದು ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು
ಪ್ರತಿ ತಿಂಗಳ ಸಂಕಷ್ಠಿಯಂದು ಶ್ರೀ ವಿನಾಯಕ ಮಹಾ ಅಭಿಷೇಕ
ಅಕ್ಷಯ ತೃತೀಯದಂದು ಶ್ರೀಮಠದಲ್ಲಿ ಸಾಮೂಹಿಕ ವಿವಾಹ
ಶ್ರಾವಣ ಮಾಸದಲ್ಲಿ 2ನೇ ಸೋಮವಾರದಿಂದ 3ನೇ ಸೋಮವಾರದವರೆಗೆ ಶಿವಸಪ್ತಾಹ
ಕಾರ್ತಿಕ ಮಾಸದಲ್ಲಿ ದೀಪೋತ್ಸವ
ಗಣೇಶ ಚತುರ್ಥಿಗೆ ಶ್ರೀಮಠದಲ್ಲಿ 41ದಿನ ಗಣೇಶ ಮೂರ್ತಿಯನ್ನು ಇಡಲಾಗುವುದು
ಕೃಷ್ಣ ಜಯಂತಿ ನಿಮಿತ್ಯ ಮಹಾರುದ್ರಾಭಿಷೇಕ, ಹೂವಿನ ಅಲಂಕಾರ ಪೂಜೆ
ಮಹಾನವರಾತ್ರಿಗೆ ಶ್ರೀಮಠದಲ್ಲಿ ಮುಕ್ತಾಂಬಿಕ ಅಮ್ಮನವರಿಗೆ ವಿಶೇಷ ಪೂಜೆ
ಶ್ರೀಗಳು 8-10-1995ರಂದು ಮೊಟ್ಟ ಮೊದಲ ಬಾರಿಗೆ ಶ್ರೀ ಬೆಟ್ಟಕ್ಕೆ ಪಾದಾರ್ಪಣೆ
ಮಾಡಿದ ನಿಮಿತ್ತ ಪ್ರತಿ ವರ್ಷ ಇದೇ ತಾರೀಖಿನಂದು ವಿಶೇಷ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಕ್ಷೇತ್ರ ಪಂಚಗ್ರಾಮ ಮುಕ್ತಿ ಮಠ
ಭೂತರಾಮನಹಟ್ಟಿ - 591 156
ಬೆಳಗಾಂ ತಾ||, ಜಿಲ್ಲೆ

Map

Near by Places

ಭೂತರಾಮನಹಟ್ಟಿ - 1 ಕಿ.ಮೀ.
ಬೆಳಗಾವಿ - 12 ಕಿ.ಮೀ.
ಸಂಕೇಶ್ವರ - 35 ಕಿ.ಮೀ.
ಧಾರವಾಡ - 100 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!