Shree Naganuru Rudrakshi Matha – Belagavi

Shree Naganuru Rudrakshi Matha – Belagavi Claimed

ಶ್ರೀ ನಾಗನೂರು ರುದ್ರಾಕ್ಷಿ ಮಠ - ಬೆಳಗಾವಿ

Average Reviews

Description

ಶ್ರೀ ನಾಗನೂರು ರುದ್ರಾಕ್ಷಿ ಮಠ – ಬೆಳಗಾವಿ

ಕರ್ತೃ – ಶ್ರೀ ಮ.ನಿ.ಪ್ರ. ಅಲ್ಲಮ ಪ್ರಭು ಮಹಾಸ್ವಾಮಿಗಳು

ಬೆಳಗಾವಿಯ ಹೃದಯಭಾಗದಲ್ಲಿರುವ ಶ್ರೀ ನಾಗನೂರು ರುದ್ರಾಕ್ಷಿ ಮಠವುನಾಡಿನ ಅಗ್ರಪಂಕ್ತಿಯ ಮಠಗಳ ಸಾಲಿನಲ್ಲಿ ಬರುತ್ತದೆ. ಶ್ರೀ ಮಠದ ಮೂಲಮಠವುಬೈಲಹೊಂಗಲ ತಾಲ್ಲೂಕಿನ ನಾಗನೂರಿನಲ್ಲಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಆಶ್ರಯನೀಡುವ ಉದ್ದೇಶದಿಂದ ಹಿರಿಯ ಚೇತನ ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಶಿವಬಸವಮಹಾಸ್ವಾಮಿಗಳು ಶ್ರೀ ರುದ್ರಾಕ್ಷಿಮಠದ ಆಡಳಿತವನ್ನು ನಾಗನೂರಿನಿಂದ ಬೆಳಗಾವಿಗೆವರ್ಗಾಯಿಸಿದರು.ಬಿಜಾಪುರ ಜಿಲ್ಲಾ ತೊರವಿ ಗ್ರಾಮದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳುಹಾಗೂ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಲೋಕಸಂಚಾರ ಕೈಗೊಂಡು ಕಿತ್ತೂರಿಗೆ ಆಗಮಿಸಿಅಲ್ಲಿನ ಆಸ್ತಾನದಲ್ಲಿ ಕೆಲಕಾಲ ನೆಲೆನಿಂತು ದೊರೆಗಳಿಗೆ ಆಶೀರ್ವದಿಸಿ ಮುಂದುವರೆದರು.ಮುಂದೆ ಸಂಚಾರ ಮಾಡುತ್ತ ಬೈಲಹೊಂಗಲ ತಾಲ್ಲೂಕಿನ ನಾಗನೂರಿಗೆ ಬಂದು ಭಕ್ತರಕೋರಿಕೆ ಮೇರೆಗೆ ಊರಹೊರಗೆ ನೆಲೆಸಿ ಮಠವನ್ನು ಸ್ಥಾಪಿಸಿದರು. ಹೀಗೆ ಮೊದಲ64ಶ್ರೀಮಠದ ಒಳ ಆವರಣಶ್ರೀಮಠದ ವಾಣಿಜ್ಯ ಕಟ್ಟಡಶ್ರೀಮಠದ ವಿದ್ಯಾರ್ಥಿ ಪ್ರಸಾದ ನಿಲಯ65ಪೀಠಾಧಿಪತಿಗಳಾಗಿ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಎರಡನೇಪೀಠಾಧಿಪತಿಗಳಾಗಿ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಮೂಲಕ 18ನೇ ಶತಮಾನದಪ್ರಾರಂಭದಲ್ಲಿ ಸ್ಥಾಪಿತಗೊಂಡು ಮುಂದುವರೆದಿರುವ ಶ್ರೀ ರುದ್ರಾಕ್ಷಿಮಠವು 9 ಜನಪೀಠಾಧಿಪತಿಗಳನ್ನು ಇಲ್ಲಿಯವರೆಗೂ ಕಂಡಿದೆ.ಪರಂಪರೆಯ ಮೂರನೇ ಗುರುಗಳಾದ ಶ್ರೀ ಸಿದ್ದರಾಮ ಮಹಾಸ್ವಾಮಿಗಳುಪರಮವೈರಾಗ್ಯ ಮೂರ್ತಿಗಳೆಂದೇ ಹೆಸರು ಪಡೆದವರು. ನಿತ್ಯ ಕಂತೆ ಭಿಕ್ಷೆಯನ್ನು ಮಾಡಿದಾಸೋಹಕ್ರಿಯೆಗಳನ್ನು ನಡೆಸುತ್ತಿದ್ದರು. ನಿತ್ಯ ಶಿವಾನುಭವಗೋಷ್ಠಿಗಳ ಮೂಲಕ ಭಕ್ತರಲ್ಲಿಸಾಮಾಜಿಕ ಅರಿವನ್ನು ಮೂಡಿಸುತ್ತಿದ್ದರು. ಭಕ್ತರ ಸಹಕಾರದೊಂದಿಗೆ ಶ್ರೀಮಠಕ್ಕೆ ನೂತನಕಟ್ಟಡವನ್ನು ನಿರ್ಮಿಸಿದರು. ಈ ರೀತಿಯಾಗಿ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಕಾಲದಲ್ಲಿಶ್ರೀಮಠವು ಅಭಿವೃದ್ಧಿ ಕಂಡಿದ್ದು ಆನಂತರದ ಮೂರು ಜನ ಶ್ರೀಗಳ ಬಗ್ಗೆ ಹೆಚ್ಚಿನ ಮಾಹಿತಿದೊರೆಯುವುದಿಲ್ಲ.ಶ್ರೀಮಠದ ನಂತರದ ಗುರುಗಳಾಗಿ ತಮ್ಮ ಎಂಟು ವರ್ಷದ ಎಳೆಪ್ರಾಯದಲ್ಲಿಯೇಶ್ರೀಮಠದ ಅಧಿಕಾರವನ್ನು ವಹಿಸಿಕೊಂಡವರು ಮಹಾನ್ ಸಾಧಕರು, ಕಾಯಕ-ಪ್ರಸಾದಯೋಗಿಗಳೂ ಆಗಿದ್ದ ಶ್ರೀ. ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು. ಶ್ರೀಗಳು ಅಪ್ರತಿಮಸಾಧಕರಾಗಿದ್ದು ಇವರು ನಾಗನೂರಿನ ಶ್ರೀ ರುದ್ರಾಕ್ಷಿ ಮಠದ ಅಧಿಕಾರ ವಹಿಸಿಕೊಂಡ ಮೇಲೆಶ್ರೀಮಠವು ಪ್ರಬುದ್ಧಮಾನವಾಗಿ ಬೆಳೆಯಿತು. ನಾಗನೂರಿಗೆ ಬಂದ ಶ್ರೀ ಶಿವಬಸವಮಹಾಸ್ವಾಮಿಗಳು ಹುಬ್ಬಳ್ಳಿ ರುದ್ರಾಕ್ಷಿ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಶ್ರೀ ಶಿವಯೋಗಮಂದಿರದಲ್ಲಿ ಹಾನಗಲ್ ಶ್ರೀ ಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ 12ವರ್ಷಗಳ ಕಾಲ ಅಧ್ಯಯನ ನಡೆಸಿದರು. ಅಲ್ಲಿಂದ ಶ್ರೀಮಠಕ್ಕೆ ಮರಳಿದ ಶ್ರೀಗಳು ಸ್ವತಃಕಾಯಕಯೋಗಿಗಳಾಗಿ ಆರ್ಥಿಕವಾಗಿ ಬರಿದಾಗಿದ್ದ ಶ್ರೀಮಠದ ಆರ್ಥಿಕ ಪರಿಸ್ಥಿತಿಯನ್ನುಸುಧಾರಿಸಿದರು.ಶಿವಪೂಜಾನಿಷ ್ಠರಾಗಿ, ಕಾಯಕಯೋಗಿಗಳಾಗಿದ್ದ ಶ್ರೀಗಳು ತಮ್ಮಸರಳಜೀವನದಿಂದ ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡಿದ್ದರು. ತಮ್ಮ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನು ಸುತ್ತಮುತ್ತಲೆಲ್ಲಾಪ್ರಸಿದ್ದಿಗೊಳಿಸಿದರು. ಇದರಿಂದಾಗಿ ಶ್ರೀಮಠಕ್ಕೆ ಭಕ್ತರ ಸಹಕಾರ ಹೆಚ್ಚಾಯಿತು. ಕೆಲವೇವರ್ಷಗಳಲ್ಲಿ ಶ್ರೀಮಠವು ಬೃಹದಾಕಾರವಾಗಿ ಬೆಳೆಯಿತು. ಗ್ರಾಮೀಣ ಮಕ್ಕಳವಿದ್ಯಾಭ್ಯಾಸಕ್ಕಾಗಿ ಬೆಳಗಾವಿಯಲ್ಲಿ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಮುಂದೆ ಶ್ರೀಮಠದಆಡಳಿತವನ್ನೇ ಬೆಳಗಾವಿಗೆ ವರ್ಗಾಯಿಸಿದರು. ರಾಷ್ಟ್ರೀಯ ಆಂದೋಲನದ ಜೊತೆತೊಡಗಿಸಿಕೊಂಡಿದ್ದ ಶ್ರೀಗಳು ತಮ್ಮ ಮಠದಲ್ಲಿ ಹೋರಾಟಗಾರರಿಗೆ ವಸತಿ ಮತ್ತು ಪ್ರಸಾದದವ್ಯವಸ್ಥೆಮಾಡಿದರು.ಬೆಳಗಾವಿಯ ಪ್ರಸಾದ ನಿಲಯವನ್ನು ವಿಸ್ತರಿಸಿ 1000 ಜನರು ಪ್ರಸಾದಕ್ಕೆಕುಳಿತುಕೊಳ್ಳುವ ವ್ಯವಸ್ಥೆಯ ಕಟ್ಟಡವನ್ನು ನಿರ್ಮಿಸಿ ನಗರದ ಹೊರಭಾಗದಲ್ಲಿ ಹದಿನಾರುಎಕರೆ ಭೂಮಿಯಲ್ಲಿ ಕಟ್ಟಡಗಳ ಸಮುಚ್ಚಯ ನಿರ್ಮಿಸಿದರು. ಬೆಳಗಾವಿ ನಗರ ಹಾಗೂಗ್ರಾಮಾಂತರ ಪ್ರದೇಶಗಳಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ಸಂಸ್ಕøತ ಶಾಲೆ, 66ಕಾನೂನು ಕಾಲೇಜು, ಪಾಲಿಟೆಕ್ನಿಕ್, ಮಹಿಳಾ ಕಾಲೇಜು, ಅಂಗನವಾಡಿ ತರಬೇತಿ ಕೇಂದ್ರಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಈ ರೀತಿಯಾಗಿ ಶ್ರೀ ಶಿವಬಸವಮಹಾಸ್ವಾಮಿಗಳು ತಮ್ಮ 111 ವರ್ಷಗಳ ಸಾರ್ಥಕ ಜೀವನವನ್ನು ಜೀವಿಸಿಯುಗಪುರುಷರೆನಿಸಿ 1999ರ ಸೆಪ್ಟೆಂಬರ್ 9ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಪರಂಪರೆಯ9ನೇ ಗುರುಗಳಾಗಿ 1989ರ ನವೆಂಬರ್ 10ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದರುಶ್ರೀಗಳು ತಮ್ಮ ಚಿಕ್ಕವಯಸ್ಸಿನಲ್ಲೇ ಬೀಳಗಿ ಕಲ್ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡುನಂತರ ಶಿವಯೋಗ ಮಂದಿರ, ಕಾಶಿ ಹಾಗೂ ಧಾರವಾಡಗಳಲ್ಲಿ ಅಭ್ಯಸಿಸಿದವರು. ಗದಗದಶ್ರೀ ತೋಂಟದಾರ್ಯ ಜಗದ್ಗುರುಗಳ ಅಣತಿಯಂತೆ ಡಾ. ಶಿವಬಸವ ಮಹಾಸ್ವಾಮಿಗಳ(ಹಿಂದಿನ ಶ್ರೀಗಳು) ಸದ್ವಿಚ್ಚೆಯಂತೆ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದರು.ಶ್ರೀಗಳು ಬಂದ ಹೊಸತರಲ್ಲೇ ಐ.ಟಿ.ಐ. ಪಾಲಿಟೆಕ್ನಿಕ್ ಕಾಲೇಜಿಗಾಗಿ ಸ್ವತಂತ್ರ್ಯಕಟ್ಟಡವನ್ನು ಕಟ್ಟಿಸಿ ನಂತರ ಮಹಿಳಾ ಶಿಕ್ಷಣ ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ಡಿ.ಇಡಿಕಾಲೇಜು ಪ್ರಾರಂಭಿಸಿದರು. ನಾಗನೂರಿನಲ್ಲಿ ಐಟಿಐ, ಡಿ.ಇಡಿ ಕಾಲೇಜುಗಳುಪ್ರಾರಂಭಗೊಂಡವು. ಧಾರವಾಡದಲ್ಲಿ ಪ್ರಾಥಮಿಕದಿಂದ ಬಿ.ಇಡಿ ಕಾಲೇಜುವರಗೆ ಶಿಕ್ಷಣಸಮುಚ್ಚಯಗಳನ್ನೇ ನಿರ್ಮಿಸಿದರು. ಐ.ಎ.ಎಸ್ ಪರೀಕ್ಷೆ ತರಬೇತಿಗೆ ಬರುವ ಬಡವಿದ್ಯಾರ್ಥಿಗಳಿಗೆ ವಸತಿ ನೀಡಲು ಬಂಗಲೆ ಕೊಂಡರು. ಬೆಳಗಾವಿಯಲ್ಲಿ ತಾಂತ್ರಿಕಮಹಾವಿದ್ಯಾಲಯ ಪ್ರಾರಂಭಿಸಿದರು. ಹೀಗೆ ಒಂದೇ ಎರಡೇ ಶ್ರೀಗಳು ಕಳೆದ 25ವರ್ಷಗಳಲ್ಲಿ ಅಸಾಧ್ಯವಾದುದನ್ನು ಸಾಧಿಸಿದ್ದಾರೆ.ಯಾವುದಕ್ಕೂ ಯೋಚಿಸದೇ ಸದಾ ಒಂದಲ್ಲೊಂದು ಕಾರ್ಯಚಟುವಟಿಕೆಗಳಲ್ಲಿತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಗೊಳಿಸುವ ಶ್ರೀಗಳ ಸಾಮಾಜಿಕ ಕಳಕಳಿಅಪಾರವಾದುದು. ಆಗಾಗ್ಗೆ ಜನಜಾಗೃತಿಗಾಗಿ ಪಾದಯಾತ್ರೆ ಕೈಗೊಳ್ಳುವುದು, ದೇಶ-ವಿದೇಶಗಳಲ್ಲಿ ಬಸವ ಸಂದೇಶ ಮುಟ್ಟಿಸುವುದು, ಪ್ರಾಚೀನ ತಾಡೋಲೆಗಳನ್ನುಸಂರಕ್ಷಿಸಿಡುವುದು, ಲಿಂಗಾಯತ ಸಂಶೋಧನ ಗ್ರಂಥಾಲಯ ನಿರ್ಮಾಣ, ವಚನಅಧ್ಯಯನ ಕೇಂದ್ರ ಸ್ಥಾಪನೆ, ಶ್ರೀಗಳ ನಡಿಗೆ ಕೃಷಿಯ ಕಡೆಗೆ ಎಂಬ ವಿನೂತನ ಪ್ರಯೋಗ,ಮದ್ಯಪಾನ ವಿರೋದಿ ಜನಜಾಗೃತಿ, ಕನ್ನಡ ಪರ ಹೋರಾಟಗಳು ಇವುಗಳು ಶ್ರೀಗಳಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಈ ಎಲ್ಲಾ ಸಾಧನೆಗಳಿಂದಾಗಿ ಶ್ರೀಗಳಿಗೆ ಬೆಳಗಾವಿಯರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು
Date of Birth :
12-12-1958
Place :
ಬಾಗಲಕೋಟೆ
Pattadikara :
10-11-1989
Photo :

Programs

-

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ ಕಾಲೇಜ್
ಡಿ.ಇ.ಡಿ./ಬಿ.ಇಡಿ ಕಾಲೇಜು ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ
ಐ.ಟಿ.ಐ., ಕಾಲೇಜ್ / ಕಾನೂನು ಕಾಲೇಜು
ಕಿವುಡ, ಮೂಕ ಮಕ್ಕಳ ವಸತಿ ಶಾಲೆಗಳು
ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿ ನಿಲಯ ಉನ್ನತ ಶಿಕ್ಷಣ ಕೇಂದ್ರಗಳು ಸಂಸ್ಕøತ ಪಾಠಶಾಲೆ

Photos

Full Address Kannada

ಶ್ರೀ ನಾಗನೂರು ರುದ್ರಾಕ್ಷಿಮಠ
ಬೆಳಗಾವಿ - 590 016

Map

Near by Places

ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೆ ಸ್ಟೇಷನ್ - 5 ಕಿ.ಮೀ.
ಧಾರವಾಡ - 80 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!