Shree Guru Madivaleshwara Matha – Nichhanaki
Claimed
ಶ್ರೀ ಗುರುಮಡಿವಾಳೇಶ್ವರ ಮಠ - ನಿಚ್ಚಣಕಿ
Average Reviews
Description
ಶ್ರೀ ಗುರುಮಡಿವಾಳೇಶ್ವರ ಮಠ – ನಿಚ್ಚಣಕಿ
ಕರ್ತೃ – ಶ್ರೀ ಗುರು ಮಡಿವಾಳೇಶ್ವರ ಶಿವಯೋಗಿಗಳು
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ನಿಚ್ಚಣಕಿ ಗ್ರಾಮವು ತಾಲ್ಲೂಕುಕೇಂದ್ರದಿಂದ 32 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ವಿರಕ್ತಸಂಪ್ರದಾಯದ ಶ್ರೀ ಗುರುಮಡಿವಾಳೇಶ್ವರ ಮಠವು ಅಸ್ತಿತ್ವದಲ್ಲಿದೆ. ಧಾರವಾಡ ಜಿಲ್ಲಾ ಗರಗಗ್ರಾಮದ ಪ್ರಸಿದ್ದ ಶ್ರೀ ಗುರುಮಡಿವಾಳೇಶ್ವರ ಮಠದ ಶ್ರೀ ಜಗದ್ಗುರು ಮಡಿವಾಳೇಶ್ವರರೇಸಂಚಾರದಲ್ಲಿ ಇಲ್ಲಿಗೆ ಆಗಮಿಸಿ ಮಠವನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ.ಜಗದ್ಗುರು ಶ್ರೀ ಮಡಿವಾಳೇಶ್ವರರು 18ನೇ ಶತಮಾನದಲ್ಲಿ ಬಾಳಿ-ಬದುಕಿನಾಡನ್ನುದ್ದರಿಸಿದ ಮಹಾಮಹಿಮರು. ತಮ್ಮ ಅನುಷ್ಠಾನಗಳಿಂದ, ಲೀಲಾಮೃತಗಳಿಂದನಾಡಿನಾದ್ಯಂತ ಹೆಸರಾಗಿದ್ದ ಶ್ರೀಗಳು ಇಂದಿಗೂ ಲಕ್ಷಾಂತರ ಭಕ್ತರ ಆರಾಧ್ಯದೈವರಾಗಿದ್ದಾರೆ.ಬಾಲ್ಯದಿಂದಲೂ ಅಸಾಧ್ಯ ಶಕ್ತಿಹೊಂದಿ ಗುರುಗಳ ಬೆರಗಿಗೆ ಕಾರಣವಾಗಿದ್ದ ಶ್ರೀಗಳುಕಿತ್ತೂರಿನ ಕಲ್ಮಠದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಕಿತ್ತೂರಿನಿಂದ ತಮ್ಮ 18ನೇವಯಸ್ಸಿಗೆ ಸಂಚಾರ ಹೊರಟ ಶ್ರೀಗಳು ನೆಲೆಗೊಂಡ ಸ್ಥಳಗಳೆಲ್ಲಾ ಜಾಗೃತಸ್ಥಳಗಳಾಗಿಮಠಗಳು ಸ್ಥಾಪನೆಗೊಂಡವು. ಹೀಗೆ ಸ್ಥಾಪಿತಗೊಂಡ ಮಠವೇ ನಿಚ್ಚಣಕಿಯ ಶ್ರೀಗುರುಮಡಿವಾಳೇಶ್ವರ ಮಠ.ನಿಚ್ಚಣಕಿಯ ಶ್ರೀಮಠವು ಶ್ರೀ ಗುರುಮಡಿವಾಳೇಶ್ವರರ ಕಾಲದಿಂದಲೂಅಸ್ತಿತ್ವದಲ್ಲಿದೆ ಎಂದು ಹೇಳಲಾದರೂ ಮಠದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ತಮ್ಮ ಕಾರ್ಯ ಚಟುವಟಿಕೆಗಳಿಂದಹೆಸರಾಗಿದ್ದು ಭಕ್ತರನ್ನು ಜಾಗೃತಗೊಳಿಸಿ 2012ರ ಏಪ್ರಿಲ್ 16ರಂದು ಲಿಂಗಗೊಳಗಾದರು.ಇವರ ಐಕ್ಯಾ ನಂತರ ಗ್ರಾಮದ ಭಕ್ತರ ಅಪೇಕ್ಷೆ ಮೇರೆಗೆ ಧಾರವಾಡ ಮುರುಘಾ ಮಠದಶ್ರೀಗಳ ಆಶೀರ್ವಾದಬಲದೊಂದಿಗೆ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದಶ್ರೀ. ಮ.ನಿ.ಪ್ರ. ಪಂಚಾಕ್ಷರಿ ಸ್ವಾಮಿಗಳು.2012ರ ನವೆಂಬರ್ 25ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀಮ.ನಿ.ಪ್ರ. ಪಂಚಾಕ್ಷರಿ ಸ್ವಾಮಿಗಳು ಅನುಷ್ಠಾನ ಪ್ರಿಯರು. ಆಗಾಗ್ಗೆ ಲೋಕಕಲ್ಯಾಣಾರ್ಥದೀರ್ಘಾನುಷ್ಠಾನ ಕೈಗೊಳ್ಳುತ್ತಾ ಭಕ್ತರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಶ್ರೀಗಳು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಶ್ರೀ ಮಠದಜಾತ್ರಾ ಮಹೋತ್ಸವವು ಭರತ ಹುಣ್ಣಿಮೆಯಲ್ಲಿ ನಡೆಯುತ್ತಿದ್ದು ಅಪಾರ ಭಕ್ತ ಜನಪಾಲ್ಗೊಂಡು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪಂಚಾಕ್ಷರಿ ಸ್ವಾಮಿಗಳು
Date of Birth :
29-10-1954
Place :
ಮೇಳ್ಳೆಗಟ್ಟಿ, ಸವಣೂರು ತಾ||
Pattadikara :
25-11-2012
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ಮಹಾಪ್ರಸಾದ
ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಮಹಾಪ್ರಸಾದ
ಭರತ ಹುಣ್ಣಿಮೆಯಂದು ಶ್ರೀಮಠದ ಜಾತ್ರೆ
Photos
Full Address Kannada
ಶ್ರೀ ಗುರುಮಡಿವಾಳೇಶ್ವರ ಮಠ ನಿಚ್ಚಣಕಿ - 591 115,
ಚನ್ನಮ ಕಿತ್ತೂರು (ಪೋಸ್ಟ್)
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ