ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ವೈದಿಕ ಸಂಪ್ರದಾಯದಕುಟುಂಬದಲ್ಲಿ ಜನಿಸಿ ನಂತರ ಲಿಂಗದೀಕ್ಷೆಯನ್ನು ಪಡೆದು ಮಹಾನ್ ಲಿಂಗವಂತರೆನಿಸಿನಾಡಿನಾದ್ಯಂತ ಸಂಚರಿಸಿದವರು. ಮಡಿಕೇರಿಯಲ್ಲಿ ಜನಿಸಿದ ಪೂಜ್ಯರು(ಹರೀಶ)ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಚಿಕ್ಕ ವಯಸ್ಸಿನಿಂದಲೂ ವಿಶ್ವದದಾರ್ಶನಿಕರ, ಪವಿತ್ರ ಜೀವಿಗಳ ತತ್ವಗಳನ್ನು ಅಭ್ಯಸಿಸುತ್ತಿದ್ದ ಪೂಜ್ಯರು ಆಧ್ಯಾತ್ಮದೆಡೆಗೆಹೊರಟರು.ಅದೇ ಸಮಯದಲ್ಲಿ ಮೈಸೂರಿನಲ್ಲಿ ಬಸವಧರ್ಮ ಪೀಠದ ಪ್ರಥಮ ಜಗದ್ಗುರುಲಿಂ. ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳು “ಬಸವಾದಿ ಶರಣರ ತತ್ವ ಪ್ರವಚನ”ಹೇಳುತ್ತಿದ್ದರು. ಅಲ್ಲಿಗೆ ಪ್ರತಿನಿತ್ಯ ಬರುತ್ತಿದ್ದ ಪೂಜ್ಯರು ಗುರುಗಳ ಪ್ರವಚನವನ್ನು ಕೇಳಿಆನಂದಿಸುತ್ತಾ ಬಸವಾದಿ ಶಿವಶರಣದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರು. ಸದಾಚಟುವಟಿಕೆಯಿಂದಿರುತ್ತಿದ್ದ ಪೂಜ್ಯರಿಗೆ (ಹರೀಶ) ಗುರುಗಳಾದ ಪೂಜ್ಯ ಶ್ರೀ ಲಿಂಗಾನಂದಮಹಾಸ್ವಾಮಿಗಳು ಲಿಂಗದೀಕ್ಷೆಯಿತ್ತು “ನಿಜಗುಣಾನಂದ” ನೆಂದು ನಾಮಕರಣ ಮಾಡಿದರು.ಪೂಜ್ಯ ಶ್ರೀ ನಿಜಗುಣಾನಂದರು ಗುರುಗಳ ಹಾದಿಯಲ್ಲಿಯೇ ಅವರಮಾರ್ಗದರ್ಶನದಲ್ಲಿ ಪ್ರವಚನಗಳನ್ನು ನೀಡುತ್ತಾ ಸಾಗಿದರು. ಕನ್ನಡ, ತಮಿಳು, ತೆಲುಗು,ಮಲಯಾಳಂ, ಹಿಂದಿ ಹಾಗೂ ಕೊಡಗು ಭಾಷೆಗಳನ್ನು ಚೆನ್ನಾಗಿ ಬಲ್ಲ ಶ್ರೀಗಳು ಬಸವಧರ್ಮ ಪೀಠಕ್ಕೆ ಶರಣ ತತ್ವ ಪ್ರಸಾರಕ್ಕೆ ಅವಿಶ್ರಾಂತವಾಗಿ ಸೇವೆ ಸಲ್ಲಿಸಿದರು. ತಮ್ಮಸಂಚಾಲಕತ್ವದಲ್ಲಿ ಬಸವಧರ್ಮ ಸಮ್ಮೇಳನಗಳನ್ನು ಯಶಸ್ವಿಗೊಳಿಸಿ ಗುರುಗಳ ಪ್ರೀತಿಗೆಪಾತ್ರರಾಗಿದ್ದರು.ಗುರುಗಳಾದ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಐಕ್ಯಾ ನಂತರಗದುಗಿನ ಪೂಜ್ಯ ಶ್ರೀ ಜಗದ್ಗುರು ಡಾ|| ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀನಿಜಗುಣಾನಂದರಿಗೆ ಆಶ್ರಯ ನೀಡಿ ಅಣ್ಣಿಗೇರಿಯ ತೋಂಟದಾರ್ಯ ಶಾಖಾ ಮಠವನ್ನುಬಿಟ್ಟುಕೊಟ್ಟರು. ಮುಂದೆ ಪೂಜ್ಯರು ಅಣ್ಣಿಗೇರಿ ಮಠದ ಅಭಿವೃದ್ದಿ ಜೊತೆಗೆ ಕರ್ನಾಟಕಸೇರಿದಂತೆ ಆಂಧ್ರ, ತಮಿಳುನಾಡು, ಕೇರಳಗಳಲ್ಲೂ ಸಂಚರಿಸಿ ಬಸವಾದಿ ಪ್ರಥಮರತತ್ವಗಳನ್ನು ಬಿಂಬಿಸುವ “ಶರಣರ ಜೀವನ ದರ್ಶನ” ಪ್ರವಚನದಿಂದ ಜನತೆಯ ಮನಗೆದ್ದರು.ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರವಚನವನ್ನಾಲಿಸಿದ ವೀರರಾಣಿಚನ್ನಮ್ಮ ನಾಡಿನ ಬೈಲೂರು ಗ್ರಾಮದ ಯುವಕರು ಪೂಜ್ಯರನ್ನು ಕರೆದೊಯ್ದು ಬೈಲೂರುಗ್ರಾಮದಲ್ಲಿ ಪ್ರವಚನ ಶುರುಮಾಡಿದರು. ಅಂದಿನಿಂದ ಯುವಕರ, ಊರಿನ ಜನರ ಮನಪರಿವರ್ತಿತವಾಯಿತು. ಮೂಡನಂಬಿಕೆ, ಕಂದಾಚಾರಗಳನ್ನು ಕಿತ್ತೆಸೆಯುವ ಸಂಕಲ್ಪಮಾಡಿದರು. ಊರಿನ ಹಿರಿಯರನ್ನು ಪೂಜ್ಯರ ಸಮ್ಮುಖದಲ್ಲಿ ಕೂಡಿಸಿ “ಬಸವ ಬೆಳಗುಪ್ರಸಾರ ಸಮಿತಿ”ಯನ್ನು ಕಟ್ಟಿದರು. “ಶ್ರೀ ವಿಜಯ ಯುವಕ ಮಂಡಳ” ಸೇವಾ ಸಂಘದ3637ಮೂಲಕ ಅನೇಕ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸಿ ಪೂಜ್ಯರ ಪ್ರೇರಣೆಯಂತೆಬೈಲೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದರು. ಪೂಜ್ಯರು ಚಲಿಸುವಆಧ್ಯಾತ್ಮ ವಿದ್ಯಾಲಯ. ಎಲ್ಲೂ ಒಂದೆಡೆ ನಿಲ್ಲದ ಶ್ರೀಗಳು ಬೈಲೂರಿನ ಜನರ ಪ್ರೀತಿಗೆನೆಲೆನಿಂತರು. ಭಕ್ತರೇ ಶ್ರೀಗಳಿಗೆ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿ ಪ್ರಾರ್ಥನಾ,ಪ್ರವಚನ, ಪೂಜೆ, ಸಮಾಜ ಸೇವೆಯ ಸಂಕೀರ್ಣ ಕಟ್ಟಡದ ನಿರ್ಮಾಣಕ್ಕೆ ಅಣಿಯಾದರು.”ನಿಷ್ಕಲ ಮಂಟಪ”ವೆಂದು ಪೂಜ್ಯರೇ ಹೆಸರನ್ನು ಸೂಚಿಸಿದರು.ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಈ “ನಿಷ್ಕಲ ಮಂಟಪ”ದಮೂಲಕ ಬಸವಾದಿ ಪ್ರಥಮರ ತತ್ವ ಸಿದ್ಧಾಂತಗಳಾದ ಅಷ್ಟಾವರಣ, ಪಂಚಾಚಾರ,ಷಟ್ಸ್ಥಲ, ಕಾಯಕ, ದಾಸೋಹತತ್ವ, ವಚನ, ಪ್ರವಚನ, ಶರಣರ ಕಲ್ಯಾಣ ದರ್ಶನದಂತಹವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯಲ್ಲಿ ವೈಚಾರಿಕತೆ, ಧಾರ್ಮಿಕಜಾಗ್ರತೆ, ಸಾಮಾಜಿಕ ಅಭಿವೃದ್ದಿಯತ್ತ ಅಡಿ ಇಡುವಂತೆ ತನ್ಮೂಲಕ “ಸರ್ವರಿಗೂ ಸಮಪಾಲುಸರ್ವರಿಗೂ ಸಮಬಾಳನ್ನ” ನೀಡುವ ಶರಣರ ಕಲ್ಯಾಣ ಸಮಾಜ ನಿರ್ಮಾಣಮಾಡಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ.ಪೂಜ್ಯರು “ಪ್ರವಚನ ಕೇಸರಿ” ಎಂಬ ನಾಮಾಂಕಿತವನ್ನು ಹೊಂದಿಬಸವಧರ್ಮದ ದೃಷ್ಠಿಯನ್ನು ಪ್ರತಿಬಿಂಬಿಸುವ ಪ್ರವಚನಗಳನ್ನು ಜನಸಾಮಾನ್ಯರ ಹೃದಯಕ್ಕೆಅಚ್ಚೊತ್ತುವಂತೆ ಮಾಡುತ್ತಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ,ಆಂಧ್ರಗಳಲ್ಲಿ ಎರಡುನೂರಕ್ಕೂ ಅಧಿಕ ಪ್ರವಚನಗಳನ್ನು ನೀಡಿದ್ದಾರೆ. ಶ್ರೀ ಮಠದ ವತಿಯಿಂದ2008ರಲ್ಲಿ “ಅನುಭಾವ ಸಾಹಿತ್ಯ ಗ್ರಂಥಮಾಲೆ” ಎಂಬ ಹೆಸರಿನ ಪ್ರಕಟಣೆಯನ್ನುಪ್ರಾರಂಭಿಸಲಾಗಿದ್ದು ಇಲ್ಲಿಯವರೆಗೂ ಅನೇಕ ಅಮೂಲ್ಯ ಪುಸ್ತಕಗಳು, ಧ್ವನಿಸುರುಳಿಗಳನ್ನುಹೊರತರಲಾಗಿದೆ ಹಾಗೂ “ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪ” ಅವರಸ್ಮರಣಾರ್ಥವಾಗಿ “ಲಿಂಗಾನಂದ ಶ್ರೀ” ಎಂಬ ಪ್ರಶಸ್ತಿಯನ್ನು ಬಸವಧರ್ಮ ಪರಿಪಾಲನೆ,ದೇಶಿಯ ಸಂಸ್ಕøತಿ ಮತ್ತು ಲಿಂಗಾಯತ ತತ್ತ್ವ ಪ್ರಸಾರಕ್ಕೆ ಸೇವೆ ಮಾಡಿದವರನ್ನು ಗುರುತಿಸಿನೀಡಲಾಗುತ್ತಿದೆ. ಈ ಪ್ರಶಸ್ತಿ ರೂ. 25,000/- ನಗದು ಹಾಗೂ ಒಂದು ಪ್ರಶಸ್ತಿ ಪತ್ರವನ್ನುಒಳಗೊಂಡಿದೆ. ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು 2015ರ ಜೂನ್ 8ರಂದುಮುಂಡರಗಿಯ ಶ್ರೀ ತೋಂಟದಾರ್ಯ ಮಠದ ಚರಪಟ್ಟಾಧಿಕಾರ ಸ್ವೀಕರಿಸಿದ್ದು ಉಭಯಮಠಗಳನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು
Date of Birth :
24-2-1964
Place :
ಮೈಸೂರು
Photo :
Programs
ಪ್ರತಿ ತಿಂಗಳು “ತಿಂಗಳ ಜ್ಞಾನ” ಕಾರ್ಯಕ್ರಮ
ಭರತ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ
ಬಸವ ಜಯಂತಿ ಆಚರಣೆ ಜೂನ್ 30ಕ್ಕೆ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಚನ್ನಬಸವೇಶ್ವರ ಜ್ಞಾನಪೀಠ ನಿಷ್ಕಲ ಮಂಟಪ
ಬೈಲೂರು - 591 115
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ