Shree Shettara Matha – Athani

Shree Shettara Matha – Athani Claimed

ಶ್ರೀ ಶೆಟ್ಟರ ಮಠ - ಅಥಣಿ

Average Reviews

Description

ಶ್ರೀ ಶೆಟ್ಟರ ಮಠ – ಅಥಣಿ

ಕರ್ತೃ – ಶ್ರೀ ಮ.ನಿ.ಪ್ರ. ಮರುಳಸಿದ್ದ ಶಿವಯೋಗಿಗಳು

ಅಥಣಿ ಪಟ್ಟಣವು ಪುರಾತನ ವೀರಶೈವ-ಧಾರ್ಮಿಕ ಕೇಂದ್ರ. ಇಲ್ಲಿ ಅನೇಕಮಠಗಳು ಸ್ಥಾಪಿತಗೊಂಡು ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿವೆ.ಅಂತಹ ಮಠಗಳಲ್ಲಿ ಶ್ರೀ ಶೆಟ್ಟರ ಮಠವೂ ಕೂಡ ಒಂದು. ಸಂಚಾರದಲ್ಲಿ ಅಥಣಿಗೆಆಗಮಿಸಿದ ಶ್ರೀ ರುದ್ರಮುನಿ ಶಿವಯೋಗಿಗಳಿಗೆ ಪಟ್ಟಣದ ಶ್ರೀಮಂತ ಶೆಟ್ಟಿ ಮನೆತನದವರುಶ್ರೀಮಠವನ್ನು ಸ್ಥಾಪಿಸಿಕೊಟ್ಟರು ಎಂದು ತಿಳಿದು ಬರುತ್ತದೆ.ಶ್ರೀಮಠದ ಕರ್ತೃಗುರುಗಳೆಂದು ಶ್ರೀ.ಮ.ನಿ.ಪ್ರ. ಮರುಳಸಿದ್ದ ಶಿವಯೋಗಿಗಳನ್ನುಹೆಸರಿಸಲಾಗಿದ್ದು ಇವರು ಶ್ರೀರುದ್ರಮುನಿ ಶಿವಯೋಗಿಗಳ ಶಿಷ್ಯರು. ಗುರುಗಳ ಸೇವೆಯಲ್ಲಿಪರಿಪಕ್ವಗೊಂಡ ಶ್ರೀ ಮರುಳಸಿದ್ದರು ಪುಣ್ಯಕ್ಷೇತ್ರಗಳ ಸಂದರ್ಶನಕ್ಕಾಗಿ ಸಂಚಾರ ಹೊರಟುಶಿವಯೋಗ ಸಿದ್ದಿಯನ್ನು ಪಡೆದು ಶ್ರೀಮಠಕ್ಕೆ ಮರಳಿ ಮಠದ ಅಧಿಕಾರ ಸ್ವೀಕರಿಸುತ್ತಾರೆ.ಶ್ರೀ ಮರುಳಸಿದ್ದ ಶಿವಯೋಗಿಗಳು ಜ್ಞಾನಿಗಳಾಗಿದ್ದು ತಮ್ಮ ಪ್ರವಚನ,ಧರ್ಮೋಪದೇಶಗಳ ಮೂಲಕ ಅಪಾರ ಸಂಖ್ಯೆಯ ಭಕ್ತಬಳಗವನ್ನು ಸಂಪಾದಿಸಿಕೊಂಡರು.ತಮ್ಮ ಕಾರ್ಯಕ್ರಮಗಳ ಮೂಲಕ, ನಿತ್ಯ ಅನ್ನ ದಾಸೋಹ ಕಾರ್ಯಗಳ ಮೂಲಕನಿರ್ಗತಿಕರ ಹಾಗೂ ಮಕ್ಕಳ ಪರಿಪಾಲನೆಗೆ ನಿಂತರು. ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ವಿಸ್ತರಿಸಿದ ಶ್ರೀಗಳಿಂದಾಗಿ ವಿಶಾಲವಾದ ಕಲ್ಲುಕಟ್ಟಡವು ಎದ್ದು ನಿಂತಿದೆ. ತಮ್ಮಕರ್ತೃತ್ವ ಶಕ್ತಿಯಿಂದಾಗಿ ಶ್ರೀಮಠವನ್ನು ಬೆಳಗಿದ ಶ್ರೀಗಳು 1892ರಲ್ಲಿ ಲಿಂಗೈಕ್ಯರಾದರು.ನಂತರದ ಪರಂಪರೆಯಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿದ್ದು ನಂತರ ಹಾವೇರಿಯ ಹುಕ್ಕೇರಿ ಮಠಕ್ಕೆ ನೇಮಕಗೊಂಡರು.ಪ್ರಸ್ತುತ 1956ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿರುವ ಶ್ರೀ. ಮ.ನಿ.ಪ್ರ.ಶಂಕರ ಸ್ವಾಮಿಗಳು ಸುದೀರ್ಘ 60 ವರ್ಷಗಳಿಂದ ಶ್ರೀಮಠವನ್ನು ಅಭಿವೃದ್ಧಿಯೆಡೆಗೆಮುನ್ನಡೆಸಿದ್ದು ಅಪಾರ ಭಕ್ತಬಳಗವನ್ನು ಹೊಂದಿದ್ದಾರೆ. ಶ್ರೀಮಠದ ಜಮೀನನ್ನುಅಭಿವೃದ್ದಿಪಡಿಸಿರುವ ಶ್ರೀಗಳು ಶ್ರೀಮಠದ ಆದಾಯಮೂಲವನ್ನಾಗಿ ಪರಿವರ್ತಿಸಿದ್ದಾರೆ.ಶ್ರೀಗಳು ಇತ್ತೀಚೆಗೆ 2012ರಲ್ಲಿ ಪೂಜ್ಯ ಶ್ರೀ ಬಸವ ಸಿದ್ದಲಿಂಗ ದೇವರನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದಾರೆ. ಉಭಯ ಶ್ರೀಗಳು ಶ್ರೀಮಠದಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು ಪ್ರತಿ ವರ್ಷ ಮಹಾನವಮಿ ಅಮವಾಸೆಗೆ ಐದು ದಿನಮುಂಚಿತವಾಗಿ ಕರ್ತೃಗಳ ಪುಣ್ಯಾರಾಧನ ಮಹೋತ್ಸವವನ್ನು ಆಚರಿಸುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಂಕರ ಸ್ವಾಮಿಗಳು
Date of Birth :
1935
Place :
ರೋಟ್ಟಿವಾಡ, ಕುಂದಗೋಳ ತಾ||
Pattadikara :
22-03-1956
Photo :
Swamiji Name :
ಪೂಜ್ಯ ಶ್ರೀ ಬಸವ ಸಿದ್ದಲಿಂಗದೇವರು
Date of Birth :
1974
Place :
ಕಣಮಂಚನಾಳ, ಬಿಜಾಪುರ ತಾ||
Pattadikara :
21-01-2012
Photo :

Programs

ಮಹಾನವಮಿ ಅಮವಾಸೆಗೆ ಐದು ದಿನ ಮುಂಚಿತವಾಗಿ ಶ್ರೀ ಮರುಳಸಿದ್ಧ ಶಿವಯೋಗಿಗಳ ಪುಣ್ಯಾರಾಧನೆ, ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಶೆಟ್ಟರ ಮಠ ಶೆಟ್ಟರ ಮಠಗಲ್ಲಿ,
ಅಥಣಿ - 591 304 ಅಥಣಿ
ತಾ||, ಬೆಳಗಾವಿ ಜಿಲ್ಲೆ

Map

Near by Places

ರಾಯಭಾಗ 40 ಕಿ.ಮೀ.
ಚಿಕ್ಕೊಡಿ 75 ಕಿ.ಮೀ.
ವಿಜಯಪುರ 80 ಕಿ.ಮೀ.
ಬೆಳಗಾವಿ 150 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!