Shree Gachchina Matha -Athani

Shree Gachchina Matha -Athani Claimed

ಶ್ರೀ ಗಚ್ಚಿನ ಮಠ - ಅಥಣಿ

Average Reviews

Description

ಶ್ರೀ ಗಚ್ಚಿನ ಮಠ – ಅಥಣಿ

ಕರ್ತೃ – ಶ್ರೀ ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು

ಕರ್ನಾಟಕದ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಶ್ರೀ ಗಚ್ಚಿನಮಠವು ಅಥಣಿಪಟ್ಟಣದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿದ್ದು ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಈಭಾಗದಲ್ಲಿ ಧಾರ್ಮಿಕ ವಾತಾವರಣ ನೆಲೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 12ನೇಶತಮಾನದಲ್ಲೇ ಸ್ಥಾಪಿತಗೊಂಡಿತೆಂದು ಹೇಳಲಾಗಿರುವ ಶ್ರೀ ಗಚ್ಚಿನ ಮಠವು ಇಂದುಚಿತ್ರದುರ್ಗದ ಶ್ರೀ ಮುರುಘಾ ಬೃಹನ್ಮಠದ ಶಾಖಾಮಠವಾಗಿ ಬೆಳೆದು ಧಾರ್ಮಿಕಚಟುವಟಿಕೆಗಳ ಕೇಂದ್ರಬಿಂದುವಾಗಿದೆ.ಹನ್ನೆರಡನೆಯ ಶತಮಾನದಲ್ಲಿ ಪರಮ ಪೂಜ್ಯ ಶ್ರೀ ರೇವಣಸಿದ್ದಮಹಾಸ್ವಾಮಿಗಳು ಸಂಚಾರದಲ್ಲಿ ಅಥಣಿಗೆ ಬಂದು ನೆಲೆಸಿ ತಮ್ಮ ಧರ್ಮೋಪದೇಶಗಳಮೂಲಕ ಜನರಲ್ಲಿ ಧರ್ಮಜಾಗೃತಿಯನ್ನುಂಟುಮಾಡಿದರು. ಈ ಸ್ಥಳದಲ್ಲಿ ವೀರಶೈವಮಠವನ್ನು ಸ್ಥಾಪಿಸಿ ಧಾರ್ಮಿಕ ಕಾರ್ಯಗಳು ಹಾಗೂ ಅನ್ನದಾಸೋಹ ನಡೆಯುವಂತೆವ್ಯವಸ್ಥೆಗೊಳಿಸಿದರು ಎಂದು ತಿಳಿದುಬರುತ್ತದೆ. ಹೀಗೆ ಪ್ರಾರಂಭಗೊಂಡ ಶ್ರೀಮಠದಪರಂಪರೆಯು ಶ್ರೀಮಂತವಾಗಿದೆ. ಇಲ್ಲಿಯವರೆಗೂ 13 ಜನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ಹೇಳಲಾಗಿದ್ದು ಪರಂಪರೆಯ ಎಲ್ಲಾ ಗುರುಗಳು ಶ್ರೀಮಠದ ಅಭಿವೃದ್ಧಿಗೆ 5ತಮ್ಮದೇ ಕೊಡುಗೆ ನೀಡಿದ್ದಾರೆ ಹಾಗೂ ಶ್ರೀಮಠದ ಅಧಿಕಾರ ವಹಿಸಿಕೊಳ್ಳದೇ ಮಠದಲ್ಲಿನೆಲೆಸಿ ಭಕ್ತರನ್ನುದ್ದರಿಸಿ ನಡೆದಾಡುವ ದೇವರೆಂದೇ ಹೆಸರು ಪಡೆದ ಶ್ರೀ ಮುರುಘೇಂದ್ರಶಿವಯೋಗಿಗಳಿಂದ ಶ್ರೀಮಠವು ಪ್ರತಿಷ್ಠಿತ ಮಠವಾಗಿ ರೂಪುಗೊಂಡಿತು.ಶ್ರೀ ಮುರುಘೇಂದ್ರ ಶಿವಯೋಗಿಗಳು:- ಇಂಗಳಗಾವಿ ಗ್ರಾಮದಲ್ಲಿ ಜನ್ಮತಾಳಿದಶಿವಯೋಗಿಗಳ ಕಾಲಮಾನ 1836-1921. ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಶ್ರೀ ಗಚ್ಚಿನಮಠಕ್ಕೆ ಸಮರ್ಪಿತಗೊಂಡ ಶ್ರೀಗಳು ತಮ್ಮ 16ನೇ ವಯಸ್ಸಿನಲ್ಲಿ ಗುರುಗಳ ಅನುಗ್ರಹ ಪಡೆದುಶ್ರೀ ಮುರುಘೇಂದ್ರ ದೇವರಾದರು. ನಾಲ್ಕು ವರ್ಷಗಳ ನಂತರ 20ನೇ ವಯಸ್ಸಿನಲ್ಲಿಶ್ರೀಮಠದ 7ನೇ ಶ್ರೀಗಳಾದ ಶ್ರೀ ಗುರುಶಾಂತ ಮಹಾಸ್ವಾಮಿಗಳಿಂದ ಶಿವಯೋಗದೀಕ್ಷೆಪಡೆದು, ಗುರುಗಳ ಆಶೀರ್ವಾದ ಪಡೆದು ಸಂಚಾರ ಹೊರಟರು.ಅಥಣಿಯಿಂದ ಸಂಚಾರ ಹೊರಟ ಶಿವಯೋಗಿಗಳು ಜಮಖಂಡಿ ಸಮೀಪದಕಂಕಣವಾಡಿಯ ಗುಹೇಶ್ವರ ಗಡ್ಡೆ ಎಂಬ ಅರಣ್ಯದಲ್ಲಿ ತಪಸ್ಸುಮಾಡಿ ಮತ್ತೆ ಸಂಚಾರಹೊರೆಟು 31 ವರ್ಷಗಳ ಕಾಲ ನಾಡಿನಾದ್ಯಂತ ಸಂಚರಿಸಿ ಅಂಕಲಗಿಯ ಶ್ರೀ ಅಡವಿಮಹಾಸ್ವಾಮಿಗಳನ್ನು ದರ್ಶಿಸಿ ಅಥಣಿಗೆ ಹಿಂತಿರುಗಿದರು. ಅಗಲೇ ಶ್ರೀ ಗುರುಶಾಂತಮಹಾಸ್ವಾಮಿಗಳು ಲಿಂಗೈಕ್ಯರಾಗಿ ಎರಡನೇ ಚನ್ನಬಸವ ಮಹಾಸ್ವಾಮಿಗಳುಅಧಿಕಾರದಲ್ಲಿದ್ದರು.ಶ್ರೀ ಮುರುಘೇಂದ್ರ ಶಿವಯೋಗಿಗಳ ಬರುವಿಕೆಯನ್ನೇ ಕಾಯುತ್ತಿದ್ದ ಶ್ರೀಚನ್ನಬಸವ ಮಹಾಸ್ವಾಮಿಗಳು ಶಿವಯೋಗಿಗಳಿಗೆ ಶ್ರೀಮಠದ ಪೀಠವನ್ನು ವಹಿಸಿಕೊಳ್ಳುವಂತೆಕೋರಿದರು. ಆದರೆ ಶಿವಯೋಗಿಗಳು ಅದನ್ನು ನಿರಾಕರಿಸಿ ಭಕ್ತ ಸಮುದಾಯದಸಿದ್ದಲಿಂಗಪ್ಪರಿಗೆ ಪಟ್ಟ ಕಟ್ಟಿ ಶ್ರೀ.ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳೆಂಬ ಅಭಿಧಾನನೀಡಿದರು. ಶಿವಯೋಗಿಗಳು ಹಾಗೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳದು ಅತ್ಯುತ್ತಮ ಗುರುಶಿಷ್ಯರ ಸಂಬಂದ. ಶಿವಯೋಗಿಗಳು ಆಜ್ಞೆ ಮಾಡುವಷ್ಟರಲ್ಲಿ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು ಕಾರ್ಯ ಪೂರೈಸಿ ಬಿಡುತ್ತಿದ್ದರು.ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಮಾರ್ಗದರ್ಶಕರಾಗಿ ಶ್ರೀಮಠದಲ್ಲೇ ಉಳಿದಶಿವಯೋಗಿಗಳು ಭಕ್ತರ ಪಾಲಿನ ದೇವರಾದರು. ಶಿವಯೋಗಿಗಳಿಗೆ ಬಸವಣ್ಣನವರವಚನಗಳೆಂದರೆ ಪಂಚಪ್ರಾಣ. ಬಸವ ತತ್ವಗಳನ್ನು ಭಕ್ತರಿಗೆ ವಿವರಿಸುತ್ತ ಸೂಕ್ತಮಾರ್ಗದರ್ಶನ ನೀಡುತ್ತಿದ್ದರು. ಇವರ ಶಿಷ್ಯಪರಂಪರೆ ಬಹು ದೊಡ್ಡದು, ಅವರಲ್ಲಿ ಪ್ರಮುಖವಾಗಿ ಧಾರವಾಡದ ಶ್ರೀ ಮೃತ್ಯುಂಜಯಪ್ಪನವರು ಶಿವಯೋಗಿಗಳ ಕೃಪಾಶಿರ್ವಾದದಿಂದದ್ವಿತೀಯ ಶಿವಯೋಗಿಗಳೆನಿಸಿದರು.ಇನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶಿವಯೋಗಿಗಳ ಮಾರ್ಗದರ್ಶನದಲ್ಲಿಶ್ರೀ ಗಚ್ಚಿನ ಮಠವನ್ನು ಉತ್ತುಂಗಕ್ಕೆ ಕೊಂಡೊಯ್ದರು. ಶ್ರೀಮಠವನ್ನು ಸದಾ ಚಟುವಟಿಕೆಗಳಕೇಂದ್ರಬಿಂದುವಾಗಿಸಿದರು. ಕರ್ನಾಟಕಾಂದ್ರ, ಮಹಾರಾಷ್ಟ್ರ ಮೊದಲಾದ ಪ್ರಾಂತ್ಯಗಳ 6ಸಾವಿರಾರು ಮಠದ ವಟುಗಳಿಗೆ ವಿರಕ್ತಾಶ್ರಮವನ್ನು ದಯಪಾಲಿಸಿ ನವ ಮನ್ವಂತರವನ್ನೇನಿರ್ಮಿಸಿದರು. ಶಿವಯೋಗಿಗಳ ಹೆಸರು, ಕೀರ್ತಿ ದಶದಿಕ್ಕುಗಳಿಗೂ ಪಸರಿಸುವಲ್ಲಿ ಶ್ರೀಗಳುಭದ್ರಬುನಾದಿಯಾಗಿದ್ದರು. ಈ ರೀತಿಯಾಗಿ ಗುರು-ಶಿಷ್ಯರು ಶರಣ ಸಂಸ್ಕøತಿಯಅಮೃತಕಿರಣರಾಗಿದ್ದರು. ಗುರು-ಶಿಷ್ಯ-ಭಕ್ತ ಸಾಮರಸ್ಯದ ಸಂಕೇತವಾಗಿದ್ದರು. ಈ ಕೊಂಡಿಶಿವಯೋಗಿಗಳು 1921 ಏಪ್ರಿಲ್ 23ರಲ್ಲಿ ಲಿಂಗದೊಳಗಾಗುವದರೊಂದಿಗೆ ಕಳಚಿ ಬಿತ್ತು.ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳ ನಂತರ ಶ್ರೀ ಮ.ನಿ.ಪ್ರ. ಮೂರನೇಚನ್ನಬಸವ ಮಹಾಸ್ವಾಮಿಗಳು ಹಾಗೂ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳುಅಧಿಕಾರ ನಡೆಸಿದ್ದು ಇವರ ನಂತರ ಶ್ರೀ. ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳುಶ್ರೀಮಠದ ಅಧಿಕಾರ ನಡೆಸಿದರು. ಶ್ರೀಗಳು ಶ್ರೀಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಸರ್ವಾಂಗೀಣವಾಗಿ ಅಭಿವೃದ್ದಿಪಡಿಸಲು ಶ್ರಮಿಸಿದರು. ಇವರನಂತರ ಅಧಿಕಾರಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡಿದ್ದರು. ಮೊದಲು ಹಾವೇರಿ ಜಿಲ್ಲೆ ಅಗಡಿಯ ಶ್ರೀ ಅಕ್ಕಿಮಠದಪೀಠಾಧಿಪತಿಗಳಾಗಿದ್ದ ಶ್ರೀಗಳನ್ನು ಚಿತ್ರದುರ್ಗ ಬೃಹನ್ಮಠದ ಜಗದ್ಗುರುಗಳು ಶ್ರೀ ಗಚ್ಚಿನಮಠಕ್ಕೆ ನೇಮಕಗೊಳಿಸಿದರು. ಶ್ರೀಗಳು ಉಭಯ ಮಠಗಳನ್ನೂ ಅಭಿವೃದ್ದಿಕಾರ್ಯಗಳೊಂದಿಗೆ ಸಮರ್ಥವಾಗಿ ಮುನ್ನಡೆಸಿದರು. ಶ್ರೀಮಠದಲ್ಲಿ ಶತಮಾನದಕೊಂಡಿಯಾಗಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಕೃಪಾದೃಷ್ಠಿಯಿಂದ ಜೀವಿಸಿದ್ದ ಭಕ್ತಸಮುದಾಯದ ಶ್ರೀ ಶಿವಶಂಕರಜ್ಜರೆಂಬುವರು ಸದಾಕಾಲ ಮಠದಲ್ಲಿದ್ದು ಬಂದ ಭಕ್ತರಿಗೆಆಶೀರ್ವದಿಸುತ್ತಾ ಇತ್ತೀಚೆಗೆ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ 2013ರ ಮಾರ್ಚ್ 11 ರಂದು ಶ್ರೀಮಠದ ಪಟ್ಟಕ್ಕೆ ಬಂದಿರುವಶ್ರೀ. ಮ.ನಿ..ಪ್ರ. ಶಿವಬಸವ ಮಹಾಸ್ವಾಮಿಗಳು ಪರಂಪರೆಗೆ ಅನುಗುಣವಾಗಿ ಧಾರ್ಮಿಕಆಚರಣೆಗಳೊಂದಿಗೆ ಮುನ್ನಡೆಸುತ್ತಿದ್ದಾರೆ. ಗಚ್ಚಿನ ಮಠದ ವಿಶಾಲ ಆವರಣದಲ್ಲಿರುವಶ್ರೀ ಶಿವಯೋಗಿಗಳ ಗದ್ದುಗೆಗೆ ಪ್ರತಿನಿತ್ಯ ರಾತ್ರಿ ರುದ್ರಾಭಿಷೇಕದ ಪೂಜೆಯನ್ನುನಡೆಸಲಾಗುತ್ತಿದ್ದು, ದವನದ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ ಆಪಾರ ಭಕ್ತಸಮೂಹದೊಂದಿಗೆ ನಡೆಯುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು
Date of Birth :
14-9-1982
Place :
ಚಿಕ್ಕಅಣಜಿ, ಬ್ಯಾಡಗಿ ತಾ||
Pattadikara :
11-03-2013
Photo :

Programs

ಪ್ರತಿ ತಿಂಗಳು ಮಾಸಿಕ ಶಿವಾನುಭವ ಗೋಷ್ಠಿ
ದವನದ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ
ಆಷಾಡ ಶುದ್ಧ ಪ್ರತಿಪದಕ್ಕೆ ಶ್ರೀ ಶಿವಯೋಗಿಗಳ ಜನ್ಮದಿನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಡಿ.ಎಡ್. ಕಾಲೇಜ್

Photos

Full Address Kannada

ಶ್ರೀ ಗಚ್ಚಿನ ಮಠ ಗಚ್ಚಿನ ಮಠ ಗಲ್ಲಿ,
ಅಥಣಿ - 591 304
ಅಥಣಿ ತಾ||, ಬೆಳಗಾವಿ ಜಿಲ್ಲೆ

Map

Near by Places

ರಾಯಭಾಗ 40 ಕಿ.ಮೀ.
ಚಿಕ್ಕೊಡಿ 75 ಕಿ.ಮೀ.
ಬೆಳಗಾವಿ 150 ಕಿ.ಮೀ.
ವಿಜಯಪುರ 80 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!