Shree Hirematha, Toravi

Shree Hirematha, Toravi Claimed

ಶ್ರೀ ಹಿರೇಮಠ, ತೊರವಿ

Average Reviews

Description

ಶ್ರೀ ಹಿರೇಮಠ, ತೊರವಿ

ಕರ್ತೃ – ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 13ನೇಶತಮಾನದˉÉ್ಲೀ ಪ್ರಾರಂಭವಾಗಿರಬಹುದಾದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು, ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಭಕ್ತರನ್ನು ಸೆಳೆದಿದೆ. ಶ್ರೀ ಗುರುಪಾದಶಿವಾಚಾರ್ಯರು ಶ್ರೀಮಠದ ಕರ್ತೃಗುರುಗಳು ಎಂದು ಹೇಳˉÁಗಿದೆ. ಶ್ರೀ ಹಿರೇಮಠವು ಶ್ರೀಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಮಠವು ಅತೀ ಪುರಾತನದ್ದಾದರೂ ಸೂಕ್ತ ದಾಖˉÉಗಳ ಕೊರತೆಯಿಂದಇಲ್ಲಿಗೆ ಎರಡು ತˉÉಮಾರುಗಳ ಹಿಂದಿನ ಇತಿಹಾಸವನ್ನು ವಿವರಿಸಲು ಸಾಧ್ಯವಿಲ್ಲ. ಶ್ರೀಮಠದಆವರಣದಲ್ಲಿ ಆರು ಗದ್ದುಗೆಗಳಿದ್ದು ಅವುಗಳ ಆಧಾರದ ಮೇˉÉ ಈ ಮೊದಲು ಆರು ಜನಸ್ವಾಮಿಗಳು ಅಧಿಕಾರ ನಡೆಸಿದ್ದರೆಂದು ಹೇಳಬಹುದಾಗಿದೆ.ಪರಂಪರೆಯಲ್ಲಿ ಬರುವ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳಿಂದಮುಂದಿನ ಇತಿಹಾಸವು ಈಗ ಲಭ್ಯವಿದ್ದು ಶ್ರೀಗಳು ಆಚಾರ್ಯರ ತತ್ವಗಳನ್ನು ನಾಡಿಗೆ ನೀಡಿವೀರಶೈವ ಧರ್ಮದ ಆಚಾರ ವಿಚಾರಗಳನ್ನು ಭಕ್ತರು ಅನುಸರಿಸುವಂತೆ ಮಾಡಿದ್ದಾರೆ.ನಂತರ ಬಂದ ಶ್ರೀ ಷ.ಬ್ರ. ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು ಹೆಚ್ಚು ಧಾರ್ಮಿಕಕಾರ್ಯಗಳಿಗೆ ಒತ್ತುಕೊಟ್ಟು ತಮ್ಮ ಅನುಷ್ಠಾನ ಬಲದಿಂದ ಶ್ರೀ ಮಠವನ್ನು ಬೆಳೆಸಿದ್ದಾರೆ.ಆದರೆ ಶ್ರೀ ಮಠವು ಆರ್ಥಿಕವಾಗಿ ಹಿಂದುಳಿಯಿತು.ಶ್ರೀ ಮುರುಘೇಂದ್ರ ಶಿವಾಚಾರ್ಯರು 1977ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಸೋಮಶೇಖರ ಶಿವಾಚಾರ್ಯರಿಗೆ ಪಟ್ಟಾಧಿಕಾರ ಮಾಡಿ 1983ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಸೋಮೇಶ್ವರ ಶಿವಾಚಾರ್ಯರು ಶಿವಯೋಗ ಮಠದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಮಠಕ್ಕೆ ಮರಳಿ ಬಂದು ಪೂರ್ಣ ಜೀರ್ಣಾವಸ್ಥೆಯಲ್ಲಿದ್ದ ಶ್ರೀಮಠದ ಕಟ್ಟಡವನ್ನುಜೀರ್ಣಾಭಿವೃದಿ್ಧಗೊಳಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.ಹಾಗೂ ಛಟ್ಟಿ ಅಮಾವಾಸ್ಯೆ ನಂತರದ ಸಪ್ತಮಿ ತಿಥಿಗೆ ಲಿಂ. ಶ್ರೀ ಗುರು ಮುರುಘೇಂದ್ರಶಿವಾಚಾರ್ಯರ ಪುಣ್ಯಾರಾಧನೆ ಹಾಗೂ 11 ದಿನಗಳ ಕಾಲ ರುದ್ರಾಭಿಷೇಕ ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
5-11-1963
Place :
ತೊರವಿ, ವಿಜಯಪುರ ತಾ||
Pattadikara :
1977
Photo :

Programs

ಛಟ್ಟಿ ಅಮವಾಸ್ಯೆ ನಂತರ ಸಪ್ತಮಿ ತಿಥಿಗೆ ಶ್ರೀ ಗುರು ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು 11 ದಿನಗಳ ಕಾಲ ರುದ್ರಾಭಿಷೇಕ, ಪುರಾಣ, ಪ್ರವಚನ ಕಾರ್ಯಕ್ರಮ.

Photos

Full Address Kannada

ಶ್ರೀ ಹಿರೇಮಠ
ತೊರವಿ - 586 119
ವಿಜಯಪುರ ತಾ||, ಜಿ||

Map

Near by Places

ವಿಜಯಪುರ - 6 ಕಿ.ಮೀ.
ಅಥಣಿ - 70 ಕಿ.ಮೀ.

Statistic

35 Views
0 Rating
0 Favorite
0 Share
error: Content is protected !!