ವಿಜಯಪುರ ಜಿಲ್ಲೆ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ತಿಕೋಟಗ್ರಾಮದ ಮಧ್ಯಭಾಗದಲ್ಲಿ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿತ್ತೆಂದು ಹೇಳˉÁಗುವ ಶ್ರೀವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸುವಲ್ಲಿ ಶ್ರಮಿಸುತ್ತಿದೆ.ಶ್ರೀ ವಿರಕ್ತಮಠವು ಪುರಾತನ ಕಾಲದˉÉ್ಲೀ ಅಸ್ತಿತ್ವದಲ್ಲಿತ್ತೆಂದು ಹೇಳˉÁದರೂಕರ್ತೃಗುರುಗಳು ಯಾರು, ಅವರ ಕಾಲಮಾನ ಯಾವುದು, ಆನಂತರದ ಶ್ರೀಗಳು ಯಾರುಎಂಬುದರ ಬಗ್ಗೆ ದಾಖˉÉಗಳು ದೊರೆಯುವುದಿಲ್ಲ. ಆದರೆ ಶ್ರೀಮಠವು ಇತ್ತೀಚೆಗೆಸುಮಾರು 1997ರ ಸುಮಾರಿಗೆ ಶ್ರೀ ಮ.ನಿ.ಪ್ರ. ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದಪುನರ್ಸ್ಥಾಪನೆಗೊಂಡಿದೆ.ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು 1997ರ ಸುಮಾರಿಗೆ ತಿಕೋಟಕ್ಕೆ ಆಗಮಿಸಿಒಂದು ಶತಮಾನಕ್ಕೂ ಅಧಿಕ ಕಾಲ ಮಠಾಧೀಶರಿಲ್ಲದೇ ಸಂಪೂರ್ಣ ಜೀರ್ಣಗೊಂಡಿದ್ದಮಠವನ್ನು ಭಕ್ತರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜೀರ್ಣಾಭಿವೃದ್ಧಿಗೊಳಿಸಿ,ಧಾರ್ಮಿಕ ಆಚರಣೆಗಳನ್ನು ಪುನರಾರಂಭಿಸಿ 2002ರ ಮಾರ್ಚ್ 28ರಲ್ಲಿ ಪಟ್ಟಾಧಿಕಾರಸ್ವೀಕರಿಸಿದ್ದಾರೆ.ಶ್ರೀಮಠವನ್ನು ಪುನರ್ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದಶ್ರೀಗಳು ತಮ್ಮ ಧಾರ್ಮಿಕ ಚಿಂತನೆ ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿ ಪ್ರತಿ ರಾಷ್ಟ್ರೀಯ ಹಬ್ಬಗಳಆಚರಣೆಯನ್ನು ತಪ್ಪದೇ ಮಾಡುತ್ತಿದ್ದಾರೆ.