ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಉದಯೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ರಂಭಾಪುರಿಪೀಠದ ಶಾಖಾಮಠವಾಗಿರುವ ಶ್ರೀ ಉದಯ ಲಿಂಗೇಶ್ವರ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಉದಯೇಶ್ವರ ಶಿವಾಚಾರ್ಯರು ಶಿವಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರನ್ನು ಸೆಳೆದು ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಆದರೆ ಕರ್ತೃಗುರುಗಳ ನಂತರದ ಇತಿಹಾಸವನ್ನು ದಾಖಲಿಸಿಡದಕಾರಣ ಶ್ರೀಮಠದ ಪರಂಪರೆಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕರ್ತೃಗುರುಗಳನಂತರ ಶ್ರೀ ಪವಾಡೇಶ್ವರರು, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಾಗೂಶ್ರೀ ಚನ್ನಮಲ್ಲಯ್ಯ ಶಿವಾಚಾರ್ಯ ಸ್ವಾಮಿಗಳೆಂಬ ಕೆಲ ಹೆಸರುಗಳನ್ನು ದಾಖಲಿಸಬಹುದು.ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಉದಯಲಿಂಗೇಶ್ವರ ಮಠವುಮರದ ಕೆತ್ತನೆಯ ಬೃಹದಾಕಾರದ ಕಂಬಗಳಿಂದ ನಿರ್ಮಿಸಲ್ಪಟ್ಟಿದೆ. ಇಪ್ಪತ್ತೆಂಟು ಅಂಕಣಗಳನ್ನೊಳಗೊಂಡ ತೊಟ್ಟಿಯಾಕಾರದ ಈ ಮಠದ ಕಟ್ಟಡ ಭವ್ಯವಾಗಿ ವಿಶಾಲವಾಗಿನಿರ್ಮಿಸಲ್ಪಟ್ಟಿದೆ. ಹಾಗೂ ಶ್ರೀಮಠದಲ್ಲಿ ಶ್ರೀ ರೇಣುಕಾಚಾರ್ಯ ಮೂರ್ತಿಯನ್ನುಪ್ರತಿಷ್ಠಾಪಿಸˉÁಗಿದ್ದು ಆಕರ್ಷಣೀಯವಾಗಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳುಅಥಣಿ ತಾಲ್ಲೂಕಿನ ಗುಂಡವಾಡಿಯವರಾಗಿದ್ದು ಶ್ರೀಮಠದ ಅಧಿಕಾರ ವಹಿಸಿಕೊಂಡುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಆವರಣದಲ್ಲಿ ಸ್ಥಾಪಿತಗೊಂಡಿರುವ ನಾಲ್ಕು ಗದ್ದುಗೆಗಳಿಗೆ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಯುಗಾದಿ ಅಮಾವಾಸ್ಯೆಗೆ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಆಯೋಜಿಸˉÁಗುತ್ತಿದ್ದು ಶ್ರಾವಣ ಮಾಸದಲ್ಲಿನಿತ್ಯ ಪುರಾಣ ಪ್ರವಚನ ನಡೆಯುತ್ತದೆ ಹಾಗೂ ಶ್ರೀಮಠದ ಜಾತ್ರೆಯು ಶಿವರಾತ್ರಿಯಲ್ಲಿವಿಜೃಂಭಣೆಯಿಂದ ಜರುಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Place :
ಗುಂಡವಾಡಿ, ಅಥಣಿ ತಾ||
Photo :
Programs
ಶಿವರಾತ್ರಿಗೆ ಶ್ರೀಮಠದ ಜಾತ್ರೆ.
ಯುಗಾದಿ ಅಮವಾಸ್ಯೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ, ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಉದಯಲಿಂಗೇಶ್ವರ
ಹಿರೇಮಠ ನಾಗಠಾಣ - 586 112
ವಿಜಯಪುರ ತಾ||, ಜಿ||