ವಿಜಯಪುರ ಜಿಲ್ಲೆಯ ಜಂಬಗಿ ಹೆಚ್. ಗ್ರಾಮದಲ್ಲಿ ಪರಮಪೂಜ್ಯ ಶ್ರೀಅಡವೀಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದುತನ್ನ ಧಾರ್ಮಿಕ ಆಚರಣೆಗಳಿಂದಾಗಿ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಅಡವೀಶ್ವರ ಮಹಾಸ್ವಾಮಿಗಳ ನಿರ್ದಿಷ್ಟ ಕಾಲಮಾನದಬಗ್ಗೆ ತಿಳಿದು ಬರುವುದಿಲ್ಲ. ಶ್ರೀಗಳು ತಪೋನಿಷ್ಠರಾಗಿದ್ದು ತಮ್ಮ ಶಿವಪೂಜಾ ನಿಷ್ಠತೆಯಿಂದಈ ಭಾಗದ ಭಕ್ತರಿಗೆ ಸೆಳೆದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಆದರೆ ಕರ್ತೃಗುರುಗಳನಂತರದ ಪರಂಪರೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲವಾದ್ದರಿಂದ ದಾಖಲಿಸಲುಸಾದ್ಯವಾಗುವುದಿಲ್ಲ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಅಡವೀಶ್ವರ ದೇವರು 1968ರ ಜೂನ್ 5ರಲ್ಲಿವಿಜಯಪುರ ತಾಲ್ಲೂಕಿನ ಜಂಬಗಿ ಹೆಚ್. ಗ್ರಾಮದಲ್ಲಿ ಜನಿಸಿದವರಾಗಿದ್ದು ಶ್ರೀಮಠದಉತ್ತರಾಧಿಕಾರಿಯಾಗಿ ನೇಮಕಗೊಂಡು ವಿದ್ಯಾಭ್ಯಾಸಕ್ಕೆ ತೆರಳಿದರು. ತದನಂತರ ತಮ್ಮವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿದ ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಗಳು ಪ್ರತಿನಿತ ್ಯ ಪೂಜಾಕಾರ್ಯಕ್ರಮಗಳೊಂದಿಗೆ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆಶ್ರಮಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಪ್ರತಿಅಮಾವಾಸ್ಯೆ, ಹುಣ್ಣಿಮೆ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮನಡೆಸುತ್ತಾರೆ. ಹಾಗೂ ಶ್ರಾವಣದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ನಡೆಸುತ್ತಿದ್ದು ಆ ಮಾಸದಲ್ಲಿಯೇಶ್ರೀ ಕರ್ತೃಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ಹಮ್ಮಿಕೊಂಡು ಯಶಸ್ವಿಯಾಗಿಮಾಡುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಅಡವೀಶ್ವರ ದೇವರು
Date of Birth :
5-6-1968
Place :
ಜಂಬಗಿ ಹೆಚ್, ವಿಜಯಪುರ ತಾ||
Programs
ಪ್ರತಿ ಅಮವಾಸ್ಯೆಗೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಬಿಷೇಕ ಹಾಗೂ ಕರ್ತೃಗುರುಗಳ ಪುಣ್ಯಾರಾದನೆ.