Shree Gavimatha, Bommanhalli

Shree Gavimatha, Bommanhalli Claimed

ಶ್ರೀ ಗವಿಮಠ, ಬೊಮ್ಮನಹಳ್ಳಿ

Average Reviews

Description

ಶ್ರೀ ಗವಿಮಠ, ಬೊಮ್ಮನಹಳ್ಳಿ

ಕರ್ತೃ – ಶ್ರೀ ಷ.ಬ್ರ. ಜಡೆ ಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು

ಬೊಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 17ನೇ ಶತಮಾನದಲ್ಲಿಶ್ರೀ ಷ.ಬ್ರ.ಜಡೆಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಗವಿಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿಬೆಳೆದು ಬಂದಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.ಕರ್ತೃಗುರುಗಳಾದ ಶ್ರೀ ಶಾಂತೇಶ್ವರ ಸ್ವಾಮಿಗಳು ˉÉೂೀಕಸಂಚಾರ ಮಾಡುತ್ತಾ ಈಗ್ರಾಮದ ನಿರ್ಜನ ಪ್ರದೇಶದಲ್ಲಿ ನೆˉÉಗೊಂಡು ಅನುಷ್ಠಾನ ಕೈಗೊಂಡರು. ಶ್ರೀ ಶಾಂತೇಶ್ವರಸ್ವಾಮಿಗಳು ಉದ್ದನೆಯ ಜಡೆ ಬಿಟ್ಟಿದ್ದ ಕಾರಣ ಭಕ್ತರು ಶ್ರೀಗಳಿಗೆ ಶ್ರೀ ಜಡೆ ಶಾಂತೇಶ್ವರ ಸ್ವಾಮಿಗಳೆಂದು ಕರೆಯುತ್ತಾ ಅವರ ಧಾರ್ಮಿಕ ಚಟುವಟಿಕೆಗಳಲ್ಲಿ ಪಾˉÉ್ಗೂಳ್ಳುತ್ತಾ ಶ್ರೀಗಳ ಕೃಪೆಗೆಪಾತ್ರರಾದರು. ಶ್ರೀಗಳು ಆ ಕಾಲದಲ್ಲಿ ತುಂಬಾ ಪ್ರಭಾವಿಗಳಾಗಿದ್ದು ಇವರ ತಪೋಶಕ್ತಿಗೆಮನಸೋತ ಬಿಜಾಪುರ ಆದಿˉïಶಾಹಿಯು ಭೂಮಿಯನ್ನು ಉಂಬಳಿಯಾಗಿ ನೀಡಿದ್ದನು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರತೆಯಿಲ್ಲ, ಇಲ್ಲಿಗೆ ಎರಡುತˉÉಮಾರುಗಳ ಹಿಂದೆ ಶ್ರೀಮಠದ ಅಧಿಕಾರ ನಡೆಸಿದ್ದ ಶ್ರೀ ಗುರುಶಾಂತ ಶಿವಾಚಾರ್ಯಸ್ವಾಮಿಗಳಿಂದ ಮುಂದಿನ ವಿವರ ಲಭ್ಯವಿದೆ. ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯರುಜ್ಞಾನಿಗಳಾಗಿದ್ದು ವೀರಶೈವ ಧರ್ಮದ ಉದ್ಧಾರಕರಾಗಿದ್ದರು. ನಂತರ ಬಂದ ಶ್ರೀ ಷ.ಬ್ರ.ಶಾಂತಲಿಂಗ ಶಿವಾಚಾರ್ಯರು ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ 1972 ರಲ್ಲಿ ಲಿಂಗೈಕ್ಯರಾಗಿದ್ದಾರೆ.ಮುಂದೆ ಹತ್ತು ವರ್ಷಗಳ ಕಾಲ ಶ್ರೀಮಠವು ಖಾಲಿ ಉಳಿದಿದ್ದು 1982ರಲ್ಲಿ ಈಗಿನಶ್ರೀಗಳಾದ ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯರು ಪಟ್ಟಾಧಿಕಾರ ವಹಿಸಿಕೊಂಡು ಶ್ರೀಮoÀವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಗಳು ಪುರಾತನ ಕಾಲದ ಈ ಮಠದಲ್ಲಿ ಕರ್ತೃಗುರುಗಳುಹಾಗೂ ಪರಂಪರೆಯ ಗುರುಗಳು ಅನುಷ್ಠಾನ ಕೈಗೊಳ್ಳುತ್ತಿದ್ದ ಗವಿಯನ್ನು ಅಭಿವೃದ್ಧಿಪಡಿಸಿಅಲ್ಲಿ ತಮ್ಮ ನಿತ್ಯ ಪೂಜೆಯ ವ್ಯವಸ್ಥೆ ಮಾಡಿಕೊಂಡರು ಹಾಗೂ ಪರಂಪರೆಯ ಗುರುಗಳಗದ್ದುಗೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದ್ದಾರೆ. ಶ್ರೀ ಮಠದ ಜಾತ್ರೆಯು ಬಸವಜಯಂತಿಯಂದು ಜರುಗುತ್ತಿದ್ದು ಅಪಾರ ಸಂಖ್ಯೆಯ ಭಕ್ತರು ಪಾˉÉ್ಗೂಳ್ಳುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
20-6-1956
Place :
ಹುಲ್ಲೂರು, ಜೇವರ್ಗಿ ತಾ||
Pattadikara :
1982
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವಗೋಷ್ಠಿ.
ಬನದ ಹುಣ್ಣಿಮೆಗೆ ಶ್ರಿ ಹಿರಿಯ ಗುರುಗಳ ಪುಣ್ಯಾರಾಧನೆ. ಬಸವ ಜಯಂತಿ ಆಚರಣೆ ಮತ್ತು ಶ್ರೀಮಠದ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.

Photos

Full Address Kannada

ಶ್ರೀ ಗವಿಮಠ ಬೊಮ್ಮನಹಳ್ಳಿ,
ಗುಣಕಿ ಪೋಸ್ಟ್ - 586 108
ವಿಜಯಪುರ ತಾ||, ಜಿ||

Map

Near by Places

ತಿಂಡಗುಂದಿ - 4 ಕಿ.ಮೀ.
ಬೊಮ್ಮನಹಳ್ಳಿ ಕ್ರಾಸ್ - 2 ಕಿ.ಮೀ.
ವಿಜಯಪುರ - 24 ಕಿ.ಮೀ.

Statistic

100 Views
0 Rating
0 Favorite
0 Share
error: Content is protected !!