Shree Shantaveereshwara Hirematha, Sindgi

Shree Shantaveereshwara Hirematha, Sindgi Claimed

ಶ್ರೀ ಶಾಂತವೀರೇಶ್ವರ ಹಿರೇಮಠ, ಸಿಂಧಗಿ

Average Reviews

Description

ಶ್ರೀ ಶಾಂತವೀರೇಶ್ವರ ಹಿರೇಮಠ, ಸಿಂಧಗಿ

ಕರ್ತೃ – ಶ್ರೀ ಷ.ಬ್ರ. ಶಾಂತವೀರ ಪಟ್ಟದ ದೇವರು

ಸಿಂಧಗಿ ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಶಾಂತವೀರ ಪಟ್ಟದ ದೇವರಿಂದಸ್ಥಾಪನೆಯಾಗಿರುವ ಪುರಾತನ ಕಾಲದ ಶ್ರೀ ಶಾಂತವೀರೇಶ್ವರ ಹಿರೇಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನರನ್ನು ಸನ್ಮಾರ್ಗದತ್ತಕೊಂಡೊಯ್ಯುತ್ತಿದೆ. ಶ್ರೀಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳಾದ ನಂತರದ ಪರಂಪರೆಯಲ್ಲಿ ಒಟ್ಟು 12 ಜನ ಶ್ರೀಗಳು ಪಟ್ಟಕ್ಕೆಬಂದಿದ್ದು, 10ನೇ ಶ್ರೀಗಳ ತನಕ ಅಧಿಕಾರ ವಹಿಸಿಕೊಂಡಿರುವ ಶ್ರೀಗಳ ಬಗ್ಗೆ ಹೆಚ್ಚಿನ ಮಾಹಿತಿದೊರೆಯುವುದಿಲ್ಲ. 10ನೇ ಶ್ರೀಗಳಾದ ಶ್ರೀ ಷ.ಬ್ರ. ರೇವಣಸಿದ್ದ ಪಟ್ಟದ ದೇವರು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಮುನ್ನಡೆಸಿದ್ದು, ಮಠದ ಹಿಟ್ಟಿನ ಭಿಕ್ಷೆ ಕಾಯಕವನ್ನುಮಾಡುತ್ತಿದ್ದ ಬಾಲಕ ಶ್ರೀ ಲಿಂಗಯ್ಯರನ್ನು ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡು ಶಿವಯೋಗ ಮಂದಿರದಲ್ಲಿ ಧಾರ್ಮಿಕ ಶಿಕ್ಷಣವನ್ನು ಕೊಡಿಸುತ್ತಾರೆ.ಶ್ರೀ ಲಿಂಗಯ್ಯನವರು ಶಿವಯೋಗ ಮಂದಿರದ ಶ್ರೀ ಶಿವಬಸವ ಸ್ವಾಮಿಗಳ ನೆಚ್ಚಿನಶಿಷ್ಯರಾಗಿ ಅಪಾರ ಜ್ಞಾನವನ್ನು ಪಡೆದುಕೊಂಡು ಸಿಂಧಗಿಗೆ ಮರಳಿ ಶ್ರೀ ಶಾಂತವೀರ ಪಟ್ಟದದೇವರೆಂದು ಅಭಿದಾನ ಪಡೆದು ಅಧಿಕಾರಕ್ಕೆ ಬಂದರು. ಆದರೆ ಶ್ರೀಗಳು ತಮ್ಮ ಗುರುಗಳಾದಹಾವೇರಿಯ ಶಿವಬಸವ ಶ್ರೀಗಳ ಸೇವೆಗೋಸ್ಕರ ಹಾವೇರಿಗೆ ಬಂದವರು ಅˉÉ್ಲೀ ನೆˉÉಸಿಪ್ರಖ್ಯಾತ ಸಿಂಧಗಿ ಮಠವನ್ನು ಸ್ಥಾಪಿಸುತ್ತಾರೆ. ತದನಂತರ ಎರಡೂ ಮಠಗಳ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ದರಾಮ ದೇವರನ್ನು ನೇಮಿಸಿಕೊಂಡರಾದರೂ ಶ್ರೀ ಸಿದ್ದರಾಮ ದೇವರುಗದುಗಿನ ತೋಂಟದಾರ್ಯ ಮಠಕ್ಕೆ ಜಗದ್ಗುರುಗಳಾಗಿ ನೇಮಕಗೊಂಡರು. ಆ ನಿರಾಶೆಯಲ್ಲಿಯೇ ಶ್ರೀ ಶಾಂತವೀರ ಪಟ್ಟದ ದೇವರು 1980ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಶ್ರೀಶಾಂತವೀರ ಪಟ್ಟದ ದೇವರು ಲಿಂಗೈಕ್ಯರಾದ ನಂತರ ಶ್ರೀಮಠದ ಪಟ್ಟಕ್ಕೆ ಬಂದಿದ್ದುಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗೂಶಿವರಾತ್ರಿಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
Place :
ಸಿಂಧಗಿ, ವಿಜಯಪುರ ಜಿ.
Photo :

Programs

ಶಿವರಾತ್ರಿಗೆ ವಿಶೇಷ ಪೂಜೆ, ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.

Photos

Full Address Kannada

ಶ್ರೀ ಶಾಂತವೀರೇಶ್ವರ ಹಿರೇಮಠ
ಸಿಂಧಗಿ - 586 128
ವಿಜಯಪುರ ಜಿ||

Map

Near by Places

ದೇವರಹಿಪ್ಪರಗಿ - 21 ಕಿ.ಮೀ.
ಜೇವರ್ಗಿ - 60 ಕಿ.ಮೀ.
ವಿಜಯಪುರ - 60 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!