Shree Saranga Matha – Gachchina Matha

Shree Saranga Matha – Gachchina Matha Claimed

ಶ್ರೀ ಸಾರಂಗ ಮಠ - ಗಚ್ಚಿನ ಮಠ

Average Reviews

Description

ಶ್ರೀ ಸಾರಂಗ ಮಠ – ಗಚ್ಚಿನ ಮಠ

ಕರ್ತೃ – ಶ್ರೀ ಷ.ಬ್ರ. ಸಿದ್ಧ ಶಿವಾಚಾರ್ಯ ಸ್ವಾಮಿಗಳು

ಕರ್ನಾಟಕದ ಧಾರ್ಮಿಕ ಭೂಪಟದಲ್ಲಿ ಸಿಂಧಗಿ ಪಟ್ಟಣಕ್ಕೆ ತನ್ನದೇ ಆದಸ್ಥಾನಮಾನವಿದೆ. ಅದಕ್ಕೆ ಕಾರಣ ಇಲ್ಲಿ ಸ್ಥಾಪನೆಯಾಗಿರುವಂತಹ ವೀರಶೈವ ಮಠಗಳು.ಅವುಗಳಲ್ಲಿ ಪ್ರಮುಖವಾದದ್ದು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಸಾರಂಗಮಠ.ವಚನಶಾಸ್ತ್ರ ಪಿತಾಮಹ ಡಾ. ಫ.ಗು. ಹಳಕಟ್ಟಿಯವರು ಸಂಪಾದಿಸಿದ “ಸಾರಂಗಮಠಾಧೀಶರು” ಎಂಬ ಕೃತಿಯಲ್ಲಿ ದಾಖಲಿಸಿರುವಂತೆ ಶ್ರೀ ಸಾರಂಗದೇವ ಎಂಬಶಿವಯೋಗಿಗಳು ˉÉೂೀಕಸಂಚಾರದಲ್ಲಿದ್ದ ಸಂದರ್ಭದಲ್ಲಿ ಸಿಂಧಗಿ ಪಟ್ಟಣಕ್ಕೆ ಆಗಮಿಸಿ ಅಲ್ಲಿನದೇವಾಲಯ ಒಂದರಲ್ಲಿ ಅಡಗಿದ್ದ ಏಳು ಜಡೆಯ ರಾಕ್ಷಸನನ್ನು ಓಡಿಸಿ ಆ ದೇವಾಲಯವನ್ನುಮಠವನ್ನಾಗಿ ಪರಿವರ್ತಿಸಿ ಆ ಮಠಕ್ಕೆ ಶ್ರೀ ಷ.ಬ್ರ. ಸಿದ್ದ ಶಿವಾಚಾರ್ಯ ಸ್ವಾಮಿಗಳನ್ನುನೇಮಿಸಿದರೆಂದು ತಿಳಿದುಬರುತ್ತಷದೆ.ಹೀಗೆ ಶ್ರೀ ಸಿದ್ದ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾರಂಭಗೊಂಡ ಶ್ರೀ ಮಠದಪರಂಪರೆಯು ಇಲ್ಲಿನವರೆಗೂ 17 ಜನ ಶ್ರೀಗಳನ್ನು ಕಂಡಿದ್ದು ಇಂದು ನಾಡಿನ ಪ್ರಮುಖಮಠವಾಗಿ ಗುರುತಿಸಿಕೊಂಡಿದೆ. ಇನ್ನು ಶ್ರೀಮಠದ ಪರಂಪರೆಯಲ್ಲಿ 17 ಜನ ಶ್ರೀಗಳನ್ನುಗುರುತಿಸುವಾಗ ಇನ್ನೊಬ್ಬ ಪ್ರಮುಖ ಶ್ರೀಗಳು ಕಾಣಸಿಗುವುದಿಲ್ಲ. ಅವರೇ ಶ್ರೀ ಪದ್ಮರಾಜಒಡೆಯರು. ಜನಪದರ ಬಾಯಿಯಲ್ಲಿ ಉಳಿದೆˉÁ್ಲ ಶ್ರೀಗಳಿಗಿಂತ ಶ್ರೀ ಪದ್ಮರಾಜ ಒಡೆಯರಹೆಸರು ಪ್ರಮುಖವಾಗಿ ಆರಾಧಿಸಲ್ಪಡುತ್ತಿದ್ದು ಶ್ರೀಗಳ ಕರ್ತೃಗದ್ದುಗೆಯೂ ಮಠದಲ್ಲಿದೆ.ಶ್ರೀಮಠದ ಪರಂಪರೆಯ ಬಗ್ಗೆ ಬಹಳಷ್ಟು ಮಾಹಿತಿ ದೊರೆಯುವುದಿಲ್ಲವಾದರೂವಿಜಯಪುರದ ಆದಿˉïಶಾಹಿ ಅರಸರ ಕಾಲದಲ್ಲಿ ಶ್ರೀಮಠದ ಅಂದಿನ ಪೂಜ್ಯರ ಪ್ರಭಾವಕ್ಕೆಮನಸೋತ ಅರಸರು 400 ಎಕರೆ ಭೂಮಿದಾನ ನೀಡಿದ್ದ ಬಗ್ಗೆ ತಿಳಿದುಬರುತ್ತದೆ. 15ನೇಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯರು ರಾಂಪುರದ 6 ವರ್ಷದ ಬಾಲಕಸಾತವೀರಪ್ಪನನ್ನು ತಮ್ಮ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಅಕಾಲಿಕಮರಣವನ್ನಪ್ಪುತ್ತಾರೆ. ತದನಂತರ ಸಾತವೀರಪ್ಪನವರು ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯರೆಂಬ ನೂತನ ಅಭಿದಾನದೊಂದಿಗೆ ಶ್ರೀಮಠದ ಚುಕ್ಕಾಣಿ ಹಿಡಿದರು. ಆದರೆ ಆ ದಿನಗಳಲ್ಲಿಶ್ರೀ ಮಠದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು.ಶ್ರೀ ಚನ್ನವೀರ ಶಿವಾಚಾರ್ಯರು ಮಠದ ಪರಿಸ್ಥಿತಿಯನ್ನು ಕಂಡು ಎದೆಗುಂದದೇಸ್ವತಃ ತಾವೇ ಕೃಷಿ ಕಾಯಕಯೋಗಿಗಳಾಗಿ ಶ್ರೀಮಠದ ಆರ್ಥಿಕ ಪರಿಸ್ಥಿತಿಯನ್ನುಸುಧಾರಿಸಿದರು. ಶ್ರೇಷ್ಠ ಕೃಷಿಕರಾಗಿದ್ದ ಶ್ರೀಗಳಿಗೆ ಜಿˉÁ್ಲಮಟ್ಟದ ಪ್ರಗತಿಪರ ರೈತರೆಂಬ ಪ್ರಶಸ್ತಿನೀಡಿ ಗೌರವಿಸಿರುವುದು ಗಮನಾರ್ಹ ಸಂಗತಿ. ಶ್ರೀಗಳು ತಮ್ಮ ಕಾಯಕಯೋಗದಿಂದ ಶ್ರೀಮಠ ಮತ್ತು ಸಮಾಜಗಳೆರಡನ್ನೂ ಬೆಳೆಸಿ ಅದಕ್ಕೋಸ್ಕರ ಹಲವಾರು ಯೋಜನೆಗಳನ್ನುಹಾಕಿಕೊಂಡು ದುಡಿದರು.ತಮ್ಮ ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಶ್ರೀಗಳು ತಮ್ಮಂತೆಯೇ ಇತರಮಕ್ಕಳಿಗೂ ಆಗಬಾರದೆಂದು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮುಂದಾದರು. 1926ರˉÉ್ಲೀಮಠದ ಆವರಣದಲ್ಲಿ ಆಂಗ್ಲೋ-ವರ್ನಾಕ್ಯುಲರ್ ಸ್ಕೂˉï ಪ್ರಾರಂಭಿಸಿದರು. ವಿದ್ಯಾರ್ಥಿಗಳಊಟ ಮತ್ತು ವಸತಿಗಾಗಿ ಮಠದಲ್ಲಿ ಶ್ರೀ ಪದ್ಮರಾಜ ಫ್ರೀ ಬೋರ್ಡಿಂಗ್ ಪ್ರಾರಂಭಿಸಿದರು.ಹಾಗೂ ಸಿಂದಗಿಯಲ್ಲಿ ತಾಲ್ಲೂಕ ಶಿಕ್ಷಣ ಪ್ರಸಾರಕ ಮಂಡಳಿಯನ್ನು ಸ್ಥಾಪಿಸಿ ಅದರಅಡಿಯಲ್ಲಿ ಹೈಸ್ಕೂˉï ಪ್ರಾರಂಭಿಸಿದರು. ನಂತರ 1969ರಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಈ ಭಾಗದಮಕ್ಕಳ ಶಿಕ್ಷಣ ಮಟ್ಟವನ್ನು ಉನ್ನತೀಕರಿಸಿದರು.ಹೀಗೆ ತಮ್ಮ ಕಾರ್ಯಗಳಿಂದಾಗಿ ಮನೆಮಾತಾದ ಶ್ರೀ ಚೆನ್ನವೀರಶಿವಾಚಾರ್ಯರು 1989ರ ನವೆಂಬರ್ 18ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಪ್ರಭುಸಾರಂಗದೇವ ಶಿವಾಚಾರ್ಯರನ್ನು ಪಟ್ಟಕ್ಕೆ ತಂದು 1972ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಗುರುಗಳ ಹಾದಿಯಲ್ಲಿಯೇಮುನ್ನಡೆಯುತ್ತಾ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿದ್ದಾರೆ.ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಮೂಲಕ ಶೈಕ್ಷಣಿಕ ಸೇವೆಯನ್ನುವಿಸ್ತರಿಸಿರುವ ಶ್ರೀಗಳು ಅನೇಕ ಶಾˉÁ ಕಾˉÉೀಜುಗಳನ್ನು ಪ್ರಾರಂಭಿಸಿದ್ದಾರೆ. ಸಿಂಧಗಿಯಹೊರಭಾಗದಲ್ಲಿ ಶಿಕ್ಷಣ ಸಂಸ್ಥೆಗಳ ಸಮುಚ್ಛಯವನ್ನು ಭವ್ಯವಾಗಿ ನಿರ್ಮಿಸಿರುವ ಶ್ರೀಗಳುಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನವನ್ನೂ ಸ್ಥಾಪಿಸಿ ಆ ಮೂಲಕ ಸಾಹಿತ್ಯಿಕವಾಗಿಯೂಕಾರ್ಯತತ್ಪರರಾಗಿದ್ದಾರೆ. ಆ ಮೂಲಕ ಶ್ರೀಮಠವನ್ನು ಕೇವಲ ಧಾರ್ಮಿಕವಾಗಿ ಅಲ್ಲದೇಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕವಾಗಿಯೂ ಗುರುತಿಸುವಂತೆಮಾಡಿರುವುದು ಶ್ರೀಗಳ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ. ಇದಕ್ಕೆ ಕೊಡುಗೆಯಾಗಿ ಶ್ರೀಮಠದಭಕ್ತವೃಂದ 2014ರ ಅಕ್ಟೋಬರ್ 24ರಿಂದ ಡಿಸೆಂಬರ್ 18ರವರೆಗೆ ಶ್ರೀಗಳ ಪಟ್ಟಾಧಿಕಾರದರಜತ ಮಹೋತ್ಸವವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
22-8-1959
Pattadikara :
18-11-1989
Photo :

Programs

ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಶಿವರಾತ್ರಿ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಪುರಾಣ ಪ್ರವಚನ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ / ಪದವಿ ಪೂರ್ವ / ಪದವಿ ಕಾಲೇಜು ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸಾರಂಗ ಮಠ-ಗಚ್ಚಿನ ಮಠ
ಸಿಂಧಗಿ - 586 128 ವಿಜಯಪುರ ಜಿ||

Map

Near by Places

ದೇವರಹಿಪ್ಪರಗಿ - 21 ಕಿ.ಮೀ.
ಜೇವರ್ಗಿ - 60 ಕಿ.ಮೀ.
ವಿಜಯಪುರ - 60 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!