ವಿಜಯಪುರ ಜಿˉÉ್ಲ ಕೊಕಟನೂರು ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀಮಡಿವಾಳೇಶ್ವರ ಗದ್ದುಗೆ ಮಠವು ಪುರಾತನ ಕಾಲದ್ದಾಗಿದ್ದು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನರನ್ನು ಸನ್ಮಾರ್ಗದಲ್ಲಿಕೊಂಡೊಯ್ಯುತ್ತಿದೆ. 12ನೇ ಶತಮಾನದ ಕˉÁ್ಯಣ ಕ್ರಾಂತಿಯ ಪ್ರಮುಖರಲ್ಲಿ ಒಬ್ಬರಾದಮಹಾಶಿವಶರಣ ಶ್ರೀ ಮಡಿವಾಳ ಮಾಚಿದೇವರು ಇಲ್ಲಿ ಅನುಷ್ಠಾನಗೊಂಡು ಶ್ರೀಮಠವನ್ನುಸ್ಥಾಪಿಸಿದ್ದಾರೆ ಎಂದು ಹೇಳˉÁಗುತ್ತದೆ.ಪರಮಪೂಜ್ಯ ಶ್ರೀ ಮಡಿವಾಳ ಮಾಚಿದೇವರು ಅಲ್ಲಮ ಪ್ರಭುದೇವರು ಹಾಗೂಬಸವಣ್ಣನವರ ಸಮಕಾಲೀನರು. ಅವರ ವಚನ ಸಾಹಿತ್ಯವು ನಾಡಿನ ಅಮೂಲ್ಯ ಸಾಹಿತ್ಯವಾಗಿವೆ. ಕˉÁ್ಯಣದಲ್ಲಿ ಕ್ರಾಂತಿಯಾದಾಗ ವಚನ ಸಾಹಿತ್ಯದ ರಕ್ಷಣೆಗಾಗಿ ಚದುರಿದಶಿವಶರಣರು ಒಂದೊಂದು ಭಾಗಕ್ಕೆ ಹೋಗಿ ನೆˉÉಸುತ್ತಾರೆ. ಹೀಗೆ ಸಂಚಾರ ಹೊರಟ ಪೂಜ್ಯಶ್ರೀ ಮಡಿವಾಳ ಮಾಚಿದೇವರು ಕೊಕಟನೂರಿನಲ್ಲಿ ಕೆಲ ಕಾಲ ನೆˉÉಸಿ ಶ್ರೀಮಠವನ್ನು ಸ್ಥಾಪಿಸಿಮುನ್ನಡೆದಿದ್ದಾರೆ ಎಂದು ತಿಳಿದು ಬರುತ್ತದೆ.ಶ್ರೀಮಠದ ಗುರು ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳ ಲಭ್ಯತೆ ಇಲ್ಲ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳ ಬಗ್ಗೆ ಮಾತ್ರ ತಿಳಿದು ಬರುತ್ತದೆ.ಶ್ರೀಗಳು ಗುರು, ಲಿಂಗ, ಜಂಗಮದ ಬಗ್ಗೆ ಭಕ್ತರಲ್ಲಿ ಪ್ರಜ್ಞೆ ಮೂಡಿಸಿ ಈ ಮೂಲಕಶರಣಧರ್ಮದ ಆಚರಣೆಗಳನ್ನು ಪರಿಪಾಲಿಸುವಂತೆ ಮಾಡುತ್ತಾ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡಿ 1994 ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀಅಡವಯ್ಯ ಎಂಬುವವರು ಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿದ್ದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಡಿವಾಳೇಶ್ವರ ಮಹಾಸ್ವಾಮಿಗಳು 2009ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಭಜನೆಯನ್ನುಆಯೋಜಿಸುತ್ತಾರೆ. ಹಾಗೂ ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಪುರಾಣ ಪ್ರವಚನಗಳನ್ನು ನಡೆಸˉÁಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಡಿವಾಳೇಶ್ವರ ಮಹಾಸ್ವಾಮಿಗಳು
Date of Birth :
5-3-1978
Place :
ಕಡಕೋಳ, ಬ.ಬಾಗೇವಾಡಿ ತಾ||
Pattadikara :
12-2-2009
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಭಜನೆ. ಮಾಘ ಮಾಸದಲ್ಲಿ ಲಿಂ. ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ಪುರಾಣ ಪ್ರವಚನ.