Shree Tarapur Hirematha, Alamelu

Shree Tarapur Hirematha, Alamelu Claimed

ಶ್ರೀ ತಾರಾಪುರ ಹಿರೇಮಠ, ಅಲಮೇಲು

Average Reviews

Description

ಶ್ರೀ ತಾರಾಪುರ ಹಿರೇಮಠ, ಅಲಮೇಲು

ಕರ್ತೃ – ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿˉÉ್ಲಯ ಸಿಂಧಗಿ ತಾಲ್ಲೂಕಿನ ಅಲಮೇಲು ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳಿಂದ ಸುಮಾರು 18ನೇಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀಮದ್ ಕಾಶಿ ಪೀಠದ ಶಾಖಾ ಮಠವಾದ ಶ್ರೀತಾರಾಪುರ ಹಿರೇಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.ಕರ್ತೃಗುರುಗಳಾದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ತಾರಾಪುರದಿಂದ ಹೊರಟು ಸಂಚಾರ ಮಾಡುತ್ತಾ ಧರ್ಮೋಪದೇಶವನ್ನು ನೀಡುತ್ತಾ ಅಲಮೇಲುಗ್ರಾಮಕ್ಕೆ ಬಂದು ನೆˉÉನಿಲ್ಲುತ್ತಾರೆ. ಹೀಗೆ ತಾರಾಪುರದಿಂದ ಇಲ್ಲಿಗೆ ಸ್ಥಳಾಂತರಗೊಂಡ ಮಠಕ್ಕೆ“ಬಜಾರ್ ಮಠ” ವೆಂದು ಭಕ್ತರು ಕರೆಯತೊಡಗಿದ್ದು ಕಾಲಕ್ರಮೇಣ “ಶ್ರೀ ತಾರಾಪುರ ಮo”Àಎಂದು ಗುರುತಿಸˉÁಗುತ್ತಿದೆ.ಕತೃಗುರುಗಳು ಶ್ರೀ ಮಠವನ್ನು ಸ್ಥಾಪಿಸಿ ನಿತ್ಯಧರ್ಮೋಪದೇಶ ಕಾರ್ಯಕ್ರಮಗಳಮೂಲಕ ಭಕ್ತರಿಗೆ ವೀರಶೈವ ಧರ್ಮಾಚರಣೆಗಳ ಆಳ-ಅರಿವನ್ನು ನೀಡಿದ್ದಾರೆ. ಇವರಕಾಲದಲ್ಲಿ ಭಕ್ತರು ವೀರಶೈವ ಧರ್ಮದ ಆಚರಣೆಗಳನ್ನು ಕಲಿತು ಸನ್ಮಾರ್ಗದಲ್ಲಿ ನಡೆಯತೊಡಗಿದರು. ತದನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಮುರುಘೇಂದ್ರ ಶಿವಾಚಾರ್ಯಸ್ವಾಮಿಗಳು ಅಪಾರ ಜ್ಞಾನ ಉಳ್ಳವರಾಗಿದ್ದು “ಕಾಶಿ ಪಂಡಿv”À ರೆಂದು ಹೆಸರಾಗಿದ್ದರು.ಇವರ ನಂತರ ಅಧಿಕಾರಕ್ಕೆ ಬಂದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳುಸಂಸ್ಕøತ ವೇದಾಧ್ಯಯನ ಮಾಡಿದವರು. ಶ್ರೀಗಳು ಶ್ರೀಮಠದ ಹಳೇ ಕಟ್ಟಡವನ್ನು ತೆಗೆದುಹೊಸ ಕಟ್ಟಡವನ್ನು ನಿರ್ಮಿಸಿ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ನಂತರ ಶ್ರೀಮಡಿವಾಳ ಶಿವಾಚಾರ್ಯರು ಶ್ರೀಮಠದ ಅಧಿಕಾರ ವಹಿಸಿಕೊಂಡು ಮುನ್ನಡೆಸಿದ್ದಾರೆ.ಕೆಲಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿ ಬಂದವರು ಈಗಿನಶ್ರೀಗಳಾದ ಶ್ರಿ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು. ಖಾಲಿ ಉಳಿದಿದ್ದ ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಶ್ರೀಮಠದ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಶ್ರೀಗಳು ತಮ್ಮ ಪ್ರವಚನ ಕˉÉಯಿಂದ ವೀರಶೈವ ಧರ್ಮ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು.

Photos

Full Address Kannada

ಶ್ರೀ ತಾರಾಪುರ ಹಿರೇಮಠ
ಅಲಮೇಲು - 586 202
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಸಿಂಧಗಿ - 20 ಕಿ.ಮೀ.
ಅಫ್ಜಲ್‍ಪುರ - 20 ಕಿ.ಮೀ.
ವಿಜಯಪುರ - 80 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!