Shree Guru Samsthana Hirematha, Almelu

Shree Guru Samsthana Hirematha, Almelu Claimed

ಶ್ರೀ ಗುರು ಸಂಸ್ಥಾನ ಹಿರೇಮಠ, ಅಲಮೇಲು

Average Reviews

Description

ಶ್ರೀ ಗುರು ಸಂಸ್ಥಾನ ಹಿರೇಮಠ, ಅಲಮೇಲು

ಕರ್ತೃ – ಶ್ರೀ ಷ.ಬ್ರ. ಗುಹೇಶ್ವರ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿˉÉ್ಲ ಸಿಂಧಗಿ ತಾಲ್ಲೂಕಿನ ಅಲಮೇಲು ಗ್ರಾಮವು ಪುರಾತನ ಕಾಲದಿಂದಲೂ ವೀರಶೈವ ಧರ್ಮದ ಕೇಂದ್ರವಾಗಿತ್ತು ಎನ್ನಲು ಇಲ್ಲಿರುವ ಮಠಗಳೇ ಸಾಕ್ಷಿ. ಆಮಠಗಳಲ್ಲಿ ಒಂದಾದ ಶ್ರೀಗುರು ಸಂಸ್ಥಾನ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದ್ದು, ಶ್ರೀಮಠವನ್ನು ಶ್ರೀಷ.ಬ್ರ. ಗುಹೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ಥಾಪಿಸಿದರೆಂದು ಹೇಳˉÁಗುತ್ತಿದೆ.ಕರ್ತೃಗುರುಗಳು ಉಜ್ಜಯಿನಿಯಿಂದ ಹೊರಟು ಅಲ್ಲಲ್ಲಿ ನೆˉÉನಿಂತು ಪವಾಡಗಳನ್ನು ಮಾಡಿ ಸಂಚಾರ ಮಾಡುತ್ತಾ ಅಫಜಲಪುರಕ್ಕೆ ಆಗಮಿಸುತ್ತಾರೆ. ಅಲ್ಲಿ ಕೆಲದಿನನೆˉÉನಿಂತು ಅನುಷ್ಠಾನಗೊಂಡು ಅಲಮೇಲುವಿಗೆ ಆಗಮಿಸಿ ಶ್ರೀ ಗುರು ಸಂಸ್ಥಾನಹಿರೇಮಠವನ್ನು ಸ್ಥಾಪಿಸುತ್ತಾರೆ. ಅಂದು ಶ್ರೀ ಗುಹೇಶ್ವರ ಶಿವಾಚಾರ್ಯರಿಂದ ಸ್ಥಾಪಿತಗೊಂಡ ಮಠವು ಇಂದಿನವರೆಗೂ ಮುಂದುವರೆದುಕೊಂಡು ಬಂದಿದೆ.ಶ್ರೀಮಠವು ಪುರಾತನ ಕಾಲದ್ದಾದರೂ ಸ್ಥಾಪಿತಗೊಂಡ ನಿರ್ದಿಷ್ಟ ಕಾಲಮಾನದಬಗ್ಗೆಯಾಗಲೀ ಹಾಗೂ ನಂತರದ ಪರಂಪರೆಯಲ್ಲಿ ಬಂದಿರುವ ಗುರುಗಳ ಬಗ್ಗೆಯಾಗಲೀಹೆಚ್ಚಿನ ಮಾಹಿತಿಗಳು ದೊರಕುವುದಿಲ್ಲ. ಶ್ರೀಮಠದ ಆವರಣದಲ್ಲಿರುವ ಗದ್ದುಗೆಗಳಆಧಾರದ ಮೇˉÉ ಬಹುಶಃ ಪರಂಪರೆಯಲ್ಲಿ ಹದಿನಾರು ಶ್ರೀಗಳು ಆಡಳಿತ ನಡೆಸಿಈಗಿನವರು 17ನೆಯವರೆಂದು ತಿಳಿದುಬರುತ್ತದೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಮಳೇಂದ್ರಶಿವಾಚಾರ್ಯ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪಟ್ಟಕ್ಕೆಬಂದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದ ಆವರಣದಲ್ಲಿರುವ ಗದ್ದುಗೆಗಳಿಗೆ ನಿತ್ಯ ಪೂಜೆಗಳುನಡೆಯುತ್ತಿದ್ದು, ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.ಕಾರ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಶಿವರಾತ್ರಿ ನಂತರ ಲಿಂ. ಶ್ರೀಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆಗಳು ಆಯೋಜನೆಗೊಳ್ಳುತ್ತವೆ.

Swamiji

Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-8-1983
Place :
ಅಲಮೇಲು, ಸಿಂಧಗಿ ತಾ||
Pattadikara :
15-12-2006
Photo :

Programs

ಕಾರಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶಿವರಾತ್ರಿ ನಂತರ ಲಿಂ. ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಮಾಘ ಮಾಸದಲ್ಲಿ ಶ್ರೀಗಳ ಪಟ್ಟಾಧಿಕಾರ ವಾರ್ಷಿಕೋತ್ಸವ ನಿಮಿತ್ತ 21 ದಿನ ಪುರಾಣ ಪ್ರವಚನ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಗುರು ಸಂಸ್ಥಾನ ಹಿರೇಮಠ
ಅಲಮೇಲು - 586 202
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಸಿಂಧಗಿ - 20 ಕಿ.ಮೀ.
ಅಫ್ಜಲ್‍ಪುರ - 20 ಕಿ.ಮೀ.
ವಿಜಯಪುರ - 80 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!