ತಾಳಿಕೋಟೆ ಗ್ರಾಮದ ಮಧ್ಯಭಾಗದಲ್ಲಿ ಪುರಾತನ ಕಾಲದ ಶ್ರೀ ಖಾಸ್ಗತೇಶ್ವರಮಠವು ಅಸ್ತಿತ್ವದಲ್ಲಿದ್ದು ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿದೆ. ಶ್ರೀಮಠದ ಮೂಲಪುರುಷರು ಶ್ರೀ ಮ.ನಿ.ಪ್ರ. ರುದ್ರಸ್ವಾಮಿಗಳು. ಶ್ರೀಗಳು ಮುದ್ದೇಬಿಹಾಳದ ಹೊರವಲಯದಲ್ಲಿತಪಸ್ಸನ್ನಾಚರಿಸುತ್ತಿದ್ದಾಗ ಅಲ್ಲಿನ ನಾಡಗೌಡನಿಗೆ ತಮ್ಮ ಬೆತ್ತದಿಂದ ಭೂಮಿಗೆ ಗುದ್ದಿ ನೀರನ್ನುಬರಿಸಿ ಪವಾಡ ತೋರಿದ್ದಕ್ಕಾಗಿ ಗೌಡನು ಶ್ರೀಗಳಿಗೆ ಅಲ್ಲಿಯೇ ಮಠ ಕಟ್ಟಿಸಿಕೊಟ್ಟನೆಂದುಪ್ರತೀತಿ. ಹೀಗೆ ಸ್ಥಾಪಿತಗೊಂಡ ಮಠದ ಶಾಖಾಮಠಗಳು ನಾಡಿನಾದ್ಯಂತ ಪ್ರಾರಂಭಗೊಂಡವು. ಶಾಖಾಮಠವಾಗಿದ್ದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠವು ಇಂದುಕೇಂದ್ರಮಠವಾಗಿ ಉಳಿದ ಮಠಗಳಲ್ಲಿ ಆಚರಣೆಗಳನ್ನು ನಡೆಸುತ್ತಾ ಮುಂದುವರೆದಿದೆ.ಶ್ರೀಮಠದ ಪರಂಪರೆಯಲ್ಲಿ 15 ಜನ ಶ್ರೀಗಳು ಅಧಿಕಾರ ನಡೆಸಿದ್ದು 14ನೇಶ್ರೀಗಳಾದ ಶ್ರೀ ಖಾಸ್ಗತೇಶ್ವರ ಸ್ವಾಮಿಗಳ ಕಾರಣದಿಂದಾಗಿ ಶ್ರೀಮಠವು ಹೆಚ್ಚು ಪ್ರಸಿದ್ದಿಗೆಬಂದಿದೆ. ಶ್ರೀಗಳು ಹುಬ್ಬಳ್ಳಿ ಶ್ರೀ ಸಿದ್ದಾರೂಢ ಗುರುಗಳ ಸೇವೆ ಮಾಡಿ ಅವರ ಶಿಷ್ಯರಾಗಿದ್ದುಪರಿಪಕ್ವಗೊಂಡು ಗುರುಗಳಿಂದˉÉೀ ಖಾಸಗತ (ತನ್ನಷ್ಟಕ್ಕೆ ತಾನೇ ಆತ್ಮ ಜ್ಞಾನವನ್ನುಪಡೆದವನು) ಎಂಬ ಅಭಿದಾನ ಪಡೆದವರು. ಅಂದಿನಿಂದ ಶ್ರೀಗಳು ಶ್ರೀ ಖಾಸ್ಗತೇಶ್ವರಮಹಾಸ್ವಾಮಿಗಳೆಂದೇ ಹೆಸರು ಪಡೆದು ಸಮಾಜದ ಅಭಿವೃದ್ಧಿಯಲ್ಲಿ ನಿರತರಾದರು.ಶ್ರೀ ಖಾಸ್ಗತೇಶ್ವರ ಸ್ವಾಮಿಗಳ ನಂತರ ಶ್ರೀಮಠದ ಉತ್ತರಾಧಿಕಾರಿಯಾಗಿಶ್ರೀಮಠದ ಅಧಿಕಾರವನ್ನು ಮುನ್ನಡೆಸಿzವರು ಶ್ರೀ ಶಿವಬಸವ ದೇವರು. ಆದರೆ ಇವರುಪಟ್ಟಾಧಿಕಾರವನ್ನು ಸ್ವೀಕರಿಸದೇ ಸಂಸಾರಿಗಳಾಗಿದ್ದು ಕೂಡ ಶ್ರೀಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ನಂತರ ಶ್ರೀಮಠದ ಅಧಿಕಾರ ಸ್ವೀಕರಿಸಿದವರು ಇವರಸುಪುತ್ರರಾದ ಶ್ರೀ ವಿರಕ್ತ ಸ್ವಾಮಿಗಳು. ಶ್ರೀ ವಿರಕ್ತ ಸ್ವಾಮಿಗಳು ಅಪಾರ ಜ್ಞಾನಿಗಳಾಗಿದ್ದು, ತಮ್ಮಆಧ್ಯಾತ್ಮ ಜ್ಞಾನದಿಂದ ಶ್ರೀಮಠವನ್ನು ಹಾಗೂ ಸಮಾಜವನ್ನು ಅಭಿವೃದ್ಧಿಪಡಿಸಿದ್ದಾರೆ. ಇವರುಶ್ರೀಮಠದ ಕಟ್ಟಡವನ್ನು ವಿಸ್ತಾರಗೊಳಿಸಿದ್ದು ಶ್ರೀಮಠಕ್ಕೆ ಭವ್ಯತೆಯನ್ನು ತಂದುಕೊಟ್ಟಿದ್ದಾರೆ.ಹಾಗೂ ಶಾಖಾ ಮಠಗಳನ್ನು ಅಭಿವೃದ್ಧಿ ಪಡಿಸಿದ್ದು ಆರ್ಥಿಕ ಸ್ವಾವಲಂಬನೆ ತಂದಿದ್ದಾರೆ.ಪ್ರಸ್ತುತ ಶ್ರೀ ಸಿದ್ದಲಿಂಗ ದೇವರನ್ನು ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಿಸˉÁಗಿದ್ದುಶ್ರೀಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವಿರಕ್ತ ಸ್ವಾಮಿಗಳು
Date of Birth :
28-5-1953
Place :
ತಾಳಿಕೋಟೆ, ಮುದ್ದೇಬಿಹಾಳ ತಾ||
Pattadikara :
24-10-1979
Photo :
Swamiji Name :
ಪೂಜ್ಯ ಶ್ರೀ ಸಿದ್ದಲಿಂಗ ದೇವರು
Date of Birth :
8-06-2001
Place :
ತಾಳಿಕೋಟೆ, ಮುದ್ದೇಬಿಹಾಳ ತಾ||
Photo :
Programs
ಪ್ರತಿ ಸೋಮವಾರ, ಅಮವಾಸ್ಯೆಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಭಾದ್ರಪದ ಬಹುಳ ಪಂಚಮಿಯಂದು ಕತೃಗಳ ಪುಣ್ಯಾರಾಧನೆ ಹಾಗೂ ಪುರಾಣ.
ಆಷಾಢ ಮಾಸದ ಶುದ್ಧ ಪಂಚಮಿಯಿಂದ 7 ದಿನ ಸಪ್ತ ಭಜನೆ ಹಾಗೂ ಕೊನೆಯ ದಿನ ರಥೋತ್ಸವ. (ಪುರಾಣ ಪ್ರವಚನ) ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ.