ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀಮ.ಘ.ಚ. ಗುರುಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಪುರಾತನ ಕಾಲದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕಈಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಮ.ಘ.ಚ. ಗುರುಚನ್ನಬಸವ ಶಿವಾಚಾರ್ಯಮಹಾಸ್ವಾಮಿಗಳು ಮಹಾ ಮಹಿಮ ಪುರುಷರಾಗಿದ್ದು ತಮ್ಮ ತಪೋಬಲದಿಂದಶ್ರೀಮಠವನ್ನು ಸ್ಥಾಪಿಸಿ ಮುನ್ನಡೆಸಿದ್ದರು. ಶ್ರೀಮಠದ ರಂಬಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದಿರುವ ಶ್ರೀಮಠದ ಪೂರ್ವೇತಿಹಾಸವು ದಾಖˉÉಗಳಕೊರತೆಯಿಂದ ದೊರೆಯದಿರುವುದು ಬೇಸರದ ಸಂಗತಿ.ಪ್ರಸ್ತುತ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀಚನ್ನವೀರ ಸ್ವಾಮಿಗಳುಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಕಲ್ಪಸಿದ್ಧಿ ಮಾಡಿಕೊಂಡಿದ್ದಾರೆ. ಶ್ರೀಮಠದಕಟ್ಟಡವು ಸಂಪೂರ್ಣ ಜೀರ್ಣಾಗೊಂಡಿದ್ದು ಜೀರ್ಣಾಭಿವೃದ್ಧಿಗೊಳಿಸಲು ಉದ್ದೇಶಿಸಿಯೋಜನೆಯನ್ನು ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಹಾಗೂ ಹಲವಾರುವರ್ಷಗಳಿಂದ ಗೋಪುರ ಕಳಸವಿಲ್ಲದೆ ಕಳಾಹೀನವಾಗಿದ್ದ ಮಠಕ್ಕೆ ಗೋಪುರ ನಿರ್ಮಿಸುವಯೋಜನೆ ರೂಪಿಸಿದ್ದಾರೆ.ಶ್ರೀ ಚನ್ನವೀರ ಸ್ವಾಮಿಗಳು ಇತಿಹಾಸದ ಗರ್ಭವನ್ನು ಸೇರಹೊರಟು ಶ್ರೀಹಿರೇಮಠದ ಅಧಿಕಾರ ವಹಿಸಿಕೊಂಡು ಸೇವಾಸಂಪದರಾಗಿ ಇಂದು ಸೇವಾಕೈಂಕರ್ಯಪೂರೈಸುತ್ತಿದ್ದಾರೆ. ಮಠಕ್ಕೆ ನಯಾಪೈಸೆ ಆಸ್ತಿ ಇಲ್ಲದಿದ್ದರೂ ಮಠಗಳಿಗೆ ಆಸ್ತಿ ಮುಖ್ಯವಲ್ಲ.ಆದರ್ಶ ಭಕ್ತರೇ ನಿಜವಾದ ಆಸ್ತಿ ಎಂದು ಭಾವಿಸಿರುವ ಶ್ರೀಗಳು ತಮ್ಮ ವಾಗ್ಝರಿಯ ಮೂಲಕಎಲ್ಲ ಜಾತಿ-ಮತ-ಪಂಥದ ಜನರನ್ನು ಮಂತ್ರಮುಗ್ಧಗೊಳಿಸಿ ಶ್ರೀಮಠದಭಕ್ತರನ್ನಾಗಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣಮಾಸದಲ್ಲಿ ನಿತ್ಯ “ವಚನ ಶ್ರವಣ” ಕಾರ್ತೀಕ ಮಾಸದಲ್ಲಿ ಕರ್ತೃಗುರುಗಳ ಪುಣ್ಯಾರಾಧನೆಮಹೋತ್ಸವವನ್ನು ಆಯೋಜಿಸುತ್ತಾರೆ.
Swamiji
Swamiji Name :
ಪೂಜ್ಯ ಶ್ರೀ ಚನ್ನವೀರ ಸ್ವಾಮಿಗಳು
Date of Birth :
22-7-1977
Place :
ಮುದ್ದೇಬಿಹಾಳ ತಾ||
Photo :
Programs
ಕಾರ್ತೀಕ ಮಾಸದಲ್ಲಿ ಶ್ರೀ ಕರ್ತೃಗುರುಗಳ ಪುಣ್ಯಾರಾಧನೆ.
ಶ್ರಾವಣಮಾಸದಲ್ಲಿ ನಿತ್ಯ 'ವಚನ ಶ್ರವಣ'.
Photos
Full Address Kannada
ಶ್ರೀ ಹಿರೇಮಠ
ಕುಂಟೋಜಿ - 586 245
ಮುದ್ದೇಬಿಹಾಳ ತಾ|| ವಿಜಯಪುರ ಜಿ||