ವಿಜಯಪುರ ಜಿˉÉ್ಲಯ ರೋಡಗಿ ಗ್ರಾಮದ ಹೊರವಲಯದಲ್ಲಿ ಸುಮಾರು 17ನೇಶತಮಾನದಲ್ಲಿ ಸ್ಥಾಪನೆಯಾಗಿರಬಹುದಾದ ಶ್ರೀ ಶಿವಲಿಂಗೇಶ್ವರ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಹಿರೇಸಾವಳಗಿಯಿಂದ ಸಂಚಾರ ಹೊರಟ ಶ್ರೀ ಸಾವಳಗಿ ಶಿವಲಿಂಗೇಶ್ವರರುಪವಾಡ ಪುರುಷರಾಗಿದ್ದು ಅಲ್ಲಲ್ಲಿ ನೆˉÉಸಿ ಆ ಕ್ಷೇತ್ರಗಳನ್ನು ಜಾಗೃತಗೊಳಿಸುತ್ತಾ ಮುನ್ನಡೆಯುತ್ತಿದ್ದರು. ಹೀಗೆ ಸಂಚಾರ ಹೊರಟ ಶ್ರೀಗಳು ರೋಡಗಿಯಲ್ಲಿ ಕೆಲದಿನ ಅನುಷ್ಠಾನಗೊಂಡುಪವಾಡಗಳನ್ನು ಮಾಡುತ್ತಾ ಈ ಸ್ಥಳವನ್ನು ಜಾಗೃತ ಸ್ಥಳವನ್ನಾಗಿ ಮಾಡಿ ಮುನ್ನಡೆದಿದ್ದಾರೆ.ಶ್ರೀ ಶಿವಲಿಂಗೇಶ್ವರರು ನೆˉÉ ನಿಂತು ಅನುಷ್ಠಾನಗೊಂಡ ಸ್ಥಳದಲ್ಲಿ ಭಕ್ತರೇ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ. ಕಾˉÁನಂತರ ಶಿರಶ್ಯಾಡದಿಂದಇಲ್ಲಿಗೆ ಬಂದ ಶ್ರೀ ಶಿವಮೂರ್ತಿ ಸ್ವಾಮಿಗಳು ಧಾರ್ಮಿಕ ಆಚರಣೆಗಳನ್ನು ನಡೆಸಿ ಲಿಂಗೈಕ್ಯರಾಗಿದ್ದಾರೆ. ಆದರೆ ನಂತರದಲ್ಲಿ ಹಿರೇಸಾವಳಗಿಯ ಮಠದ ಮಠಾಧೀಶರೇ ಇಲ್ಲಿ ಧಾರ್ಮಿಕಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ.ಬಹುಕಾಲದ ನಂತರ ಶ್ರೀಮಠಕ್ಕೆ 1962ರಲ್ಲಿ ಹಿಂದಿನ ಶ್ರೀಗಳಾದ ಶ್ರೀಶಿವಮೂರ್ತಿ ಸ್ವಾಮಿಗಳು ಮಠಾಧೀಶರಾಗಿ ಅಧಿಕಾರವನ್ನು ವಹಿಸಿಕೊಂಡು ಶ್ರೀ ಸಾವಳಗಿಶಿವಲಿಂಗೇಶ್ವರರ ಅನೇಕ ಪವಾಡಗಳಿಂದ ಜಾಗೃತ ಸ್ಥಳವಾಗಿ ರೂಪುಗೊಂಡ ಶ್ರೀಮಠವನ್ನುಅಭಿವೃದ್ದಿಗೊಳಿಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಮಠಕ್ಕೆಸೆಳೆದು ಸನ್ಮಾರ್ಗ ತೋರಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು ಹಿರಿಯಶ್ರೀಗಳ ಕೃಪಾಶೀರ್ವಾದದಿಂದ ಪರಿಪಕ್ವಗೊಂಡು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸುತ್ತಿದ್ದಾರೆ. ಶ್ರೀಮಠದ ಆವರಣದಲ್ಲಿ ಶ್ರೀ ಸಾವಳಗಿ ಶಿವಲಿಂಗೇಶ್ವರರ ತೋರುಗದ್ದುಗೆಯನ್ನು ಸ್ಥಾಪಿಸˉÁಗಿದ್ದು ನಿತ್ಯ ಪೂಜೆ ನಡೆಯುತ್ತಿದೆ. ವೈಶಾಖ ಮಾಸದಲ್ಲಿ ಶ್ರೀಶಿವಲಿಂಗೇಶ್ವರ ಜಾತ್ರೆ ನಡೆಸˉÁಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು
Date of Birth :
1-6-1970
Place :
ರೋಡಗಿ, ಇಂಡಿ ತಾ||
Photo :
Programs
ಯುಗಾದಿ ಅಮವಾಸ್ಯೆಯಿಂದ ಅಕ್ಷಯ ತದಿಗಿ ಅಮವಾಸ್ಯೆವರೆಗೆ ನಿತ್ಯ ಪುರಾಣ ಪ್ರವಚನ. ಬಸವಜಯಂತಿಯಂದು ವಿಶೇಷ ಪೂಜೆ. ವೈಶಾಖ ಮಾಸದಲ್ಲಿ ಶ್ರೀಮಠದ ಜಾತ್ರೆ.