ವಿಜಯಪುರ ಜಿˉÉ್ಲ ಬಸವನಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಹೊರವಲಯದಲ್ಲಿರುವ ಶ್ರೀ ನಂದಿಮಠವು 1922ರಲ್ಲಿ ದೊಡ್ಡ ವರ್ತಕ ಶ್ರೀಮಠದ ಕುಟುಂಬಿಗುರುಪಾದಪ್ಪ ನಂದೀ ಎಂಬ ತ್ಯಾಗಜೀವಿಯ ಕಠಿಣ ಸಾಧನೆ. ಸಿದ್ದಿಯ ನೆˉÉಯಾಗಿ ಹಾಗೂಅವರ ಸಮಾಧಿಯ ಸ್ಥಳವಾಗಿ ನಿಂತಿದೆ.ಶ್ರೀಮಠವು ಶ್ರೀ ಗುರುಪಾದ ಶಿವಯೋಗಿಗಳ ಹಾಗೂ ಅವರ ಮುಕ್ತಿದಾತ ಗುರುಹಚ್ಯಾಳದ ಶ್ರೀ ವೀರಸಿದ್ದ ಶಿವಯೋಗಿಗಳ ತಪಃಶಕ್ತಿಯ ತಾಣವಾಗಿ ರೋಗಿಗಳ ರೋಗಕಳೆದು ಭಕ್ತರ ಇಷ್ಟಾರ್ಥ ಪೂರೈಸುತ್ತ ಬಂದಿದ್ದು, ಈ ನಾಡಿನ ಭಕ್ತ ಜನಕ್ಕೆ ಅವರ ಮನಸ್ಸಿನಸಾವಿರಾರು ಪ್ರಶ್ನೆಗಳಿಗೆ ಉತ್ತರವಾಗಿ ನಿಂತಿದೆ. ಇಲ್ಲಿಗೆ ಆಗಮಿಸುವ ಸಾವಿರಾರುಮನೋವೈಕಲ್ಯದ ರೋಗಿಗಳು ಗುಣಮುಖರಾಗಿ ಹಿಂತಿರುಗುವುದು ಆಶ್ಚರ್ಯವೇ ಸರಿ.ಉಭಯ ಶಿವಯೋಗಿಗಳ ನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡುಮುನ್ನಡೆಸಿದ ಶ್ರೀ ವೀರಸಂಗ ಶಿವಯೋಗಿಗಳು 1960 ರಲ್ಲಿ ಲಿಂಗೈಕ್ಯರಾದರು. ಇವರೆಲ್ಲರೂಹಾಕಿಕೊಟ್ಟ ಮಾರ್ಗವನ್ನೇ ಅನುಸರಿಸಿಕೊಂಡು ಬಂದವರು ಸದ್ಯದ ಮಠಾಧೀಶರಾದಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರು. ಚಿಕ್ಕಂದಿನˉÉ್ಲೀ ಶ್ರೀಮಠದಉತ್ತರಾಧಿಕಾರಿಗಳಾದ ಶ್ರೀಗಳು ವಿದ್ಯಾಭ್ಯಾಸದ ನಂತರ ಶ್ರೀಮಠಕ್ಕೆ ಮರಳುತ್ತಾರೆ.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸತತ ಪ್ರಯತ್ನದ ಫಲವಾಗಿ ಗುಡಿಸಲಿನರೂಪದಲ್ಲಿದ್ದ ಶ್ರೀಮಠ ಇಂದು ಒಂದು ಭವ್ಯ ಮಠವಾಗಿ ರೂಪಾಂತರಗೊಂಡು ನೋಡಲುನಿಬ್ಬೆರಗಾಗುವಂತೆ ಪರಿವರ್ತನೆಗೊಂಡಿದೆ. ಶ್ರೀಗಳು ಪ್ರತಿವರ್ಷ ಶ್ರೀಗುರು ವೀರಸಿದ್ದಶಿವಯೋಗಿಗಳ ಪುಣ್ಯಾರಾಧನೆಯನ್ನು ನಡೆಸುತ್ತಿದ್ದು ಆ ಸಂದರ್ಭದಲ್ಲಿ ಪುರಾಣ ಪ್ರವಚನ,ದೀಕ್ಷೆಗಳಂತಹ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಹಾಗೂ ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಾರೆ.ಚೈತ್ರಮಾಸದಲ್ಲಿ ನಡೆಯುವ ಶ್ರೀ ವೀರಸಿದ್ದ ಶಿವಯೋಗಿಗಳ ಪುಣ್ಯಾರಾಧನೆಸಂದರ್ಭದˉÉ್ಲೀ ಶ್ರೀ ಮಠದ ರಥೋತ್ಸವು ಜರುಗುತ್ತಿದ್ದು ಲಕ್ಷೋಪಲಕ್ಷ ಭಕ್ತರು ಪಾˉÉ್ಗೂಂಡುಗುರುಗಳ ಆಶೀರ್ವಾದ ಪಡೆಯುತ್ತಾರೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಪ್ರತಿಅಮಾವಾಸ್ಯೆಯಲ್ಲಿ 10.000ಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಗುರುಗಳ ಕೃಪೆಗೆಪಾತ್ರರಾಗುವುದು.
Swamiji
Swamiji Name :
ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Date of Birth :
9-9-1944
Place :
ವಡವಡಗಿ, ಬಸವನಬಾಗೇವಾಡಿ ತಾ||
Pattadikara :
1-8-1999
Photo :
Programs
ಪ್ರತಿನಿತ್ಯ ರುದ್ರಾಭಿಷೇಕ ಹಾಗೂ ಗಣಾರಾಧನೆ.
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಮಹಾದಾಸೋಹ.
ಚೈತ್ರಮಾಸದಲ್ಲಿ ಕತೃಗುರುಗಳ ಪುಣ್ಯಾರಾಧನೆ.
ನವ ರಾತ್ರಿಯಲ್ಲಿ ಶ್ರೀದೇವಿ ಪುರಾಣ ಪ್ರವಚನ.
ಕಾರ್ತೀಕ ಮಾಸದಲ್ಲಿ ಚಟ್ಟಿ ಅಮವಾಸ್ಯೆಯ ನಂತರ
ದೀಪೋತ್ಸವ.
ದವನದ ಹುಣ್ಣಿಮೆಗೆ ಪಂಚಮಿ ಮಿತಿಗೆ ಪುರಾಣ
ಮುಕ್ತಾಯ ಹಾಗೂ ರಥೋತ್ಸವ, ವಿವಿಧ
ಧಾರ್ಮಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ನಂದೀಮಠ
ವಡವಡಗಿ - 586 208
ಬಸವನಬಾಗೇವಾಡಿ ತಾ||, ವಿಜಯಪುರ ಜಿ||