ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಕುಕನೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 35 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 300ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಶ್ರೀ ಚನ್ನಮಲ್ಲೇಶ್ವರ ಮಠವು ತನ್ನ ಧಾರ್ಮಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಚನ್ನಮಲ್ಲೇಶ್ವರ ಮಠದ ಕರ್ತೃಗುರುಗಳು ಪೂಜ್ಯ ಶ್ರೀ ಚನ್ನಮಲ್ಲೇಶ್ವರಮಹಾಸ್ವಾಮಿಗಳು.ಕರ್ತೃಗುರುಗಳು ತಮ್ಮ ಅನುಷ್ಠಾನಗಳಿಂದ ಶಿವಯೋಗಸಿದ್ದಿಯನ್ನು ಪಡೆದುಕುಕನೂರು ಗ್ರಾಮಕ್ಕೆ ಆಗಮಿಸಿ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದ್ದು ತಮ್ಮಧಾರ್ಮಿಕ ಆಚರಣೆಗಳ ಮೂಲಕ ಸಂಸ್ಕಾರವಂತ ಸಮಾಜದ ನಿರ್ಮಾಣದಲ್ಲಿತೊಡಗಿಕೊಂಡಿದ್ದರು. ಶ್ರೀಗಳು ಅಪಾರ ಭಕ್ತಬಳಗವನ್ನು ಹೊಂದಿ ಲಿಂಗೈಕ್ಯರಾಗಿದ್ದುಇಂದಿಗೂ ಜನಮಾನಸದಲ್ಲಿ ಬೇರೂರಿದ್ದಾರೆ. ಇಂದಿಗೂ ಶ್ರೀಮಠವನ್ನು ಕರ್ತೃಗುರುಗಳಹೆಸರಿನಿಂದಲೇ ಕರೆಯಲಾಗುತ್ತಿದ್ದು ಮುಂದೆ ಪರಂಪರೆಯಲ್ಲಿ ಬಂದಿರುವ ಗುರುಗಳು ಕೂಡಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಶ್ರೀಮಠದಎರಡನೇ ಗುರುಗಳಾದ ಶ್ರೀ.ಷ.ಬ್ರ. ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳುಕರ್ತೃಗುರುಗಳಂತೆಯೇ ಧರ್ಮನಿಷ್ಠರಾಗಿ ಭಕ್ತರ ಉದ್ದಾರಕ್ಕೆ ಶ್ರಮಿಸಿದ್ದು ಮಠವನ್ನುಅಭಿವೃದ್ಧಿಪಡಿಸಿದ್ದಾರೆ. ಆದರೆ 2ನೇ ಶ್ರೀಗಳ ಐಕ್ಯಾನಂತರ ಶ್ರೀಮಠವು 150 ವರ್ಷಗಳ ಕಾಲಖಾಲಿ ಉಳಿದು ಧಾರ್ಮಿಕ ಆಚರಣೆಗಳು ಕುಂಠಿತಗೊಂಡವು.ಸುಮಾರು ಒಂದೂವರೆ ಶತಮಾನಗಳ ಕಾಲ ಖಾಲಿ ಉಳಿದಿದ್ದ ಶ್ರೀಚನ್ನಮಲ್ಲೇಶ್ವರ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸುತ್ತಿರುವವರು ಈಗಿನ ಶ್ರೀಗಳಾದ ಶ್ರೀ ಚನ್ನಮಲ್ಲ ಸ್ವಾಮಿಗಳು.ಶ್ರೀಗಳು ಶಿವಯೋಗಮಂದಿರ ಹಾಗೂ ಗದಗದ ವೀರೇಶ್ವರ ಪುಣ್ಯಾಶ್ರಮ ಮತ್ತು ಕಾಶಿಯಲ್ಲಿತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಸಂಸ್ಕøತ ಅಧ್ಯಯನ ಮಾಡಿ ಶ್ರೀಮಠಕ್ಕೆಮರಳಿದ್ದಾರೆ. ನಿತ್ಯ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿರುವ ಶ್ರೀಗಳು ಪ್ರತಿಅಮವಾಸ್ಯೆಗೆ ಭಜನಾ ಕಾರ್ಯಕ್ರಮ, ಶ್ರಾವಣದಲ್ಲಿ ಪ್ರವಚನ ಕಾರ್ಯಕ್ರಮ ಹಾಗೂ ಛಟ್ಟಿಅಮವಾಸ್ಯೆ ನಂತರ ನವಮಿಗೆ ಶ್ರೀಮಠದ ಜಾತ್ರೆ ನಡೆಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು
Date of Birth :
01-10-1977
Place :
ಕುಕನೂರು, ಜೇವರ್ಗಿ ತಾ||
Photo :
Programs
ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಭಜನೆ, ಪುರಾಣ ಪ್ರವಚನ
ಛಟ್ಟಿ ಅಮವಾಸೆ ನಂತರ 9ನೇ ದಿನ ನವಮಿಗೆ ಶ್ರೀ ಹಿರಿಯ
ಗುರುಗಳ ಪುಣ್ಯಾರಾಧನೆ ಹಾಗೂ ಶ್ರೀ ಮಠದ ಜಾತ್ರೆ
ಪ್ರತಿ ಅಮಾವಸ್ಯೆಗೆ ಭಜನಾ ಕಾರ್ಯಕ್ರಮ
Photos
Full Address Kannada
ಶ್ರೀ ಚನ್ನಮಲ್ಲೇಶ್ವರ ಮಠ
ಕುಕನೂರು - 585 325
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ