ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮವು ತಾಲ್ಲೂಕುಕೇಂದ್ರದಿಂದ 14 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವಪುರಾತನ ಕಾಲದ ಶ್ರೀ ಕರುಣೇಶ್ವರ ಹಿರೇಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿಬೆಳೆದಿದೆ. ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿರುವ ಶ್ರೀ ಕರುಣೇಶ್ವರ ಹಿರೇಮಠವು ಶರಣಸ್ಥಲ ಮಠವಾಗಿದೆ.ಪೂಜ್ಯ ಶ್ರೀ ಕರುಣೇಶ್ವರ ಮಹಾಸ್ವಾಮಿಗಳಿಂದ 16ನೇ ಶತಮಾನದಲ್ಲಿ (ಸುಮಾರು400 ವರ್ಷಗಳ ಇತಿಹಾಸ) ಸ್ಥಾಪಿತಗೊಂಡಿತೆಂದು ಹೇಳಲಾಗುವ ಶ್ರೀಮಠದಪರಂಪರೆಯಲ್ಲಿ ಬಹುತೇಕ ಶ್ರೀಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದುಅಧಿಕಾರಕ್ಕೆ ಬಂದಿರುವಂತೆ ತೋರುತ್ತದೆ. ಈ ಕಾರಣದಿಂದಾಗಿ ಶ್ರೀಮಠದ ಪರಂಪರೆಯಬಗ್ಗೆ ಸ್ಪಷ್ಟತೆಯಿಲ್ಲ. ಈಗಿನ ಶ್ರೀಗಳ ಪ್ರಕಾರ ಶ್ರೀಮಠದಲ್ಲಿ ಈವರೆಗೂ 8 ಜನ ಶ್ರೀಗಳುಅಧಿಕಾರ ನಡೆಸಿದ್ದು ಈಗಿನ ಶ್ರೀಗಳು ಒಂಬತ್ತನೆಯವರೆಂದು ಹೇಳಬಹುದು.ಪ್ರಸ್ತುತ ಶ್ರೀಗಳಾದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಇದೇ ಆಂದೋಲಾಗ್ರಾಮದವರಾಗಿದ್ದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿ ತದನಂತರಕಲಬುರಗಿಯಲ್ಲಿ ಕಾಲೇಜು ಶಿಕ್ಷಣ ಮತ್ತು ಹೊನ್ನಾಳಿಯ ಹಿರೇಕಲ್ಮಠದಲ್ಲಿ ಆಧ್ಯಾತ್ಮಶಿಕ್ಷಣವನ್ನು ಪೂರೈಸಿದ್ದಾರೆ. ನಂತರದಲ್ಲಿ ಶ್ರೀಮಠಕ್ಕೆ ಮರಳಿದ ಶ್ರೀಗಳು ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಮಠದ ಕಾರ್ಯವ್ಯಾಪ್ತಿಯನ್ನುವಿಸ್ತರಿಸಿದ್ದಾರೆ. ಶ್ರೀಗಳು ಶ್ರೀಮಠದ ಜೊತೆಯಲ್ಲಿ ಶ್ರೀರಾಮಸೇನೆಯ ಸಕ್ರಿಯಕಾರ್ಯಕರ್ತರೂ ಆಗಿದ್ದು ಧರ್ಮದ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಶ್ರೀಮಠದ ಎಂಟನೇ ಶ್ರೀಗಳಾದ ಪೂಜ್ಯ ಶ್ರೀ ಕರುಣಯ್ಯ ಮಹಾಸ್ವಾಮಿಗಳಮಾರ್ಗದರ್ಶನ ಹಾಗೂ ಆಶೀರ್ವಾದದಲ್ಲಿ ಬೆಳೆದುಬಂದಿರುವ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು ಪರಂಪರೆಯ ಹಾದಿಯಲ್ಲಿ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಜೊತೆಗೆ ಧರ್ಮ ಹಾಗೂ ಸಾಮಾಜದಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಶ್ರೀಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
01-02-1978
Place :
ಆಂದೋಲ, ಜೇವರ್ಗಿ ತಾ||
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ ಮತ್ತು
ಸಾಂಸ್ಕøತಿಕ ಕಾರ್ಯಕ್ರಮಗಳು
ಗೌರಿ ಹುಣ್ಣಿಮೆ ನಂತರ ಮಠದಲ್ಲಿ
ಶ್ರೀ ಕರುಣೇಶ್ವರ ರಥೋತ್ಸವ
ಶಿವರಾತ್ರಿಗೆ ಮಹಾಪೂಜೆ ಹಾಗೂ ಪ್ರವಚ£
Photos
Full Address Kannada
ಶ್ರೀ ಕರುಣೇಶ್ವರ ಹಿರೇಮಠ
ಆಂದೋಲಾ - 585 303
ಜೀವರ್ಗಿ ತಾ||, ಕಲಬುರಗಿ ಜಿಲ್ಲೆ